ಸುದ್ದಿಮೂಲ ವಾರ್ತೆ ರಾಯಚೂರು, ಜ.28:
ರಾಯಚೂರಿನ ಹರಿಜನವಾಡದ ಗಾಜಗಾರ ಪೇಟೆ ಸರ್ಕಾರಿ ಶಾಲೆಯ ಕೊಠಡಿಗೆ ಹೊಂದಿಕೊಂಡು ವಿದ್ಯುತ್ ಪರಿವರ್ತಕ ನಿರ್ಮಿಸುವುದಕ್ಕೆೆ ನವರತ್ನ ಯುವಕ ಸಂಘ ವಿರೋಧಿಸಿದೆ.
ಇಂದು ನಗರದಲ್ಲಿ ಬಿಇಓ ಅವರಿಗೆ ಮನವಿ ಸಲ್ಲಿಸಿದ ಸಂಘದ ಪದಾಧಿಕಾರಿಗಳು ಶಾಲೆಯ ಆವರಣ ಹಾಗೂ ಕೊಠಡಿಗಳಲ್ಲಿ ನೂರಾರು ಬಡ ವಿದ್ಯಾಾರ್ಥಿಗಳು ಅಭ್ಯಾಾಸ ಮಾಡುತ್ತಿಿದ್ದಾಾರೆ. ಅಲ್ಲಿ ವಿದ್ಯುತ್ ಪರಿವರ್ತಕ ಸ್ಥಾಾಪಿಸಲು ಶಿಕ್ಷಣ ಇಲಾಖೆ ಅನುಮತಿ ಪಡೆಯದೆ ಅದೇಗೆ ಜೆಸ್ಕಾಾಂನವರು ಸ್ಥಾಾಪಿಸಿದರು ಎಂದು ಪ್ರಶ್ನಿಿಸಿದರು.
ಇದರಿಂದ ವಿದ್ಯಾಾರ್ಥಿಗಳು ಶಾಲೆಗೆ ಹೋಗಲು ಹಿಂದೇಟು ಹಾಕುತ್ತಿಿದ್ದಾಾರೆ. ಏನಾದರೂ ತೊಂದರೆಯಾದರೆ ಅವಘಡವಾದರೆ ಹೊಣೆ ಯಾರು ಎಂದು ಬೇಸರ ವ್ಯಕ್ತಪಡಿಸಿದರು.
ತಕ್ಷಣ ಶಾಲೆ ಜಾಗ ಅತಿಕ್ರಮಿಸಿ ವಿದ್ಯುತ್ ಪರಿವರ್ತಕ ನಿರ್ಮಿಸಿದ ಸ್ಥಳ ಪರಿಶೀಲಿಸಿ ತೆರವಿಗೆ ಆದೇಶ ಮಾಡಬೇಕು, ಮಾಡದೆ ಹೋದರೆ ಪಾಲಕರು ಮಕ್ಕಳ ಜೊತೆ ಸೇರಿ ಮುಂದಿನ ಹೋರಾಟದ ಜೊತೆಗೆ ಅಗತ್ಯಬಿದ್ದರೆ ತೆರವಿಗೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಶರಣಪ್ಪಘಿ,ನಾಗರಾಜ, ಕೆಪಿ ಅನಿಲಕುಮಾರ್, ಚಂದ್ರುಘಿ, ವೆಂಕಟೇಶ, ಆಂಜನೇಯ್ಯ ಇತರರಿದ್ದರು.
ಗಾಜಗಾರಪೇಟೆ ಶಾಲೆಯಲ್ಲಿ ಟ್ರಾನ್ಸಾರ್ಮರ್ ತೆರವಿಗೆ ಆಗ್ರಹ

