ಸುದ್ದಿಮೂಲ ವಾರ್ತೆ
ಮೈಸೂರು, ಮೇ 30: ನಗರದ ವಿಜಯನಗರ ಬಡಾವಣೆಯ ವಾಟರ್ ಟ್ಯಾಂಕ್ ಸಮೀಪ ನಿರ್ಮಾಣ ಹಂತದ ಕಟ್ಟಡದ ನೀರಿನ ಸಂಪ್ನಲ್ಲಿ ಉದ್ಯಮಿ ಪುತ್ರನ ಶವ ಪತ್ತೆಯಾಗಿದೆ. ಇದು ಕೊಲೆ ಎಂದು ಶಂಕಿಸಲಾಗಿದೆ. ಹೆಬ್ಬಾಳು ಕೈಗಾರಿಕಾ ಪ್ರದೇಶದ ಸೆನ್ ಇಂಜಿನಿಯರಿಂಗ್ ವರ್ಕ್ಸ್ ಮಾಲಿಕ ಕೆ.ಎಂ. ಚೆರಿಯನ್ ಅವರ ಪುತ್ರ 35 ವರ್ಷದ ಕ್ರಿಸ್ಟೋ ಚೆರಿಯನ್ ಮೃತಪಟ್ಟ ವ್ಯಕ್ತಿ.
ವಿಜಯನಗರ ಒಂದನೇ ಹಂತದ ನಿವಾಸಿ ಆಗಿರುವ ಕ್ರಿಸ್ಟೋ ಚೆರಿಯನ್ 3 ದಿನಗಳ ಹಿಂದೆ ಮನೆಯಿಂದ ಹೊರಗೆ ಹೋದವರು ತಡರಾತ್ರಿಯಾದರೂ ವಾಪಾಸ್ ಬಂದಿರಲಿಲ್ಲ. ಕುಟುಂಬದವರು ಹುಡುಕಾಟ ನಡೆಸಿದ್ದಾರೆ. ಆದರೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ನಂತರ ಲರ್ನರ್ ಪಿಯು ಕಾಲೇಜ್ ಸಮೀಪ ನಿರ್ಮಾಣ ಹಂತದ ಕಟ್ಟಡದ ನೀರಿನ ಸಂಪ್ನಲ್ಲಿ ಕ್ರಿಸ್ಟೋ ಚೆರಿಯನ್ ಬಿದ್ದು ಮೃತಪಟ್ಟಿರುವುದು ಪತ್ತೆಯಾಗಿದೆ.
ವಿಜಯನಗರ ಠಾಣೆಯಲ್ಲಿ ಆಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದು,
ಪೊಲೀಸರು ತನಿಖೆ ನಡೆಸಿದ್ದಾರೆ.