ಸುದ್ದಿಮೂಲ ವಾರ್ತೆ ಸಿರವಾರ, ೆ.03:
ಪಟ್ಟಣದ ಸರಕಾರಿ ಬಾಲಕರ ಪ್ರೌೌಢ ಶಾಲೆಗೆ 2000-01ನೇ ಸಾಲಿನ ಹತ್ತನೇಯ ತರಗತಿಯ ಹಳೆಯ ವಿದ್ಯಾಾರ್ಥಿಗಳ ಬಳಗದಿಂದ 52 ಸಾವಿರ ರೂಪಾಯಿ ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕ ಸೋಮವಾರ ಶಾಲೆಗೆ ಅರ್ಪಣೆ ಮಾಡಿದರು.
ಮಾಜಿ ಸೈನಿಕ ವಿಜಯೇಂದ್ರ ಅವರು ಉದ್ಘಾಾಟಿಸಿದರು. ನಂತರ ಶಾಲೆಯ ಪ್ರಭಾರಿ ಮುಖ್ಯಗುರುಗಳು ಗಿರಿಜಾ ಮಾತನಾಡಿ ಈ ಶಾಲೆಯಲ್ಲಿ ಅಕ್ಷರ, ಜ್ಞಾನ ಕಲಿತ ವಿದ್ಯಾಾರ್ಥಿಗಳು ದೊಡ್ಡ ದೊಡ್ಡ ಹುದ್ದೆಗೆ ಸೇರಿದ್ದಾರೆ, 2000-01ನೇ ಸಾಲಿನ ಹತ್ತನೇ ತರಗತಿಯ ಹಳೆಯ ವಿದ್ಯಾಾರ್ಥಿಗಳ ಬಳಗದ ಕಾರ್ಯ ಶ್ಲಾಾಘನೀಯ, ಶಾಲೆಗೆ ದಾನವಾಗಿ ನೀಡಿದ ವಸ್ತುಗಳನ್ನು ವಿದ್ಯಾಾರ್ಥಿಗಳು ಹಾಳು ಮಾಡದೆ ಸದುಪಯೋಗ ಪಡಿಸಿಕೊಳ್ಳಬೇಕು, ಮುಂದಿನ ವಿದ್ಯಾಾರ್ಥಿಗಳಿಗೆ ಇದು ಪ್ರೇರಣೆಯಾಗಿದೆ ಎಂದರು.
ಸಹ ಶಿಕ್ಷಕ ವೆಂಕಟೇಶ ಮಾತನಾಡಿ, ಈ ಶಾಲೆಯ 60ನೇ ವರ್ಷದ ಸಂಭ್ರಮದ ಉತ್ಸಾಾಹ ಇನ್ನೂ ಕಡಿಮೆಯಾಗಿಲ್ಲ, 2004-05 ಸಾಲಿನ ಹಳೆಯ ವಿದ್ಯಾಾರ್ಥಿಗಳು ಈ ಶಾಲೆಗೆ ಎಲೆಕ್ಟ್ರಿಿಕಲ್ ಬೆಲ್ (ಗಂಟೆ) ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ಎಂ.ಡಿ.ರಫಿ, ಹಳೆಯ ವಿದ್ಯಾಾರ್ಥಿಗಳಾದ ಜಿ.ಅನೀಲ ಕುಮಾರ, ಮಂಜುನಾಥ ಸಾಹುಕಾರ್, ಭುವನೇಶಗೌಡ್, ಸುರೇಶ ಹೀರಾ, ವೆಂಕಟೇಶ ದೊರೆ, ಕಿರಣ್ ಕುಮಾರ, ರಾಮಚಂದ್ರ, ಚೆನ್ನಪ್ಪ, ಆದೆಪ್ಪ, ಶರತ್ ಚಂದ್ರ, ಕೆ.ಶರಣಬಸವ, ಚೆನ್ನಬಸವ, ಮಹ್ಮದ್ ಹುಸೇನ್ ಸೇರಿದಂತೆ ಶಿಕ್ಷಕರು, ವಿದ್ಯಾಾರ್ಥಿಗಳು ಇದ್ದರು.
ಸಿರವಾರ : ಸರಕಾರಿ ಶಾಲೆಗೆ ಹಳೆಯ ವಿದ್ಯಾರ್ಥಿಗಳಿಂದ ಶುದ್ಧ ನೀರು ಘಟಕ ಸಮರ್ಪಣೆ

