ಸಿದ್ದರಾಮಯ್ಯ ಸಿಎಂ ಆಗಲಿ ಅಜಯ್ ಸಿಂಗ್ ಶಾಸಕರಾಗಲಿ ಅಭಿಮಾನಿ ಓರ್ವ ದೀರ್ಘ ದಂಡ ನಮಸ್ಕಾರ
ಯಡ್ರಾಮಿ:ತಾಲೂಕಿನ ನೇರಡಗಿ ಗ್ರಾಮದಲ್ಲಿ ರೇವಣಸಿದ್ದಪ್ಪ ಕಡಿಮನಿ ಎಂಬಾತ ಸಿದ್ದರಾಮಯ್ಯನ ಅಭಿಮಾನಿಯಾಗಿದ್ದು ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಲಿ ಮತ್ತು ಅಜಯ್ ಸಿಂಗ್ ಇನ್ನೊಂದು ಬಾರಿ ಶಾಸಕರಾಗಿ ಆಯ್ಕೆಯಾಗಲಿ ಎಂದು ಸುಮಾರು ಒಂದು ಕಿಲೋಮೀಟರ್ ಅವರಿಗೆ ಗ್ರಾಮದೇವತೆ ಶ್ರೀ ಕಾಳಿಕಾದೇವಿಗೆ ದೀರ್ಘದಂಡ ನಮಸ್ಕಾರ ಸೇವೆಗೈದು ಸಿದ್ದರಾಮಯ್ಯನವರ ಮೇಲೆ ಅಭಿಮಾನ ಹೆಚ್ಚಿಸಿದ್ದಾರೆ.
ಸಿದ್ದರಾಮಯ್ಯನ ಅಭಿಮಾನಿ ಓರ್ವ ರೇವಣಸಿದ್ದಪ್ಪ ಮಾತನಾಡಿ ನಾನು ಸಿದ್ದರಾಮಯ್ಯ ಮತ್ತು ಅಜಯ್ ಸಿಂಗ್ ಅವರ ಅಪ್ಪಟ ಅಭಿಮಾನಿಯಾಗಿದ್ದು ಮತ್ತೊಮ್ಮೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಜೊತೆಗೆ ಜೇವರ್ಗಿ ತಾಲೂಕಿನ ಶಾಸಕರಾಗಿ ಶಾಸಕ ಅಜಯ್ ಸಿಂಗ್ ಆಯ್ಕೆಯಾಗಬೇಕು ಎಂದು ನಾನು ನಮ್ಮೂರಿನ ಗ್ರಾಮ ದೇವತೆಯಾದ ಶ್ರೀ ಕಾಳಿಕಾದೇವಿಗೆ ದೀರ್ಘದಂಡ ನಮಸ್ಕಾರ ಸಲ್ಲಿಸಿದ್ದೇನೆ.
ಕರ್ನಾಟಕ ರಾಜ್ಯದ್ಯಂತ ಅತ್ಯುತ್ತಮ ಭಾಗ್ಯಗಳ ನೀಡಿದ ಏಕೈಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಜೇವರ್ಗಿ ಅಭಿವೃದ್ಧಿಪಥದಲ್ಲಿ ನಡೆಸುತ್ತಿರುವ ಶಾಸಕ ಅಜಯ್ ಸಿಂಗ್ ಅವರು ಮತ್ತೆ ಅಧಿಕಾರಕ್ಕೆ ಬರಲಿ ಜನರ ಸೇವೆ ಮಾಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಪುಂಡಪ್ಪ, ಅಶೋಕ ತೋಟದ, ಸೋಮಶೇಖರ್, ಮಾನಪ್ಪ, ಸಂತೋಷ್ ಗ್ರಾಮಸ್ಥರು ಹಿರಿಯರು ಉಪಸ್ಥಿತರಿದ್ದರು.