ಸುದ್ದಿಮೂಲ ವಾರ್ತೆ ರಾಯಚೂರು , ಡಿ.01:
ರಾಯಚೂರು ನಗರದ ಎನ್ಜಿಓ ಕಾಲೋನಿಯ ಅಂಗಡಿಯಲ್ಲಿ ಕಳ್ಳತನವಾಗಿರುವ ಘಟನೆ ಭಾನುವಾರ ತಡರಾತ್ರಿಿ ನಡೆದಿದೆ.
ಎನ್ಜಿಓ ಕಾಲೋನಿಯಲ್ಲಿರುವ ಬುಚ್ಚಯ್ಯ ಎನ್ನುವವರಿಗೆ ಸೇರಿದ ಕಿರಾಣಿ ಅಂಗಡಿಗೆ ಹಾಕಿದ್ದ ಬೀಗ ಮುರಿದ ಕಳ್ಳರು ಅಂಗಡಿಯಲ್ಲಿದ್ದ ಸುಮಾರು 25 ಸಾವಿರ ನಗದು, ಗುಟ್ಕಾಾಘಿ, ಪಾನ್ ಮಸಾಲಾ ಚೀಟಿಗಳ ಕದ್ದು ಪರಾರಿಯಾಗಿದ್ದಾಾರೆ.
ಅಂಗಡಿ ಮಾಲೀಕ ಎಂದಿನಂತೆ ಸೋಮವಾರ ಬೆಳಿಗ್ಗೆೆ ಆಗಮಿಸಿದಾಗ ಕಳ್ಳತನವಾಗಿರುವ ಮಾಹಿತಿ ಸಿಕ್ಕಿಿದೆ. ತಕ್ಷಣ ನೇತಾಜಿ ನಗರ ಪೊಲೀಸ್ರ ಗಮನಕ್ಕೆೆ ತಂದಿದ್ದು ಸ್ಥಳಕ್ಕೆೆ ಆಗಮಿಸಿದ ಪೊಲೀಸರು ಪರಿಶೀಲಿಸಿ ಮಾಲೀಕರಿಂದ ಮಾಹಿತಿ ಪಡೆದಿದ್ದಾಾರೆ. ಮಾಲೀಕರು ಈ ಕಳ್ಳತನದ ದೂರು ನೀಡಿದ್ದಾಾರೆ. ದೂರು ದಾಖಲಿಸಿಕೊಳ್ಳುವುದಾಗಿ ಠಾಣೆ ಪಿಎಸ್ಐ ತಿಳಿಸಿದ್ದಾಾರೆ.
ಗಸ್ತು :
ಕಳೆದ ಮೂರು ದಿನಗಳಿಂದಲೂ ನೇತಾಜಿ ನಗರ ಠಾಣೆಯ ವ್ಯಾಾಪ್ತಿಿಯ ಎನ್ಜಿಓ ಕಾಲೋನಿ, ಠಾಣೆ ಪಕ್ಕದಲ್ಲಿಯ ಮನೆಯೊಂದರಲ್ಲಿ ಕಳ್ಳತನಕ್ಕೆೆ ಯತ್ನ ನಡೆದಿತ್ತುಘಿ. ಈ ಬಗ್ಗೆೆ ಗಸ್ತಿಿನಲ್ಲಿದ್ದ ಪೊಲೀಸರ ಗಮನಕ್ಕೂ ನಿವಾಸಿಗಳು ತಂದಿದ್ದರು. ಅಲ್ಲದೆ, ಗಸ್ತು ಬಿಗಿಗೊಳಿಸಲು ಕೋರಿದ್ದರು. ಆದರೂ, ಅದೇ ಬಡಾವಣೆಯಲ್ಲಿನ ಕಿರಾಣಿ ಅಂಗಡಿಯಲ್ಲಿ ಕಳ್ಳತನವಾಗಿದ್ದು ಪೊಲೀಸರ ರಾತ್ರಿಿ ಗಸ್ತು ಬಿಗಿಗೊಳಿಸಿಲ್ಲ ಎಂಬ ಅಸಮಾಧಾನ ನಿವಾಸಿಗಳಲ್ಲಿದೆ.
ಅಲ್ಲದೆ, ಇಬ್ಬರೇ ಪೊಲೀಸರು ಎನ್ಜಿಓ ಕಾಲೋನಿ ಸೇರಿ ಐದಕ್ಕೂ ಅಧಿಕ ಕಾಲೋನಿಗಳಿಗೆ ಇಡೀ ರಾತ್ರಿಿ ಗಸ್ತು ಸುತ್ತುವುದು ಕಷ್ಟ ಎನ್ನುವ ಮಾತಿದೆ. ಅಲ್ಲದೆ, ಕಳ್ಳತನದ ಪ್ರಯತ್ನಗಳು ಗಮನಕ್ಕೆೆ ಬಂದ ಮೇಲೂ ರಾತ್ರಿಿ ಸಮಯ ಬದಲಿಸಿ ಪೊಲೀಸರು ಗಸ್ತು ಸಂಚರಿಸುತ್ತಿಿಲ್ಲ ಎಂಬ ಬೇಸರವಿದ್ದುಘಿ. ಮಧ್ಯರಾತ್ರಿಿ 12 ರಿಂದ ಬೆಳಗಿನ ಜಾವ 2 ಗಂಟೆಯ ಮಧ್ಯೆೆಯೇ ಈ ಕಳ್ಳತನ ನಡೆದಿದ್ದುಘಿ. ಈ ಸಮಯದಲ್ಲಿ ಪೊಲೀಸರು ಗಸ್ತು ಹಾಕಬೇಕು ಎಂಬ ಒತ್ತಾಾಯ ಕೇಳಿ ಬಂದಿದೆ. ಗಸ್ತು ಸಮಯ ಬದಲಿಸಿ ಬಿಗಿಗೊಳಿಸಲಾಗುವುದು ಎಂದು ಪಿಎಸ್ಐ ತಿಳಿಸಿದ್ದಾಾರೆ.

