ಸುದ್ದಿಮೂಲ ವಾರ್ತೆ ಮಾನ್ವಿ, ಡಿ.24:
ಸುದ್ದಿಮೂಲ ಸಂಪಾದಕ ಬಸವರಾಜಸ್ವಾಾಮಿ ಇವರ ಬಸವ ಗೀತೆ ‘ಸತ್ಯ ಸಂವಾದ ’( 9 ಸಂಪುಟಗಳ ಗುಚ್ಚ) ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಡಿ.27 ರಂದು ಶನಿವಾರ ಸಾಯಂಕಾಲ 5 ಗಂಟೆಗೆ ಮಾನ್ವಿ ಪಟ್ಟಣದ ಬಿ.ವಿ.ಆರ್ ಇ-ಟೆಕ್ನೋೋ ಸ್ಕೂಲ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಶ್ರೀ ಬಸವ ಸೇವಾ ಪ್ರತಿಷ್ಠಾಾನ ಹಾಗೂ ಸುದ್ದಿಮೂಲ ದಿನಪತ್ರಿಿಕೆ ರಾಯಚೂರು, ಬಸವ ಕೇಂದ್ರ ಮಾನ್ವಿಿ, ಶರಣ ಸಾಹಿತ್ಯ ಪರಿಷತ್ತು ಮಾನ್ವಿ, ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಮಾನ್ವಿ ಹಾಗೂ ತಾಲೂಕಾ ಖಾಸಗಿ ಶಿಕ್ಷಣ ಸಂಸ್ಥೆೆಗಳ ಒಕ್ಕೂಟ ಮಾನ್ವಿ ಇವರ ಸಂಯುಕ್ತಾಾಶ್ರಯದಲ್ಲಿ ನಡೆಯುವ ಸಮಾರಂಭವನ್ನು ನಿವೃತ್ತ ಶಿಕ್ಷಣಾಧಿಕಾರಿ ಡಿ.ಜಿ.ಕರ್ಕಿಹಳ್ಳಿ ಉದ್ಘಾಾಟಿಸುವರು.
ನಿವೃತ್ತ ಉಪನ್ಯಾಸಕ ಬಿ.ಜಿ.ಹುಲಿ ಗ್ರಂಥ ಲೋಕಾರ್ಪಣೆ ಮಾಡಿ ಪುಸ್ತಕ ಕುರಿತು ಮಾತನಾಡುವರು. ಬಸವ ಕೇಂದ್ರದ ಗೌರವಾಧ್ಯಕ್ಷರಾದ ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು ಅಧ್ಯಕ್ಷತೆ ವಹಿಸುವರು.
ಸಮಾರಂಭದಲ್ಲಿ ಲೇಖಕ ಹಾಗೂ ಸುದ್ದಿಮೂಲ ಸಂಪಾದಕ ಬಸವರಾಜಸ್ವಾಮಿ ಹಾಗೂ ಮುಖ್ಯ ಅತಿಥಿಗಳಾಗಿ ಬಸವ ಕೇಂದ್ರದ ಅಧ್ಯಕ್ಷ ಜಿ.ಎಂ.ರಂಗಪ್ಪ ಮೇದಾ, ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಈ.ನರಸಿಂಹ, ಕಸಾಪ ಅಧ್ಯಕ್ಷ ಶರಣಬಸವ ನೀರಮಾನ್ವಿಿ, ತಾಲೂಕಾ ಖಾಸಗಿ ಶಿಕ್ಷಣ ಸಂಸ್ಥೆೆಗಳ ಒಕ್ಕೂಟದ ಅಧ್ಯಕ್ಷ ರಾಜಾ ಸುಭಾಶ್ಚಂದ್ರ ನಾಯಕ, ನಿಕಟಪೂರ್ವ ಅಧ್ಯಕ್ಷ ಹೆಚ್.ಶರ್ಪುದ್ದೀನ್ ಪೋತ್ನಾಳ್, ಕಸಾಪ ಮಾಜಿ ಅಧ್ಯಕ್ಷ ಮೂಕಪ್ಪ ಕಟ್ಟಿಿಮನಿ, ಬಿವಿಆರ್ ಶಿಕ್ಷಣ ಸಂಸ್ಥೆೆ ಅಧ್ಯಕ್ಷ ಬಿ.ವಿ.ರೆಡ್ಡಿ ಭಾಗವಹಿಸುವರು. ಕಾರಣ ಸಕಲರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಸುದ್ದಿಮೂಲ ವರದಿಗಾರ ಪಿ.ಪರಮೇಶ ಪತ್ರಿಕಾ ಪ್ರಕಟಣೆ ಮೂಲಕ ಕೋರಿದ್ದಾರೆ.
ಡಿ.27 ರಂದು ಮಾನ್ವಿಯಲ್ಲಿ ಬಸವರಾಜಸ್ವಾಮಿ ಇವರ ಬಸವ ಗೀತೆ ಗ್ರಂಥ ಲೋಕಾರ್ಪಣೆ

