ಸುದ್ದಿಮೂಲ ವಾರ್ತೆ ಬೀದರ್, ಡಿ.29:
ಭಾಲ್ಕಿಿ ತಾಲೂಕಿನ ಕೃಷಿ ಇಲಾಖೆ ವ್ಯಾಾಪ್ತಿಿಯ ಮೇಹಕರ್ ಗ್ರಾಾಮದಲ್ಲಿ ಜಲಾಶಯ
(ಚೆಕ್ ಡ್ಯಾಾಂ) ಯೋಜನೆಯಡಿ ಭಾರೀ ಅಕ್ರಮ ಹಾಗೂ ಭ್ರಷ್ಟಾಾಚಾರ ನಡೆದಿರುವ ಆರೋಪ ಕೇಳಿಬಂದಿದೆ. ಈ ಸಂಬಅಧ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಮೇತ್ರೆೆ ಮತ್ತು ಕೃಷಿ ಅಧಿಕಾರಿ ರಾಜೇಂದ್ರ ಯಾಕತಪೂರೆ ವಿರುದ್ಧ ತನಿಖೆ ನಡೆಸಿ ತಕ್ಷಣ ಅಮಾನತು ಮಾಡುವಂತೆ ಇಂಡಿಯನ್ ನ್ಯಾಾಷನಲ್ ಭೀಮ ಆರ್ಮಿ ಸಂಘಟನೆಗಳ ಮುಖಂಡರು ಜಂಟಿ ಕೃಷಿ ನಿರ್ದೇಶಕರಿಗೆ
ದೂರು ಸಲ್ಲಿಸಿದ್ದಾರೆ.
ದೂರಿನ ಪ್ರಕಾರ, ಚೆಕ್ ಡ್ಯಾಾಂ ಕಾಮಗಾರಿಗೆ ಸೂಕ್ತ ಸ್ಥಳ ಆಯ್ಕೆೆ ಮಾಡದೇ, ಸಿಮೆಂಟ್ ಪ್ರಮಾಣ ಕಡಿಮೆ ಬಳಸಿ, ಬೋಲ್ಡರ್ಗಳಿಂದ ಪಾಯಾ ತುಂಬಿಸಿ ಸರ್ಕಾರದ ಅನುದಾನ ದುರುಪಯೋಗಪಡಿಸಲಾಗಿದೆ. ಸುಮಾರು 2 ಕೋಟಿ ರೂ. ಅನುದಾನ ಉದ್ದೇಶಪೂರ್ವಕವಾಗಿ ಡ್ರಾಾ ಮಾಡಿ ತ್ವರಿತವಾಗಿ ಕಾಮಗಾರಿ ಮುಗಿಸಿರುವ ಆರೋಪವೂ ಕೇಳಿಬಂದಿದೆ. ಗುತ್ತಿಿಗೆದಾರರಿಂದ ಲಂಚ ಪಡೆಯದೇ ಕಾಮಗಾರಿ ನೀಡುವುದಿಲ್ಲ ಎನ್ನುವ ನೇರ ಬೇಡಿಕೆಯೂ ಇದ್ದು, ಪ್ರತಿ ಚೆಕ್ ಡ್ಯಾಾಂ ಕೆಲಸಕ್ಕೆೆ ಲಕ್ಷಾಂತರ ರೂ. ಅಕ್ರಮ ಹಣ ವಸೂಲಿ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಹಿಂದೆ ಔರಾದ ತಾಲೂಕಿನಲ್ಲಿಯೂ ಇದೇ ರೀತಿಯ ಭ್ರಷ್ಟಾಾಚಾರ ನಡೆದಿತ್ತು ಎಂಬ ಆರೋಪವಿದ್ದು, ಪ್ರಸ್ತುತ ನಡೆಯುತ್ತಿಿರುವ ಕಾಮಗಾರಿ ತಕ್ಷಣ ಸ್ಥಗಿತಗೊಳಿಸಿ ಮೂರನೇ ಪಕ್ಷದ ಮೂಲಕ ಗುಣಮಟ್ಟ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಲಾಗಿದೆ.
ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಲೋಕಾಯುಕ್ತರಿಗೆ ದೂರು ಸಲ್ಲಿಸುವುದರ ಜೊತೆಗೆ, ಸಂಬಂಧಿತ ಸಂಘಟನೆಗಳ ವತಿಯಿಂದ ಸಾಂಕೇತಿಕ ಧರಣಿ ನಡೆಸಲಾಗುವುದು ಎಂದು ಇಂಡಿಯನ್ ನ್ಯಾಾಷನಲ್ ಭೀಮ ಆರ್ಮಿ ಸಂಘಟನೆಗಳ ಮುಖಂಡರು ಎಚ್ಚರಿಕೆ ನೀಡಲಾಗಿದೆ.
ಈ ಸಂದರ್ಭದಲ್ಲಿ ರಾಜ್ಯ ಸಂಸ್ಥಾಾಪಕ ರಾಜ್ಯಾಾಧ್ಯಕ್ಷರಾದ ದೀಲಿಪಕುಮಾರ ವರ್ಮಾ, ರಾಜ್ಯ ಉಪಾಧ್ಯಕ್ಷರು ಅಶೋಕ ಭಾವಿದೊಡ್ಡಿಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ ಭಾವಿದೊಡ್ಡಿಿ, ಅನೀಲಕುಮಾರ ಬಾಜಿ, ಭೀಮರಾವ ಖಂದಾರೆ, ಜಗನ್ನಾಾಥ ಹೊನ್ನಾಾ, ಭಗತ್ ಎಸ್.ಶಿಂಧೆ, ಸಚೀನ ಶಿಂಧೆ ಸೇರಿದಂತೆ ಅನೇಕರು ಉಪಸ್ಥಿಿತರಿದ್ದರು.
ಚೆಕ್ ಡ್ಯಾಾಂನಲ್ಲಿ ಭ್ರಷ್ಟಾಚಾರ ಆರೋಪ – ಕೃಷಿ ಅಧಿಕಾರಿಗಳ ಅಮಾನತ್ತಿಗೆ ಆಗ್ರಹ

