ಸುದ್ದಿಮೂಲ ವಾರ್ತೆ
ಹೊಸಕೋಟೆ, ಜು 24 : ವರ್ಗಾವಣೆಗಾಗಿ ಉತ್ತಮ ದಾಖಲಾತಿಯಿದ್ದ ಶಾಲೆಯನ್ನೇ ಮುಚ್ಚಿಸಿದ ಶಿಕ್ಷಕಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಮತಾ ಸೈನಿಕ ದಳ, ದಲಿತ ಸಂಘರ್ಷ ಸಮಿತಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.
ಈ ವೇಳೆ ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಎ.ಮುನಿರಾಜ ಮಾತನಾಡಿ, ಅರೇಹಳ್ಳಿ ಶಾಲೆಯ ಶಿಕ್ಷಕಿಯಾಗಿದ್ದ ಕವಿತಾ ಬೆಂಗಳೂರಿಗೆ ವರ್ಗಾವಣೆ ಪಡೆಯುವ ನೆಪದಲ್ಲಿ, ಉನ್ನತಾಧಿಕಾರಿಗಳ ಅನುಮತಿಯಿಲ್ಲದೇ ಯಾರಿಗೂ ತಿಳಿಯದಂತೆ ಒಂದೇ ದಿನ ಶಾಲೆಯ ಎಲ್ಲಾ ಮಕ್ಕಳಿಗೆ ಟಿಸಿ ವಿತರಿಸಿ, ಕರ್ತವ್ಯ ಲೋಪ ಎಸಗಿದ್ದಾರೆ. ಇವರ ವಿರುದ್ಧ ಜಿಲ್ಲಾಡಳಿತ ಸೂಕ್ತ ತನಿಖೆ, ನಡೆಸಿ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ದಲಿತ ಸಂಘರ್ಷ ಸಮಿತಿಯ ರಾಜ್ಯ ಉಪಾಧ್ಯಕ್ಷ ಐ.ಆರ್.ನಾರಾಯಣಸ್ವಾಮಿ, , ಜಿಲ್ಲಾ ಉಪಾಧ್ಯಕ್ಷ ಎಂ.ಮುನಿರಾಜು, ದೇವನಹಳ್ಳಿ ತಾಲೂಕು ಅಧ್ಯಕ್ಷ ಮುರುಳಿ, ಶಿವಕುಮಾರ್ ಹಾಗೂ ಆರೇಹಳ್ಳಿ ಗ್ರಾಮಸ್ಥರು ಹಾಜರಿದ್ದರು .
-ಡಾ.ಅನುರಾಧಾ | ಸಿಇಒ
ಶಿಕ್ಷಣ ಇಲಾಖೆ ಡಿಡಿ ಶ್ರೀಕಂಠಯ್ಯ • ಶಾಲೆಗೆ ಸಂಬಂಧಿಸಿದಂತೆ ಎಲ್ಲಾ ಸೌಕರ್ಯ ಒದಗಿಸಲಾಗಿದೆ. ಜತೆಗೆ, ಶಾಲೆ ನಿರಂತರವಾಗಿ ನಡೆಯಲು ಕ್ರಮ ವಹಿಸಲಾಗುತ್ತಿದೆ. ಈ ಹಿಂದೆ ಶಾಲೆ ಮುಚ್ಚುವ ಸ್ಥಿತಿಗೆ ಕಾರಣವಾಗಿರುವ ಶಿಕ್ಷಕಿ ವಿರುದ್ಧ ಸೂಕ್ತ ತನಿಖೆ ಕೈಗೊಂಡು, ಶೀಘ್ರ ವರದಿ ಪಡೆಯಲಾಗುವುದು.