ಸುದ್ದಿಮೂಲ ವಾರ್ತೆ
ಹೊಸಕೋಟೆ, ಅ. 26 : ವರ್ತೂರು ಸಂತೋಷ್ ರವರನ್ನುನೊಟೀಸ್ ನೀಡದೆ ಬಂಧಿಸಿರುವುದನ್ನು ಖಂಡಿಸಿ ಹೊಸಕೋಟೆ ಹೂಮಂಡಿ ಸರ್ಕಲ್ ನಿಂದ ಬಾಲಚಂದ್ರನ್ ನೇತೃತ್ವದಲ್ಲಿ ನೂರಾರು ಯುವಕರು ತಹಶೀಲ್ದಾರ ಕಛೇರಿಯವರೆಗೂ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಟೌನ್ ಬ್ಯಾಂಕ್ ಮಾಜಿ ಅಧ್ಯಕ್ಷ ಬಾಲಚಂದ್ರನ್ ವರ್ತೂರು ಸಂತೋಷ್ ಅಪ್ಪಟ ರೈತ ಕುಟುಂಬದಿಂದ ಬಂದವರು ಹಳ್ಳಿಕಾರ್ ಎತ್ತುಗಳನ್ನು ಇಡಿ ದೇಶಕ್ಕೆ ವಿಸ್ತರಿಸಿ ಖ್ಯಾತಿ
ಪಡೆದವರು ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ. ಇಂತಹವರನ್ನು ಇಂತಹ ಒಬ್ಬ ರೈತನ ಮಗ ಬಿಗ್ ಬಾಸ್ ಸ್ಪರ್ಧೆಯಲ್ಲಿರುವಾಗ ಸಮಯದಲ್ಲಿ ಹುಲಿ ಉಗರಿನ ಲಾಕೇಟ್ ಹಾಕಿದ್ದಾರೆ ಅಂತ ಅವರ ಮೇಲೆ ಆರೋಪ ಇದೆ ಆದರೆ ಬಿಗ್ ಬಾಸ್ ಮನೆಯಲ್ಲಿದ್ದಾಗ ನೊಟೀಸ್ ಸಹ ಕೊಡದೆ ಅವರನ್ನು ಆರೆಸ್ಟ್ ಮಾಡಿದ್ದಾರೆ.
ಇನ್ನೂಳಿದವರಿಗೆ ನೊಟೀಸ್ ಜಾರಿ ಮಾಡಿ ಹುಡುಕಾಟ ಶುರು ಮಾಡಿದ್ದಾರೆ ಅದೇ ರೀತಿ ಸಂತೋಷ್
ಅವರಿಗೂ ನೊಟೀಸ್ ಜಾರಿ ಮಾಡಿ ಸಮಯ ಕೊಡಬೇಕಿತ್ತು. ಏಕಾಏಕಿ ರಾತ್ರೋ ರಾತ್ರಿ ಬಂಧಿಸಿರುವುದು ಯಾವ ನ್ಯಾಯ ಕಾನೂನಿಗಿಂತ ಯಾರು ದೊಡ್ಡವರಲ್ಲ ಅವರ ತಾಯಿ ಹೇಳಿದ್ದಾರೆ ಅದು ಹುಲಿ ಉಗುರು ಅಲ್ಲಂತ ಅವರನ್ನು ಈ ಕೂಡಲೇ ಬಿಡುಗಡೆ ಮಾಡಬೇಕು ಎಂಬುದು ನಮ್ಮ ಒತ್ತಾಯ. ಬಿಗ್ ಬಾಸ್ ಮನೆಯೊಳಗೆ ಸೇರಿಸಿಕೊಳ್ಳಬೇಕು ಎಂದರು.
ಬಿರೇಶ್ ಮಾತನಾಡಿ ಬಡ ರೈತ ವರ್ತೂರು ಸಂತೋಷ್ ಅವರ ವ್ಯಕ್ತಿತ್ವದ ಬಗ್ಗೆ ಕೆಲವರಿಗೆ ಅಸುಯೇ ಇದೆ ಒಳ್ಳೆಯ ಹೆಸರು ಮಾಡುತ್ತಿರುವುದನ್ನು ಕೆಲವರು ಸಹಿಸಿಕೊಳ್ಳಲಾಗದೆ ಈ ರೀತಿಯ ತೇಜೋವಧೆ ಮಾಡಲು ಹೋರಟಿದ್ದಾರೆ. ನೊಟೀಸ್ ಕೊಡದೇ ಏಕಾಏಕಿ ಆರೆಸ್ಟ್ ಮಾಡಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಇನ್ನುಳಿದವರಿಗೆ ಎಚ್ಚೆತ್ತುಕೊಂಡು ನೊಟೀಸ್ ನೀಡುತ್ತಿದ್ದಾರೆ. ಈಗ ಡ್ಯುಪ್ಲಿಕೇಟ್ ಮಾಡುತ್ತಿದ್ದಾರೆ. ಓರಿಜಿನಲ್ ಇಟ್ಟುಕೊಂಡು ಅವರೆಲ್ಲರನ್ನು ಹಿಡಿದರೆ ಜೈಲ್ ಭರ್ತಿಯಾಗುತ್ತದೆ. ಇಂತಹ ಪಿತೂರಿಯನ್ನು ಕಾಣದ ಕೈಗಳು ಮಾಡಿದ್ದು ಅವರ ಯಶಸ್ಸು ಸಹಿಸಿಕೊಳ್ಳಲಾಗವರು ಈ ರೀತಿಯ ಆರೋಪಗಳನ್ನು ಮಾಡಿದ್ದಾರೆ. ಇವತ್ತು ಅವರು ಜೈಲ್ ಗೆ ಹೋಗಿದ್ದಾರೆ. ಏನೇ ಆದರು ಸರ್ಕಾರ ಕ್ರಮ ಕೈಗೊಂಡು ಅವರನ್ನು ಬಿಡುಗಡೆಗೊಳಿಸಬೇಕು ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟದಎಚ್ಚರಿಕೆಯನ್ನು ನೀಡಿದರು.