ಸುದ್ದಿಮೂಲ ವಾರ್ತೆ
ಜೆರುಸಲೇಂ,ಅ.7: ಇಸ್ರೇಲ್ ಮೇಲೆ ಪ್ಯಾಲೆಸ್ತೇನಿನ ಹಮಾಸ್ ಉಗ್ರರ ಗುಂಪು ಗಾಜಾಪಟ್ಟಿ ಕಡೆಯಂದ ದಾಳಿ ನಡೆಸಿದ್ದು, ಘಟನೆಯಲ್ಲಿ 200ಕ್ಕೂ ಹೆಚ್ಚು ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಾಗರಿಕರು ಮೃತಪಟ್ಟಿದ್ದಾರೆ.
ಪ್ಯಾಲೆಸ್ತೀನ್ ದಾಳಿಕೋರರು ಗಾಜಾ ಪಟ್ಟಿಯಿಂದ ಇಸ್ರೇಲ್ ಕಡೆಗೆ ಕೇವಲ 20 ನಿಮಿಷಗಳಲ್ಲಿ5000 ರಾಕೆಟ್ಗಳನ್ನು ಉಡಾವಣೆ ಮಾಡಿದ್ದಾರೆ. ಇವು ಇಸ್ರೇಲ್ನಾದ್ಯಂತ ಭೀಕರ ಸಾವುನೋವುಗಳಿಗೆ ಕಾರಣವಾಗಿವೆ. ತಕ್ಷಣವೇ ಎಚ್ಚೆತ್ತ ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ಹಮಾಸ್ ಉಗ್ರರ ವಿರುದ್ಧ ಯುದ್ಧ ಘೋಷಣೆ ಮಾಡಿದ್ದಾರೆ. ಇದು ಜಾಗತಿಕವಾಗಿ ಭಾರಿ ಸಂಚಲನಕ್ಕೆ ಕಾರಣವಾಗಿದೆ.
ಇಸ್ರೇಲ್ ನಾಗರಿಕರನ್ನು ಉದ್ದೇಶಿಸಿ ಮಾತನಾಡಿರುವ ಬೆಂಜಮಿನ್ ನೆತನ್ಯಾಹು, ‘ಇಸ್ರೇಲ್ ನಾಗರಿಕರೇ ನಾವು ಯುದ್ಧ ಘೋಷಿಸಿದ್ದೇವೆ. ನಮ್ಮ ಶತ್ರುಗಳು ಬೆಲ ಎತೆರಲಿದ್ದಾರೆ,’ ಎಂದು ಹೇಳಿದ್ದಾರೆ. ಮತ್ತೊಂದೆಡೆ ಇಸ್ರೇಲ್ ಮೇಲೆ ಹಮಾಸ್ ಉಗ್ರರ ದಾಳಿಯನ್ನು ಭಾರತ ಸೇರಿದಂತೆ ಜಗತ್ತಿನ ಅನೇಕ ರಾಷ್ಟ್ರಗಳು ಖಂಡಿಸಿವೆ.
ಹಮಾಸ್ ಉಗ್ರರು ಕೈಯಲ್ಲಿ ರಾಕೆಟ್, ಬಾಂಬ್ ಮತ್ತು ಗನ್ಗಳನ್ನು ಹಿಡಿದು ಇಸ್ರೇಲ್ ಒಳಗೆ ನುಗ್ಗುತ್ತಿದ್ದಾರೆ. ರಸ್ತೆಯಲ್ಲಿ ಕಂಡ ಕಂಡವರ ಜೀವ ತೆಗೆಯುತ್ತಿದ್ದಾರೆ. ಹಮಾಸ್ ಉಗ್ರರು ದೇಶದೊಳಗೆ ನುಸುಳಿದ್ದಾರೆ. ನಾಗರಿಕರು ಮನೆಯಲ್ಲಿಯೇ ಉಳಿದುಕೊಳ್ಳಬೇಕು ಎಂದು ಇಸ್ರೇಲ್ ರಕ್ಷಣಾ ವಕ್ತಾರರು ಅಲ್ಲಿನ ನಾಗರಿಕರಲ್ಲಿ ಮನವಿ ಮಾಡಿದ್ದಾರೆ.
ಉಗ್ರರು ಇಸ್ರೇಲ್ನ ಒಳಗೆ ನುಗ್ಗುವ ಸಮಯದಲ್ಲಿ ಇಸ್ರೇಲ್ ಯೋಧರ ಮೇಲೆ ಕೂಡ ದೌರ್ಜನ್ಯ ಎಸಗಿದ್ದಾರಂತೆ. ಅಲ್ಲದೆ ಹಲವು ಇಸ್ರೇಲ್ ಸೈನಿಕರನ್ನು ಬಂಧಿಸಿ ಎಳೆದು ತಂದು ಹಿಂಸೆ ನೀಡುತ್ತಿರುವ ಆರೋಪ ಕೇಳಿಬಂದಿದೆ. ಅದರಲ್ಲೂ ಇಸ್ರೇಲ್ನ ಮಹಿಳಾ ಸೈನಿಕರಿಗೆ ಕೂಡ ಹಿಂಸೆ ನೀಡುತ್ತಿರುವ ಆರೋಪ ಕೇಳಿಬರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇಸ್ರೇಲ್ನ ಮಹಿಳಾ ಯೋಧರೊಬ್ಬರನ್ನ ಬಂಡುಕೋರರು ವಾಹನದಲ್ಲಿ ತುಂಬಿಕೊಂಡು ಬರುತ್ತಿರುವ ವಿಡಿಯೋ ವೈರಲ್ ಆಗಿದೆ.
ವಿಶೇಷವೆಂದರೆ ಇಸ್ರೇಲ್ ನಿರ್ಮಿಸಿದ ಗೋಡೆಯನ್ನು ಏರಲು ಹಮಾಸ್ ಉಗ್ರರು ಪ್ಯಾರಾಗ್ಲೈಡಿಂಗ್ ಬಳಸಿ ಒಳನುಸುಳಿದ್ದಾರೆ. ಭಯೋತ್ಪಾದಕರು ಸೇನಾ ಸಮವಸ್ತ್ರ ಧರಿಸಿದ್ದ ಇವರು ಬೇಲಿ ಮತ್ತು ಗೋಡೆಗಳನ್ನು ಒಡೆದು ಒಳಬರುತ್ತಿರುವ ದೃಶ್ಯಗಳು ಬೆಚ್ಚಿಬೀಳಿಸುವಂತಿವೆ.
ಹಮಾಸ್ನ ಮಿಲಿಟರಿ ಪಡೆ ಅಲ್-ಕಸ್ಸಾಮ್ ಬ್ರಿಗೇಡ್ಗಳ ಸದಸ್ಯರು ದಕ್ಷಿಣ ಇಸ್ರೇಲಿ ನಗರಗಳಾದ ನೆಟಿವೋಟ್ ಮತ್ತು ಒಫಾಕಿಮ್ನ ಕೆಲವು ಭಾಗಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.
ಇರಾನ್ ಬೆಂಬಲದ ಅರೋಪ:
ಇಸ್ರೇಲ್ ಮೇಲೆ ಪ್ಯಾಲೆಸ್ತೀನ್ ಉಗ್ರರು ಏಕಾಏಕಿ ದಾಳಿ ನಡೆಸುವುದರ ಹಿಂದೆ ಇರಾನ್ ಬೆಂಬಲ ಇದೆ ಎಂಬ ಆರೋಪಗಳು ಕೇಳಿಬಂದಿವೆ.
‘ಇಸ್ರೇಲ್ ಮೇಲೆ ವರ್ಷಗಳಿಂದ ದಾಳಿ ನಡೆಸುತ್ತಿರುವ ಪ್ಯಾಲೆಸ್ತೀನ್ ಯೋಧರ ಕಾರ್ಯ ಅಭಿನಂದನೀಯ. ಪ್ಯಾಲಸ್ತೀನ್ ಮತ್ತು ಜೆರುಸಲೇಂ ಸ್ವತಂತ್ರಗೊಳ್ಳಲು ಪ್ಯಾಲೆಸ್ತೀನ್ ಉಗ್ರರು ಕೂಗೊಂಡಿರುವ ಕಾರ್ಯಾಚರಣೆಯ ಹಿಂದೆ ನಾವು ಬೆಂಬಲ ಕೊಡುತ್ತೇವೆ’ ಎಂದು ಇರಾನ್ ಪರಮೋಚ್ಛ ನಾಯಕ ಅಲಿ ಖಮೇನಿ ಅವರ ಸಲಹೆಗಾರ ಹೇಳಿಕೆ ನೀಡಿರುವ ಬಗ್ಗೆ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಭಾರತೀಯ ರಾಯಭಾರ ಕಚೇರಿಯಿಂದ ಸಹಾಯವಾಣಿ
ಇಸ್ರೇಲ್ ಮೇಲೆ ಹಮಾಸ್ ಉಗ್ರರ ಗುಂಪು ರಾಕೆಟ್ ದಾಳಿ ನಡೆಸಿದ್ದು ಇದರ ಬೆನ್ನಲ್ಲೇ ಇಸ್ರೇಲ್ನಲ್ಲಿರುವ ಭಾರತೀಯರರ ರಕ್ಷಣೆಗೆ ಭಾರತೀಯ ರಾಯಭಾರಿ ಕಚೇರಿಯಿಂದ ಅಗತ್ಯ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ತುರ್ತು ಸಂದರ್ಭದಲ್ಲಿ ಸಂಪರ್ಕಿಸಲು ಸಹಾಯವಾಣಿ ಆರಂಭಿಸಿದೆ.
ಇಸ್ರೇಲ್ ಗಡಿಯಲ್ಲಿ ಯುದ್ಧದ ವಾತಾವರಣ ಹಿನ್ನೆಲೆಯಲ್ಲಿ ಭಾರತೀಯ ರಾಯಭಾರ ಕಚೇರಿಯಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಸ್ಥಳೀಯ ಅಧಿಕಾರಿಗಳು ನೀಡುವ ಸುರಕ್ಷತಾ ಮಾನದಂಡ ಅನುಸರಿಸಿ ಅನಗತ್ಯ ಸಂಚಾರ ಬೇಡ, ಸುರಕ್ಷತಾ ಸ್ಥಳಗಳಲ್ಲಿ ಇರುವಂತೆ ಸೂಚನೆ ನೀಡಲಾಗಿದೆ. ಇನ್ನು ಇಸ್ರೇಲ್ ನಲ್ಲಿ ವಾಸಿಸುವ ಭಾರತೀಯರಿಗೆ ರಾಯಭಾರಿ ಕಚೇರಿಯಿಂದ ಎಚ್ಚರಿಕೆ ನೀಡುವ ಜೊತೆಗೆ, ಅಗತ್ಯ ಬಿದ್ದಲ್ಲಿ +97235226748 ಸಂಖ್ಯೆಯನ್ನ ಸಂಪರ್ಕ ಮಾಡುವಂತೆ ಮಾಹಿತಿ ನೀಡಲಾಗಿದೆ.
ಇಸ್ರೇಲ್ ಬೆಂಬಲಕ್ಕೆ ನಿಂತ ಭಾರತ
ಇಸ್ರೇಲ್ ಭಾರತದ ಮಿತ್ರ ರಾಷ್ಟ್ರವಾಗಿದ್ದು, ಇಂತಹ ಕಠಿಣ ಸಮಯದಲ್ಲಿ ಭಾರತ ಇಸ್ರೇಲ್ ಬೆಂಬಲಕ್ಕೆ ನಿಂತಿದೆ.
‘ಇಸ್ರೇಲ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಸುದ್ದಿಯಿಂದ ತೀವ್ರ ಆಘಾತವಾಗಿದೆ. ಬಲಿಪಶುಗಳಾದ ಜನರು ಮತ್ತು ಅವರ ಕುಟುಂಬಕ್ಕೆ ನಮ್ಮ ಪ್ರಾರ್ಥನೆ ಇದೆ. ಈ ಕಷ್ಟದ ಸಮಯದಲ್ಲಿ ನಾವು ಇಸ್ರೇಲ್ನೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತೇವೆ,’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.