ಸುದ್ದಿಮೂಲ ವಾರ್ತೆ ರಾಯಚೂರು, ಡಿ.25:
ಲಿಂಗಸುಗೂರು ತಾಲೂಕಿನ ಹಟ್ಟಿಿ ಗ್ರಾಾಮದ ಜತ್ತಿಿ ಕಾಲೋನಿಯ ಜ್ಯೋೋತಿ ಎನ್ನುವವರ ಅನುಮಾನಾಸ್ಪದ ಸಾವಿನ ಕುರಿತು ಕ್ರಮ ವಹಿಸಬೇಕು ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಒತ್ತಾಾಯಿಸಿದೆ.
ರಿಮ್ಸ್ ಆಸ್ಪತ್ರೆೆಯಲ್ಲಿ ನರ್ಸ್ ಆಗಿದ್ದ ಜ್ಯೋೋತಿ ಶವ ಹಟ್ಟಿಿ ರಾಯಚೂರು ಮುಖ್ಯ ರಸ್ತೆೆಯ ಲೇಔಟ್ ಒಂದರಲ್ಲಿ ನಿಲ್ಲಿಸಿದ್ದ ರೋಡ್ ರೋಲರ ಗೆ ನೇಣು ಬಿಗಿದ ಸ್ಥಿಿತಿಯಲ್ಲಿ ಪತ್ತೆೆಯಾಗಿದೆ ಎಂದು ವರದಿಯಾಗಿದ್ದು ಅವರ ಕುಟುಂಬದವರು ಇದು ಆತ್ಮಹತ್ಯೆೆಯಲ್ಲ ಕೊಲೆಯೆಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ಹಿನ್ನೆೆಲೆಯಲ್ಲಿ ಈ ಘಟನೆಯ ಕುರಿತು ನಿಷ್ಪಕ್ಷಪಾತವಾಗಿ ಸಮಗ್ರ ತನಿಖೆ ನಡೆಸಬೇಕು ಮತ್ತು ತಪ್ಪಿಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಸಂಘಟನೆಯ ಜಿಲ್ಲಾಾ ಕಾರ್ಯದರ್ಶಿ ಸರೋಜಾ ಗೋನವಾರ ತ್ತಾಾಯಿಸಿದ್ದಾಾರೆ.

