ಸುದ್ದಿಮೂಲ ವಾರ್ತೆ ಮಸ್ಕಿ, ಡಿ.23:
ಉತ್ತಮ ಆಡಳಿತ ಮತ್ತು ಮೂಲಸೌಕರ್ಯ ಪಡೆದುಕೊಳ್ಳಲು ಹಾಲಾಪುರ ಗ್ರಾಾಮ ಪಂಚಾಯಿತ್ವಿಭಜಿಸುವಂತೆ ಕೋರಿ ಹಾಲಾಪುರ ಪಂಚಾಯತಯ ಸದಸ್ಯರು ಮತ್ತು ವಿವಿಧ ಗ್ರಾಾಮಗಳ ಗ್ರಾಾಮಸ್ಥರು ಮಂಗಳವಾರ ತಾಲೂಕು ಪಂಚಾಯಿತಿ ಇ ಓ ಅಮರೇಶ ಯಾದವ ಅವರಿಗೆ ಮನವಿ ಸಲ್ಲಿಸಿದರು.
ಹಾಲಾಪುರ ಗ್ರಾಾಮ ಪಂಚಾಯಿತಿ ವ್ಯಾಾಪ್ತಿಿಯ,18.000 ಜನಸಂಖ್ಯೆೆಯನ್ನು ಹೊಂದಿರುವ, 16 ಗ್ರಾಾಮಗಳು ಹಾಗೂ ಕ್ಯಾಾಂಪುಗಳನ್ನು ಹೊಂದಿದ್ದು,ಕಳೆದ ಹಲವಾರು ವರ್ಷಗಳಿಂದ ಅಭಿವೃದ್ಧಿಿಯಲ್ಲಿ ಹಿಂದುಳಿದಿದೆ.
ಗ್ರಾಾಮ ಪಂಚಾಯಿತಿ ಕಾರ್ಯಗಳಿಗೆ ತುಗ್ಗಲದಿನ್ನಿಿ, ಶಂಕರನಗರ ಕ್ಯಾಾಂಪ್, ಹಿರೆಕಡಬೂರು, ಹಂಚಿನಾಳ, ಎಸ್ ರಾಮಲದಿನ್ನಿಿ ಯಿಂದ ಗ್ರಾಾಪಂಗೆ ಸರಿಸುಮಾರು 12 ಕಿ. ಮೀ ಇದ್ದು,ಸಾರಿಗೆ ಸಂಪರ್ಕ ಇಲ್ಲದಿರುವುದರಿಂದ ಮಹಿಳೆಯರು, ವೃದ್ಧರು ಗ್ರಾಾಮ ಪಂಚಾಯಿತಿ ಕಾರ್ಯಾಲಯಕ್ಕೆೆ ಬರಲು ಕಷ್ಟಕರವಾಗಿದೆ.ಗ್ರಾಾಮೀಣ ಅಭಿವೃದ್ಧಿಿ ಕಾರ್ಯಗಳ ಅನುಷ್ಠಾಾನವು ಕಷ್ಟಕರವಾಗಿದೆ. ಪಂಚಾಯತ್ನ ಒಂದು ನಿರ್ದಿಷ್ಟ ಪ್ರದೇಶವು ಎಲ್ಲಾ ಕ್ಷೇತ್ರಗಳಲ್ಲಿ ಬೆಳೆಯುತ್ತಿಿದ್ದರೂ, ಗ್ರಾಾಮೀಣ ಪ್ರದೇಶಗಳು ಕಳೆದ ಹಲವಾರು ವರ್ಷಗಳಿಂದ ನಿರ್ಲಕ್ಷ್ಯಕ್ಕೆೆ ಒಳಗಾಗಿವೆ. ಆದ್ದರಿಂದ,ಹಾಲಾಪುರ ಪಂಚಾಯಿತಿ ವ್ಯಾಾಪ್ತಿಿಯಲ್ಲಿರುವ ಹಳ್ಳಿಿಗಳ ತ್ವರಿತ ಅಭಿವೃದ್ಧಿಿಯನ್ನು ಹೊಂದಲು ಹಾಲಾಪೂರ ಗ್ರಾಾಪಂ ಯನ್ನು ವಿಭಜಿಸಿ ಇನ್ನೊೊಂದು ಹೊಸ ಗ್ರಾಾಪಂ ರಚನೆಗೆ ಸರ್ಕಾರದಿಂದ ಆದೇಶ ಮಾಡಬೇಕು .ಇಲ್ಲವಾದರೆ ಮುಂಬರುವ ಚುನಾವಣೆ ಬಹಿಷ್ಕಾಾರ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಹಾಲಾಪೂರ ಗ್ರಾಾಮ ಪಂಚಾಯಿತಿ ಸದಸ್ಯರು, ಪಂಚಾಯತಿಯ ವಿವಿಧ ಗ್ರಾಾಮಗಳ ಗ್ರಾಾಮಸ್ಥರು ಉಪಸ್ಥಿಿತರಿದ್ದರು.
ಹಾಲಾಪುರ ಗ್ರಾಮ ಪಂಚಾಯಿತಿ ವಿಭಜನೆಗೆ ಆಗ್ರಹ

