ಸುದ್ದಿಮೂಲವಾರ್ತೆ
ಕೊಪ್ಪಳ,ನ.9:ಇಂದು ಕೊಪ್ಪಳ ನಗರದ ತಾಲೂಕು ಪಂಚಾಯತ ಮುಂಭಾಗದಲ್ಲಿ, ದೀಪ ಸಂಜೀವಿನಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಜಿಲ್ಲಾ ಪಂಚಾಯತ್ ನ ಉಪಕಾರ್ಯದರ್ಶಿ ಮಲ್ಲಪ್ಪ ತೊದಲಬಾಗಿ ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಪ್ರತಿ ಮನೆ ಮನೆ ಗಳಲ್ಲಿ ಮಣ್ಣಿನಿಂದ ತಯಾರಿಸಲಾದ ದೀಪಗಳನ್ನು ಹಚ್ಚಿ ಬೆಳಕು ಚೆಲ್ಲುವಂತೆ, ಸ್ವಸಹಾಯ ಗುಂಪಿನ ಮಹಿಳೆಯರು ಮಣ್ಣಿನಿಂದ ತಯಾರಿಸಲಾದ ದೀಪಗಳನ್ನು ಮಾರಾಟ ಮಾಡಲು ಸೂಕ್ತ ವೇದಿಕೆ ಕಲ್ಪಿಸಲಾಗಿದ್ದು,
ಇದು ಗ್ರಾಮೀಣ ಭಾಗದ ಮಹಿಳೆಯರು ತಯಾರಿಸಲಾದ ದೀಪಗಳನ್ನು ಮಾರಾಟ ಮಾಡುವ ಮೂಲಕ ಸದಸ್ಯರುಗಳಿಗೆ ಆದಾಯ ಸೃಜನೆ ಆಗುವುದು ಹಾಗು ಮಹಿಳೆಯರು ಕೈಗೊಂಡ ದೀಪಗಳ ಚಟುವಟಿಕೆ ತಯಾರಿಕೆಗಳಿಗೆ ಪ್ರೊತ್ಸಹ ನೀಡುವ ನಿಟ್ಟಿನಲ್ಲಿ ಉಪಯೋಗವಾಗಲೆಂದು ದೀಪ ಸಂಜೀವಿನಿ ಕಾರ್ಯಕ್ರಮ ಆಯೋಜನೆ ಮಾಡಿರುವುದು ತುಂಬಾ ಅರ್ಥಪೂರ್ಣವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ ಸಹಾಯಕ ನಿರ್ದೇಶಕ ಮಹೇಶ್, ತಾಲೂಕ್ ಯೋಜನಾಧಿಕಾರಿ ರಾಜೇಸಾಬ್ ನದಾಫ್ ಸಹಾಯಕ ಲೆಕ್ಕಾಧಿಕಾರಿ ರವಿಕುಮಾರ, ಸಂಜೀವಿನಿ ಯೋಜನೆಯ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು ಅಂಬಣ್ಣ ಕಟಗಿ, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಸುನೀಲ್, ವಲಯ ಮೇಲ್ವಿಚಾರಕ ವೆಂಕಟೇಶ್, ವಿದ್ಯಾಲಕ್ಷ್ಮೀ, ನವೀನ್, Mentor ಕಲ್ಲಪ್ಪ, ಯುವ ವೃತ್ತಿಪರರು ಧರಣೇಶ, ಶರಣಪ್ಪ, ಕಾವ್ಯ ಹಾಗೂ ತಾಲೂಕ ಪಂಚಾಯತನ ಸಿಬ್ಬಂದಿಯವರು, ಸಂಜೀವಿನಿ ಒಕ್ಕೂಟದ ಸಿಬ್ಬಂದಿಯವರು ಹಾಗೂ ಮಹಿಳೆಯರು ಭಾಗವಹಿಸಿದ್ದರು.