ಸುದ್ದಿಮೂಲವಾರ್ತೆ
ಕೊಪ್ಪಳ ಜು 13: ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಿಂದ ಬೆಳೆ ಒಣಗುತ್ತಿದ್ದು ಬಿತ್ತನೆ ಮಾಡಿದ ರೈತರಿಗೆ ಸರಕಾರ ಪರಿಹಾರ ನೀಡಬೇಕು ಎಂದು ಭಾರತೀಯ ಕಿಸಾನ್ ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷರಾದ ಹನುಮಂತಪ್ಪ ಗೊಂದಿ ಹೇಳಿದರು.
ಅವರು ಗುರುವಾರ ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಮಾತನಾಡಿ ರೈತರ ಬೆಳೆ ಹಾನಿಗೆ ಕೂಡಲೇ ಪರಿಹಾರ ನೀಡಿದರೆ ಹಿಂಗಾರು ಬಿತ್ತನೆಗೆ ರೈತರಿಗೆ ಆರ್ಥಿಕ ಸಹಾಯ ಆಗುತ್ತೆ. ಹಿಂಗಾರು ಬಿತ್ತನೆಯ ಬೀಜ ಗೊಬ್ಬರಕ್ಕೆ ಆರ್ಥಿಕ ನೆರವು ಸಿಕ್ಕಂತಾಗುತ್ತದೆ.
ಮುಂಗಾರು ಬೆಳೆ ನಷ್ಟ ಪರಿಹಾರ ಪ್ರತಿ ಎಕರೆಗೆ 10 ಸಾವಿರ , ಪ್ರತಿ ಹೆಕ್ಟೇರ್ ಗೆ 25 ಸಾವಿರ ರೂ. ಘೋಷಿಸಿ ಜುಲೈ ತಿಂಗಳ ಒಳಗೆ ರೈತರ ಖಾತೆಗೆ ನೇರ ಹಣ ಜಮಾ ಮಾಡಬೇಕು.
ಗ್ರಾಮೀಣ ಪ್ರದೇಶಗಳಲ್ಲಿ ರೈತರು ಗೋ ಆಧಾರಿತ ಕೃಷಿ ನಡೆಸುತ್ತಿದ್ದಾರೆ. ಹಾಲು, ಉಳುಮೆ, ಗೊಬ್ಬರಕ್ಕಾಗಿ ಗೋವನ್ನು ಅವಲಂಬಿಸಿದ್ದಾರೆ. ರಾಜ್ಯದಲ್ಲಿ ಗೋ ಹತ್ಯೆ ನಿರಂತರ ನಡೆಯುತ್ತಿದೆ. ಕಾರಣ ಗೋ ಹತ್ಯೆ ನಿಷೇಧ ಕಾಯ್ದೆ ಇನ್ನಷ್ಟು ಕಠಿಣಗೊಳಿಸಬೇಕು ಎಂದು ಸರಕಾರಕ್ಕೆ ಆಗ್ರಹಿಸಿದರು.
ಭಾರತೀಯ ಕಿಸಾನ್ ಸಂಘದ ನಗರ ಅಧ್ಯಕ್ಷ ಸೋಮಣ್ಣ ದಿನ್ನಿ, ಕಾರ್ಯದರ್ಶಿ ಈಶಪ್ಪ ದಿನ್ನಿ , ಗ್ರಾಮ ಘಟಕಗಳ ಪವನಕುಮಾರ, ವಿಜಯಕುಮಾರ ಉಪಸ್ಥಿತರಿದ್ದರು.