ಸುದ್ದಿಮೂಲ ವಾರ್ತೆ ರಾಯಚೂರು, ಅ.14:
ರಾಯಚೂರಿನ ಹಳೆಯ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ (ಡಿಡಿಪಿಐ) ಕಚೇರಿಯ ದಾಖಲಾತಿ ಕೊಠಡಿಗೆ ಬೆಂಕಿ ತಾಗಿ ಮಹತ್ವದ ದಾಖಲೆಗಳು ಸುಟ್ಟು ಕರುಕಲಾಗಿವೆ.
ಇಂದು ಬೆಳಿಗ್ಗೆೆ ದಟ್ಟ ಹೊಗೆ ಕಾಣಿಸಿಕೊಂಡಿದ್ದು ಸುತ್ತಮುತ್ತಲಿನ ಜನ ಇಲಾಖೆ ಅಧಿಕಾರಿಗಳ ಗಮನಕ್ಕೆೆ ತಂದಿದ್ದಾಾರೆ. ತಕ್ಷಣ ಅಗ್ನಿಿಶಾಮಕ ದಳಕ್ಕೆೆ ಕರೆ ಮಾಡಿದ್ದರಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಿಯಾದರೂ, ಅಷ್ಟರೊಳಗಾಗಲೆ ಮಹತ್ವದ ದಾಖಲೆಗಳಿರುವ ಕೊಠಡಿಯಲ್ಲಿ ಸಂಪೂರ್ಣ ಬೆಂಕಿ ಆವರಿಸಿ ಸುಟ್ಟು ಭಸ್ಮವಾಗಿವೆ.
ಶಿಥಿಲಗೊಂಡಿದ್ದರಿಂದ ಕಚೇರಿಯನ್ನು ಜಿಲ್ಲಾಾಡಳಿತ ಭವನಕ್ಕೆೆ ಸ್ಥಳಾಂತರಿಸಿದ್ದರಿಂದ ಕೆಲ ದಾಖಲೆಗಳು ಅಲ್ಲಿಯೆ ಇದ್ದವು ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹತ್ತಿಿದೆ ಎಂಬ ಅನುಮಾನವಿತ್ತುಘಿ. ಆದರೆ, ಯಾರೊ ಕಿಡಿಗೇಡಿಗಳು ದಾಖಲಾತಿ ಕೋಣೆಗೆ ಬೆಂಕಿ ಹಚ್ಚಿಿದ ಪರಿಣಾಮ ಮಹತ್ವದ ದಾಖಲೆ ಸುಟ್ಟು ಹೋಗಿವೆ ಎಂದು ಖುದ್ದು ಡಿಡಿಪಿಐ ಕೆ.ಡಿ. ಬಡಿಗೇರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.ಕಚೇರಿ ಸ್ಥಳಾಂತರವಾದ ಮೇಲೆ ಸಿಬ್ಬಂದಿ ಇಲ್ಲದ ಕಾರಣ ಪ್ರತಿನಿತ್ಯ ಸಂಜೆ, ರಾತ್ರಿಿ ಅಲ್ಲಿ ಅನೇಕ ಯುವಕರು ಕುಳಿತಿರುತ್ತಾಾರೆ. ಮಹತ್ವದ ದಾಖಲೆ ಕೊಠಡಿಗೆ ಭದ್ರತೆ, ಕನಿಷ್ಠ ಒಬ್ಬ ಭದ್ರತಾ ಸಿಬ್ಬಂದಿಯನ್ನಾಾದರೂ ನೇಮಿಸಿಕೊಳ್ಳದಿರುವುದಕ್ಕೆೆ ಸಾರ್ವಜನಿಕರು ಡಿಡಿಪಿಐ ನಿರ್ಲಕ್ಷಕ್ಕೆೆ ಆಕ್ರೋೋಶ ವ್ಯಕ್ತಪಡಿಸಿದ್ದಾಾರೆ. ಈಗಿರುವ ಕಚೇರಿಯಲ್ಲಿ ಸ್ಥಳದ ಆಭಾವ ಎದುರಾಗಿದ್ದರಿಂದ ದಾಖಲೆ ಇಲ್ಲಿಯೆ ಇರಿಸಲಾಗಿತ್ತುಘಿ. ಅಗತ್ಯವಿದ್ದಾಾಗ ದಾಖಲೆ ಕೊಂಡೊಯ್ಯಲಾಗುತ್ತಿಿತ್ತು ಎಂದು ಡಿಡಿಪಿಐ ಸಮರ್ಥಿಸಿಕೊಂಡಿದ್ದಾಾರೆ.
ಈ ಬಗ್ಗೆೆ ಸದರ ಬಜಾರ ಠಾಣೆಗೆ ಡಿಡಿಪಿಐ ದೂರು ದಾಖಲಿಸಿದ್ದಾಾರೆ. ಈ ಬಗ್ಗೆೆ ಪರಿಶೀಲಿಸಲಾಗುವುದು ಎಂದು ಠಾಣಾಧಿಕಾರಿ ತಿಳಿಸಿದ್ದಾಾರೆ.
ಡಿಡಿಪಿಐ ಹಳೆ ಕಚೇರಿಯಲ್ಲಿ ಕಿಡಿಗೇಡಿಗಳಿಂದ ಬೆಂಕಿ, ದಾಖಲೆ ಭಸ್ಮ
