ಸುದ್ದಿಮೂಲ ವಾರ್ತೆ ರಾಯಚೂರು , ಡಿ.15:
ನಗರದ ಡೆಲಿಗೇಟ್ಸ್ ಕಾಲೋನಿಯಲ್ಲಿ ಒಳ ಚರಂಡಿಯ ಪೈಪ್ ಲೈನ್ ನಿಂದ ಗಲೀಜು ನೀರು ಹೊರ ಬಂದು ದುರ್ವಾಸನೆ ಹಬ್ಬಿಿದ್ದು ಕ್ರಮ ವಹಿಸುವಂತೆ ನಿವಾಸಿಗಳು ದೂರು ಸಲ್ಲಿಸಿದ್ದಾಾರೆ.
ಮಹಾ ನಗರ ಪಾಲಿಕೆ ಕಚೇರಿಗೆ ಆಗಮಿಸಿದ ಬಡಾವಣೆ ನಿವಾಸಿಗಳು ಅಧಿಕಾರಿಗೆ ಮನವಿ ಸಲ್ಲಿಸಿದರು. ಡೆಲಿಗೇಟ್ಸ್ ಕಾಲೋನಿಯಲ್ಲಿ ಒಳ ಚರಂಡಿ ಸರಿಯಾಗಿ ನಿರ್ವಹಣೆ ಮಾಡದ ಕಾರಣ ಪೈಪ್ಲೈನ್ ಮೂಲಕ ಚರಂಡಿ ನೀರು ರಸ್ತೆೆಯಲ್ಲಿ ಹರಿಯುತ್ತಿಿದೆ, ಇದರಿಂದ ದುರ್ವಾಸನೆ ಹಬ್ಬಿಿದ್ದು ರಸ್ತೆೆಯಲ್ಲಿ ಒಡಾಡುವ ನಿವಾಸಿಗಳಿಗೆ ತೊಂದರೆ ಉಂಟಾಗಿದೆ ಎಂದು ದೂರಿದರು.
ಬಡಾವಣೆಯಲ್ಲಿ ವೃದ್ಧರು, ಮಕ್ಕಳು ಮಹಿಳೆಯರು ಅನಾರೋಗ್ಯಕ್ಕೀಡಾಗುವ ಸಾಧ್ಯತೆಗಳಿವೆ, ದುರ್ವಾಸನೆಯಿಂದಾಗಿ ಮೂಗು ಮುಚ್ಚಿಿಕೊಂಡು ಸಂಚರಿಸಬೇಕಾದ ಸ್ಥಿಿತಿ ಇದೆ. ಈ ಕೂಡಲೇ ಎಚ್ಚೆೆತ್ತುಕೊಂಡು ಒಳ ಚರಂಡಿ ಕಾಲುವೆ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಡಾವಣೆ ನಿವಾಸಿಗಳಿದ್ದರು.

