ಸುದ್ದಿಮೂಲ ವಾರ್ತೆ ಕನಕಗಿರಿ, ನ.25:
ಒಣ ಬೇಸಾಯದಿಂದ ಕೂಡಿದ ಮಳೆ ಆಧಾರಿತ ದ್ವಿಿದಳ ಬೆಳೆಗಳನ್ನು ಬೆಳೆಯುವ ಕನಕಗಿರಿ ತಾಲೂಕಿನ ಗ್ರಾಾಮೀಣ ಪ್ರದೇಶಗಳ ಜಮೀನಿನಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾರ್ಯಗತವಾದ ಬಳಿಕ ತೋಟಗಾರಿಕೆಯ ವಿವಿಧ ವಾಣಿಜ್ಯ ಬೆಳೆಗಳು ಉತ್ತೇಜನಗೊಂಡು ರೈತರು ಆರ್ಥಿಕ ಸಬಲರಾಗುತ್ತಿಿದ್ದಾಾರೆ ಎಂದು ಕೊಪ್ಪಳ ಜಿಲ್ಲಾಾ ಸಚವ ಶಿವರಾಜ ತಂಗಡಗಿ ಹೇಳಿದರು.
ಪಟ್ಟಣದ ಹೊರವಲಯದಲ್ಲಿರುವ ಶ್ರೀಲಕ್ಷ್ಮೀದೇವಿ ಕೆರೆ ದಡದಲ್ಲಿ ಗಂಗಾಮಾತೆಗೆ ಪೂಜೆ ನೆರವೇರಿಸಿ ಬಳಿಕ ಕೆರೆಯಲ್ಲಿ ಬಾಗಿನ ಸಮರ್ಪಿಸಿದ ಸಚಿವರು ನಂತರ ಸಾರ್ವಜನಿಕ ವೇದಿಕೆಯಲ್ಲಿ ಜನರನ್ನುದ್ದೇಶಿಸಿ ಮಾತನಾಡಿದರು.
ಕುಡಿಯಲು ಸಹ ನೀರಿಲ್ಲದ ಬರದ ನಾಡು ಎಂದು ಖ್ಯಾಾತಿ ಗಳಿಸಿದ್ದ ಕನಕಗಿರಿ ಗ್ರಾಾಮೀಣ ಪ್ರದೇಶದಲ್ಲಿ 50 ಕಿ.ಮೀ.ದೂರದ ತುಂಗಭದ್ರಾಾ ನದಿ ನೀರನ್ನು 150 ಕೋಟಿರೂ, ವೆಚ್ಚದಲ್ಲಿ 8 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿಂದ ಹಸಿರು ಕ್ರಾಾಂತಿ ಆರಂಭವಾಗಿದೆ. ಕೆರೆಗಳಿಗೆ ನೀರು ತುಂಬಿಸಿರುವುದರಿಂದ ಭೂಮಿಯ ಅಂತರ್ಜಲ ಮಟ್ಟ ಹೆಚ್ಚಳಗೊಂಡು ಕೊಳವೆ ಬಾವಿ ಆಧಾರಿತ ಕೃಷಿ ಚಟುವಟಿಕೆಗಳಿಗೆ ಉತ್ತೇಜನಗೊಂಡು ಈ ಹಿಂದೆ ದ್ವಿಿದಳ ಧಾನ್ಯಗಳನ್ನು ಬೆಳೆಯಲು ಸೀಮಿತಗೊಂಡಿದ್ದ ರೈತರು ತೋಟಗಾರಿಕೆ ಹಾಗೂ ವಾಣಿಜ್ಯ ಬೆಳೆಗಳಾದ ಪಪ್ಪಾಾಯಿ, ದ್ರಾಾಕ್ಷಿ, ದಾಳಿಂಬೆ, ಮಾವು, ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಸಶಕ್ತರಾಗುತ್ತಿಿದ್ದಾಾರೆ ಎಂದರು.
ಕೃಷ್ಣಾಾ ಬಿ ಸ್ಕೀಂ ಯೋಜನೆಯಲ್ಲಿ ಈ ಹಿಂದೆ ಕನಕಗಿರಿಯನ್ನು ಕೈ ಬಿಡಲಾಗಿತ್ತು. ಅದನ್ನು ತಾವು ಸೇರ್ಪಡೆ ಮಾಡಿದ ಹಿನ್ನೆೆಲೆಯಲ್ಲಿ ಈ ಭಾಗದ ಕೆರೆಗಳಿಗೆ ಜೀವ ಬಂದಿದೆ, ಕೆರೆಗಳು ಭರ್ತಿಯಾಗಿವೆ. ತಾಲ್ಲೂಕಿನ ಸೂಳೇಕಲ್ ಕೆರೆ ಹಾಗೂ ಕಲಿಕೇರಿ ಕೆರೆಗಳನ್ನು ತುಂಬಿಸುವ ಯೋಜನೆ ರೂಪಿಸಲಾಗಿದ್ದು ಅನುದಾನಕ್ಕೆೆ ಪ್ರಸ್ತಾಾವ ಸಲ್ಲಿಸಲಾಗಿದೆ. ಬಸರಿಹಾಳ, ರಾಂಪುರ, ರಾಮದುರ್ಗಾ ಸೇರಿದಂತೆ ಇತರ ಕೆರೆಗಳನ್ನು ಭರ್ತಿ ಮಾಡುವ ಯೋಜನೆ ರೂಪಿಸಲಾಗುತ್ತಿಿದೆ. ಬರುವ ದಿನಗಳಲ್ಲಿ ಎಲ್ಲ ಕೆರೆಗಳನ್ನು ಭರ್ತಿ ಮಾಡಿಸಿ ಕೋಡಿಯನ್ನು ಹರಿಸುವ ಕೆಲಸ ಮಾಡುವೆ ಎಂದರು.
ತಾಲೂಕಿನ ಸಿರಿವಾರ ಗ್ರಾಾಮದ ಬಳಿ ಹೈಟೆಕ್ ತೋಟಗಾರಿಕೆ ಪಾರ್ಕ್ ಅನುಷ್ಠಾಾನಕ್ಕೆೆ ರಾಜ್ಯ ಸರ್ಕಾರದಿಂದ 10 ಕೋಟಿರೂ. ಅನುದಾನ ಮಂಜೂರು ಮಾಡಿಸಿ ಮೂಲಭೂತ ಸೌಕರ್ಯ ಕಾಮಗಾರಿಗಳನ್ನು ಕೈಗೆತ್ತಿಿಕೊಳ್ಳಲಾಗಿದೆ. ಕನಕಗಿರಿ ಮತ್ತು ಕಾರಟಗಿ ಪಟ್ಟಣದ ಜನರಿಗೆ ನಿತ್ಯ 24 ಗಂಟೆಗಳವರೆಗೆ ಶುದ್ಧ ಕುಡಿಯುವ ನೀರು ಪೂರೈಕೆ ಯೋಜನೆಗೆ 164 ಕೋಟಿರೂ. ಅನುದಾನ ಮಂಜೂರು ಮಾಡಿಸಿದ್ದು, ಕಾಮಗಾರಿ ಕೂಡ ಪ್ರಗತಿಯಲ್ಲಿದೆ ಎಂದರು.
ಕನಕಗಿರಿಯನ್ನು ಪ್ರವಾಸೋದ್ಯಮ ಕೇಂದ್ರವನ್ನಾಾಗಿಸಲು ಮತ್ತು ಇಲ್ಲಿಯ ಶ್ರೀಲಕ್ಷ್ಮೀದೇವಿ ಕೆರೆಯನ್ನು ಪ್ರವಾಸಿ ತಾಣವನ್ನಾಾಗಿ ಮಾಡಲು ಯೋಜನೆ ರೂಪಿಸಲಾಗಿದೆ. ಕನಕಗಿರಿ 100 ಹಾಸಿಗೆಗಳ ಆಸ್ಪತ್ರೆೆ ನಿರ್ಮಾಣಕ್ಕೆೆ ಜಾಗ ಗುರುತಿಸಿ 34ಕೋಟಿ ರೂ. ಅನುದಾನ ನೀಡಲಾಗಿದೆ. ವಾರದೊಳಗೆ ಟೆಂಡರ್ ಪ್ರಕ್ರಿಿಯೆ ಮುಗಿಯುತ್ತದೆ. ಮುಂದಿನ ತಿಂಗಳ ಕಟ್ಟಡಕ್ಕೆೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದರು.
ಕನಕಗಿರಿಗೆ ಅಗ್ನಿಿ ಶಾಮಕ ದಳದ ಕಚೇರಿ ಮಂಜೂರು ಆಗಿದ್ದು ಕಟ್ಟಡ ನಿರ್ಮಾಣಕ್ಕೆೆ 3 ಕೋಟಿ ರೂಪಾಯಿ, ಪಟ್ಟಣದ ಶಾದಿಮಹಲ್ ಕಟ್ಟಡಕ್ಕೆೆ 1 ಕೋಟಿ ರೂ, ಕನಕಭವನ ಹಾಗೂ ವಾಲ್ಮೀಕಿ ಭವನ, ಅಂಬೇಡ್ಕರ್ ಭವನ ನಿರ್ಮಾಣಕ್ಕೆೆ ತಲಾ 2 ಕೋಟಿ ರೂಪಾಯಿ, ಗಂಗಾ ಪರಮೇಶ್ವರಿ ಸಮುದಾಯಕ್ಕೆೆ 50ಲಕ್ಷ ರೂಪಾಯಿ, ಬೆನಕನಾಳದ ಶರಣಬಸವೇಶ್ವರ ಸಮುದಾಯ ಭವನ, ಹಣವಾಳ ಹಡಪದ ಅಪ್ಪಣ್ಣ ಸಮಾಜಕ್ಕೆೆ ತಲಾ 30ಲಕ್ಷ ರೂ. ಅನುದಾನ ನೀಡಲಾಗಿದೆ ಎಂದರು.
ಸಂಸದ ಕೆ.ರಾಜಶೇಖರ ಹಿಟ್ನಾಾಳ ಮಾತನಾಡಿ, ಶಿವರಾಜ ತಂಗಡಗಿ ರಾಜ್ಯದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಜನಕರಾಗಿದ್ದಾಾರೆ. ಅವರು ಶಾಸಕರಾದಾಗೊಮ್ಮೆೆ ಅವರು ಆಯ್ಕೆೆಯಾದ ಪಕ್ಷದ ಸರ್ಕಾರ ಅಧಿಕಾರಕ್ಕೆೆ ಬಂದಿರುವುದು ವಿಶೇಷ. ಜಿಲ್ಲೆೆಯಲ್ಲಿಯೇ ಕನಕಗಿರಿ ಕ್ಷೇತ್ರದಲ್ಲಿ ಅತಿ ಹೆಚ್ಚು ಅನುದಾನ ತರುವ ಮೂಲಕ ನಾನಾ ಕ್ಷೇತ್ರದ ಅಭಿವೃದ್ಧಿಿಪಡಿಸುತ್ತಿಿದ್ದಾಾರೆ. ರಾಜಕಾರಣದಲ್ಲಿ ಅದೃಷ್ಟವಂತರಾಗಿದ್ದಾಾರೆ. ಮೂರು ಸಲ ಶಾಸಕರಾಗಿ ಮೂರು ಸಲವೂ ಸಚಿವರಾಗಿದ್ದು ಕ್ಷೇತ್ರದ ಜನರು ಪುಣ್ಯವಂತರು ಎಂದು ಹೇಳಿದರು.
ಬ್ಲಾಾಕ್ ಕಾಂಗ್ರೆೆಸ್ ಅಧ್ಯಕ್ಷ ಕೆ.ಗಂಗಾಧರಸ್ವಾಾಮಿ ಪ್ರಾಾಸ್ತಾಾವಿಕವಾಗಿ ಮಾತನಾಡಿ, ಕನಕಗಿರಿ ಪ್ರವಾಸೋದ್ಯಮ ತಾಣವಾಗಲು ಪ್ರಾಾಧಿಕಾರ ರಚಿಸಬೇಕೆಂದು ಮನವಿ ಮಾಡಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಹುಸೇನಬೀ ಚಳ್ಳಮರದ, ಉಪಾಧ್ಯಕ್ಷ ಕಂಠಿ ರಂಗಪ್ಪ ನಾಯಕ, ಅನೇಕ ಸದಸ್ಯರು, ಜಿಲ್ಲಾಾ ಗ್ಯಾಾರಂಟಿ ಅನುಷ್ಠಾಾನ ಸಮಿತಿ ಅಧ್ಯಕ್ಷ ರೆಡ್ಡಿಿಶ್ರೀನಿವಾಸ, ತಹಶೀಲ್ದಾಾರ್ ವಿಶ್ವನಾಥ ಮುರುಡಿ, ತಾ.ಪಂ ಪ್ರಭಾರ ಇಒ ರಾಜಶೇಖರ, ಪಟ್ಟಣ ಪಂಚಾಯಿತಿ ಮುಖ್ಯಾಾಧಿಕಾರಿ ಲಕ್ಷ್ಮಣ ಕಟ್ಟಿಿಮನಿ, ಸಿಡಿಪಿಓ ವಿರುಪಾಕ್ಷಿ, ಕಾಂಗ್ರೆೆಸ್ ಪಕ್ಷದ ಮುಖಂಡರಾದ ಶರಣಬಸಪ್ಪ ಭತ್ತದ, ವೀರೇಶ ಸಮಗಂಡಿ, ಸಿದ್ದಪ್ಪ ನೀರ್ಲೂಟಿ, ಮಲ್ಲಿಕಾರ್ಜುನಗೌಡ, ಬಸವಂತಗೌಡ ಪಾಟೀಲ್, ನಾಗಪ್ಪ ಹುಗ್ಗಿಿ, ಹಜರತ್ ಹುಸೇನ, ಸತ್ಯಪ್ಪ ಭೋವಿ ಅನೇಕರಿದ್ದರು.
ಚಿವರಿಂದ ಕನಕಗಿರಿ ಶ್ರೀಲಕ್ಷ್ಮೀದೇವಿ ಕೆರೆಗೆ ಬಾಗಿನ ಸಮರ್ಪಣೆ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿಂದ ತೋಟಗಾರಿಕೆ ಬೆಳೆಗಳಿಗೆ ಉತ್ತೇಜನ-ತಂಗಡಗಿ

