ವಿಧಾನಮಂಡಲ ಅಧಿವೇಶನ ಬಳಿಕ ಶೇ.10-12ರಷ್ಟು ಹೆಚ್ಚಿಸಲು ನಿರ್ಧಾರ
ಸುದ್ದಿಮೂಲ ವಾರ್ತೆ ಬೆಂಗಳೂರು, ಜು.22:
ರಾಜ್ಯ ರಸ್ತೆೆ ಸಾರಿಗೆ ಸಂಸ್ಥೆೆ ಮತ್ತು ಬಿಎಂಟಿಸಿ ಬಸ್ಸುಗಳ ಪ್ರಯಾಣ ದರವನ್ನು ಏರಿಕೆ ಮಾಡಲು ಸರ್ಕಾರ ತೀರ್ಮಾನಿಸಿದೆ.
ಈಗ ನಡೆಯುತ್ತಿಿರುವ ವಿಧಾನಮಂಡಲ ಅಧಿವೇಶನ ಮುಕ್ತಾಾಯವಾದ ನಂತರ ಸಾರಿಗೆ ಸಂಸ್ಥೆೆ ಬಸ್ಸುಗಳ ಪ್ರಯಾಣ ದರ ಶೇಕಡಾ 10 ರಿಂದ 12 ರಷ್ಟು ಏರಿಕೆಯಾಗಲಿದೆ ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.
ರಾಜ್ಯ ರಸ್ತೆೆ ಸಾರಿಗೆ ಸಂಸ್ಥೆೆ ಬಸ್ಸುಗಳ ಪ್ರಯಾಣದರವನ್ನು ಕಳೆದ ನಾಲ್ಕು ವರ್ಷಗಳಿಂದ ಏರಿಕೆ ಮಾಡಿಲ್ಲ. ಇದೇ ರೀತಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆೆ ಬಸ್ಸುಗಳ ಪ್ರಯಾಣ ದರವನ್ನು ಕಳೆದ ಹತ್ತು ವರ್ಷಗಳಿಂದ ಏರಿಕೆ ಮಾಡಿಲ್ಲ.
ಈ ಮಧ್ಯೆೆ ರಾಜ್ಯ ರಸ್ತೆೆ ಸಾರಿಗೆ ಸಂಸ್ಥೆೆ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆೆಯ ನೌಕರರಿಗೆ ವೇತನವನ್ನು ಹೆಚ್ಚಿಿಸುವ ಅನಿವಾರ್ಯತೆ ಇದ್ದು, ಈ ಎಲ್ಲ ಹಿನ್ನೆೆಲೆಯಲ್ಲಿ ಬಸ್ಸುಗಳ ಪ್ರಯಾಣ ದರ ಏರಿಕೆ ಅನಿವಾರ್ಯ ಎಂದು ಮೂಲಗಳು ವಿವರ ನೀಡಿವೆ.
ಈ ಮಧ್ಯೆೆ ಶಕ್ತಿಿ ಯೋಜನೆಯಡಿ ಸಾರಿಗೆ ಸಂಸ್ಥೆೆಯ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡಲಾಗಿದ್ದು,ಇದರ ಪರಿಣಾಮವಾಗಿ ಪುರುಷ ಪ್ರಯಾಣಿಕರು ಮಾತ್ರ ಟಿಕೆಟ್ ಖರೀದಿಸಿ ಪ್ರಯಾಣ ಮಾಡುತ್ತಾಾರೆ.
ಹೀಗಾಗಿ ಪ್ರಯಾಣ ದರ ಏರಿಕೆ ಅನಿವಾರ್ಯವಾಗಿದೆ ಎಂದಿರುವ ಮೂಲಗಳು,ರಾಜ್ಯ ರಸ್ತೆೆ ಸಾರಿಗೆ ಸಂಸ್ಥೆೆ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆೆಗಳು ಶೇಕಡಾ 25 ರಷ್ಟು ದರ ಹೆಚ್ಚಿಿಸಲು ಅನುಮತಿ ಕೋರಿದ್ದು ಇದಕ್ಕೆೆ ಪೂರಕವಾಗಿ ಮಾಹಿತಿಯನ್ನು ನೀಡಿವೆ.
ಆದರೆ ಏಕಾಏಕಿ ಆ ಪ್ರಮಾಣದಲ್ಲಿ ಬಸ್ಸುಗಳ ಪ್ರಯಾಣ ದರ ಏರಿಕೆ ಮಾಡಲು ಸರ್ಕಾರ ತಯಾರಿಲ್ಲ. ಬದಲಿಗೆ ಶೇಕಡಾ 10 ರಿಂದ 12 ರಷ್ಟು ಏರಿಕೆ ಮಾಡಲು ಸಜ್ಜಾಾಗಿದೆ ಎಂದು ಮೂಲಗಳು ಸ್ಪಷ್ಟ ಪಡಿಸಿವೆ.
ರಸ್ತೆೆ ಸಾರಿಗೆ ಸಂಸ್ಥೆೆ ಮತ್ತು ಬಿಎಂಟಿಸಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯವನ್ನು ಒದಗಿಸುವ ಯೋಜನೆಯಿಂದ ಸರ್ಕಾರದ ಬೊಕ್ಕಸಕ್ಕೆೆ ಆಗುತ್ತಿಿರುವ ವೆಚ್ಚವನ್ನು ಪರಿಗಣಿಸಿದರೆ, ಸಾರಿಗೆ ಸಂಸ್ಥೆೆ ಉಳಿವಿನ ದೃಷ್ಟಿಿಯಿಂದ ದರ ಏರಿಕೆ ಅನಿವಾರ್ಯ ಎಂಬುದು ಮೂಲಗಳ ಹೇಳಿಕೆ.