ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.15:
ನಗರದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆೆ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆೆಯನ್ನು ಸಮಗ್ರವಾಗಿ ಸುಧಾರಿಸಿ, ಸಾರ್ವಜನಿಕರಿಗೆ ಗುಣಮಟ್ಟದ ಚಿಕಿತ್ಸೆೆ ಸೌಲಭ್ಯ ಒದಗಿಸಬೇಕು ಹಾಗೂ ಕರ್ತವ್ಯದ ಅವಧಿಯಲ್ಲಿ ಖಾಸಗಿ ಕ್ಲಿಿನಿಕ್ ನಡೆಸುವ ವೈದ್ಯರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆ ಆಗ್ರಹಿಸಿ ಸಿಪಿಐ(ಎಂಎಲ್) ಲಿಬರೇಶನ್ ಮುಖ್ಯ ವೈದ್ಯಾಾಧಿಕಾರಿ ಸುರೇಶಗೌಡ ಅವರ ಮುಖಾಂತರ ಜಿಲ್ಲಾಾ ಆರೋಗ್ಯ ಮತ್ತು ಕುಟುಂಬ ಕಲ್ಯಾಾಣಾಧಿಕಾರಿ ಅವರಿಗೆ ಸೋಮವಾರ ಮನವಿ ರವಾನಿಸಲಾಯಿತು.
ಸಿಪಿಐ(ಎಂಎಲ್) ಲಿಬರೇಶನ್ ಜಿಲ್ಲಾಾ ಕಾರ್ಯದರ್ಶಿ ನಾಗರಾಜ ಪೂಜಾರ್ ಮಾತನಾಡಿ, ಸಿಂಧನೂರು ನಗರದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆೆಯಲ್ಲಿ ವೈದ್ಯರು ಸಮಯಕ್ಕೆೆ ಸರಿಯಾಗಿ ಕರ್ತವ್ಯಕ್ಕೆೆ ಹಾಜರಾಗುತ್ತಿಿಲ್ಲ. ಚಿಕಿತ್ಸೆೆ ಪಡೆಯಲು ರೋಗಿಗಳು ವೈದ್ಯರಿಗಾಗಿ ದಿನವೂ ಗಂಟೆಗಟ್ಟಲೇ ಕಾಯುವಂತಾಗಿದೆ. ಔಷಧಿಗಳ ಕೊರತೆ, ಆಸ್ಪತ್ರೆೆಯಲ್ಲಿನ ಸಿಬ್ಬಂದಿಗಳ ನಡುವಿನ ಹೊಂದಾಣಿಕೆ ಸಮಸ್ಯೆೆ ಸೇರಿದಂತೆ ಹಲವು ವಿಷಯಗಳ ಕುರಿತು ಮೇಲಿಂದ ಮೇಲೆ ನಾಗರಿಕರಿಂದ ವ್ಯಾಾಪಕ ಆರೋಪಗಳು ಕೇಳಿಬಂದಿವೆ. ಸಿಂಧನೂರಿನ ಸಾರ್ವಜನಿಕ ಆಸ್ಪತ್ರೆೆಯು ಬಡ ಜನರಿಗೆ ಚಿಕಿತ್ಸೆೆ ಸೌಲಭ್ಯ ಒದಗಿಸುವಲ್ಲಿ ಸಂಪೂರ್ಣ ವಿಲವಾಗಿದೆ. ಹೆಸರಿಗೆ ಮಾತ್ರ 100 ಹಾಸಿಗೆಯ ಸರ್ಕಾರಿ ಆಸ್ಪತ್ರೆೆಯಾಗಿದ್ದು, ಇಲ್ಲಿ ಚಿಕಿತ್ಸೆೆಗೆ ಬರುವವರು ಒಂದಿಲ್ಲೊೊಂದು ಸಮಸ್ಯೆೆ, ಸವಾಲು ಎದುರಿಸುತ್ತಿಿದ್ದಾಾರೆ. ಬೆಳಿಗ್ಗೆೆ ಜನ ಜಂಗುಳಿಯ ನಡುವೆ ಚೀಟಿ ಕೌಂಟರ್ನ ಮುಂದೆ ನಿಂತು, ಚೀಟಿ ಪಡೆದು ವೈದ್ಯರ ಕೊಠಡಿಯತ್ತ ಹೋದರೆ ಮುಚ್ಚಿಿದ ಬಾಗಿಲು ಇಲ್ಲವೇ, ಬಾಗಿಲು ತೆರೆದಿದ್ದರೂ ವೈದ್ಯರ ಖಾಲಿ ಖುರ್ಚಿ ಕಂಡುಬರುತ್ತದೆ ಎಂದು ಆಕ್ರೋೋಶ ವ್ಯಕ್ತಪಡಿಸಿದರು.
ಹಕ್ಕೊೊತ್ತಾಾಯಗಳು:
ಸಿಂಧನೂರು ತಾಲೂಕು ಸಾರ್ವಜನಿಕ ಆಸ್ಪತ್ರೆೆಯ ಮಂಜೂರಾತಿ ಹುದ್ದೆೆಗಳನ್ನು ಸಂಪೂರ್ಣ ಭರ್ತಿ ಮಾಡಬೇಕು ಹಾಗೂ ಸಮಯಕ್ಕೆೆ ಸರಿಯಾಗಿ ವೈದ್ಯರು ಹಾಜರಿದ್ದು, ರೋಗಿಗಳಿಗೆ ಚಿಕಿತ್ಸೆೆ ನೀಡಬೇಕು. ತಾಲೂಕು ಸಾರ್ವಜನಿಕ ಆಸ್ಪತ್ರೆೆಯಲ್ಲಿ ಕೊರತೆ ಇರುವ ಎಲ್ಲ ರೀತಿಯ ವೈದ್ಯಕೀಯ ಯಂತ್ರೋೋಪಕರಣಗಳು, ಸಾಮಗ್ರಿಿಗಳನ್ನು ಪಟ್ಟಿಿ ಮಾಡಿ, 1 ತಿಂಗಳ ಒಳಗಾಗಿ ಆಸ್ಪತ್ರೆೆಯಲ್ಲಿ ವ್ಯವಸ್ಥೆೆಗೊಳಿಸಬೇಕು. 60 ಹಾಸಿಗೆ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆೆಯ ಮಂಜೂರಾತಿ ಹುದ್ದೆೆಗಳನ್ನು ಸಂಪೂರ್ಣ ಭರ್ತಿ ಮಾಡಬೇಕು. ಸಮಯಕ್ಕೆೆ ಸರಿಯಾಗಿ ವೈದ್ಯರು ಹಾಜರಿದ್ದು, ಮಹಿಳೆಯರು ಮತ್ತು ಮಕ್ಕಳಿಗೆ ಸಕಾಲಕ್ಕೆೆ ಸೂಕ್ತ ಚಿಕಿತ್ಸೆೆ ನೀಡಬೇಕು. ಸಮಯ ಪಾಲನೆ ಮಾಡದ ವೈದ್ಯರ ಮೇಲೆ ಶಿಸ್ತುಕ್ರಮ ಜರುಗಿಸಬೇಕು. ರಾತ್ರಿಿ ವೇಳೆ ಗರ್ಭಿಣಿಯರು, ಬಾಣಂತಿಯರು ಹಾಗೂ ತುರ್ತು ಚಿಕಿತ್ಸೆೆಗೆ ಬಂದ ರೋಗಿಗಳನ್ನು ದಾಖಲಿಸಿಕೊಳ್ಳುವಲ್ಲಿ ನಿರ್ಲಕ್ಷ್ಯ ತೋರುತ್ತಿಿದ್ದು, ಈ ಬಗ್ಗೆೆ ಕೂಡಲೇ ಕ್ರಮ ಕೈಗೊಳ್ಳಬೇಕು. ಕರ್ತವ್ಯ ವೇಳೆಯಲ್ಲಿ ಆಸ್ಪತ್ರೆೆಯ ಕೆಲ ವೈದ್ಯರು ಖಾಸಗಿ ಆಸ್ಪತ್ರೆೆಯಲ್ಲಿ ಸೇವೆ ಸಲ್ಲಿಸುತ್ತಿಿದ್ದು, ಅಂತವರನ್ನು ಪತ್ತೆೆಹಚ್ಚಿಿ ಶಿಸ್ತು ಕ್ರಮ ಜರುಗಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಸವರಾಜ ಕೊಂಡೆ, ಬಸವರಾಜ ಬೆಳಗುರ್ಕಿ, ರಾಘವೇಂದ್ರ ಉಪ್ಪಳ, ಶ್ರೀನಿವಾಸ ಬುಕ್ಕನಟ್ಟಿಿ, ಮಹಾದೇವ ಅಮರಾಪುರ, ಕಂಠೆಪ್ಪ ರೈತನಗರ ಕ್ಯಾಾಂಪ್ ಸೇರಿದಂತೆ ಇನ್ನಿಿತರರು ಇದ್ದರು.
ಕರ್ತವ್ಯದ ಅವಧಿಯಲ್ಲಿ ಖಾಸಗಿ ಕ್ಲಿನಿಕ್ ನಡೆಸುವ ವೈದ್ಯರ ಮೇಲೆ ಕ್ರಮಕ್ಕೆ ಆಗ್ರಹ

