ಸುದ್ದಿಮೂಲ ವಾರ್ತೆ ರಾಯಚೂರು , ಡಿ.10:
ಜಿಲ್ಲೆೆಯ ಜಾಗಟಗಲ್ ಸೀಮಾಂತರದಲ್ಲಿ ರಾಜಗೋಪಾಲ ಎನ್ನುವವರಿಗೆ ಸೇರಿದ ಜಮೀನಿನಲ್ಲಿನ ಭತ್ತವನ್ನು ರಾತೋರಾತ್ರಿಿ ಕೋಯ್ಲು ಮಾಡಿ ಕಳ್ಳತನ ಮಾಡಿದ ದೂರು ಪಡೆದ ಗಬ್ಬೂರು ಪೊಲೀಸರು ಕ್ರಮ ವಹಿಸದೆ ನಿರ್ಲಕ್ಷಿಿಸುತ್ತಿಿದ್ದಾಾರೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕಿ ವಿಜಯರಾಣಿ ಸಿರವಾರ ದೂರಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಟಿಿಯಲ್ಲಿ ಮಾತನಾಡಿ, ಸರ್ವೆ ನಂ.84/2/3ರಲ್ಲಿರುವ ಏಳು ಎಕರೆ ಜಮೀನು ಬಸ್ಸಮ್ಮ ಎನ್ನುವವರು ರಾಜಗೋಪಾಲರಾವ್ ಮತ್ತು ಶೇಷಾದ್ರಿಿ ಎನ್ನುವವರಿಗೆ ಮಾರಾಟ ಮಾಡಿ ಕಾನೂನು ಬದ್ದವಾಗಿ ನೋಂದಣಿ ಮಾಡಿಸಿಕೊಂಡಿದ್ದಾಾರೆ. ಆದರೆ, ರಾಚಪ್ಪ ಎನ್ನುವವರು ಅರಕೇರಾ ನಾಡಕಚೇರಿಗೆ ದೂರು ದಾಖಲಿಸಿದ್ದರಿಂದ ಮುಟೇಷನ್ ಆಗಿಲ್ಲ.ಆದರೆ, ಕಬ್ಜಾಾದಲ್ಲಿರುವ ಬಸ್ಸಮ್ಮಘಿ, ಲೀಜುದಾರರಾದ ಶ್ರೀನಿವಾಸ, ವೌನೇಶ ಅವರಿದ್ದು ನ.30ರಂದು ರಾತ್ರಿಿ ರಾಚಪ್ಪಘಿ ಸೇರಿ ಆರು ಜನ ಅಕ್ರಮವಾಗಿ ಎರಡು ರಾಶಿಯಂತ್ರದೊಂದಿಗೆ ಭತ್ತ ಕಟಾವು ಮಾಡಿಕೊಂಡು ಸುಮಾರು 670 ಚೀಲ ಸಾಗಣೆ ಮಾಡಿದ್ದಾಾರೆ ಎಂದು ದೂರಿದರು.
ಈ ಬಗ್ಗೆೆ ಜಮೀನಿನ ಮೂಲ ಮಾಲೀಕರು ಬಸಮ್ಮ, ರಾಜಗೋಪಾಲರಾವ್ ಗಬ್ಬೂರು ಠಾಣೆಯಲ್ಲಿ ರಾಚಪ್ಪ, ಕಾಸಲಯ್ಯಘಿ, ಶಿವಪ್ಪಘಿ, ಸಣ್ಣ ಶಿವಪ್ಪಘಿ, ಮೂಕಪ್ಪ ಹಾಗೂ ಮಲ್ಲಪ್ಪ ಸೇರಿ ಆರು ಜನರ ವಿರುದ್ಧ ದೂರು ನೀಡಿದರೂ ಇದುವರೆಗೂ ಅವರ ಬಂಧಿಸುತ್ತಿಿಲ್ಲಘಿ, ಕಟಾವು ಮಾಡಿದ ಭತ್ತ, ರಾಶಿಯಂತ್ರಗಳ ವಶಕ್ಕೂ ಪಡೆಯುತ್ತಿಿಲ್ಲಘಿ ಎಂದು ಆಪಾದಿಸಿದರು.
ಜಮೀನು ಮಾಲೀಕತ್ವದ ಬಗ್ಗೆೆ ಕಾನೂನು ಹೋರಾಟ ಮಾಡುತ್ತೇವೆ. ಆದರೆ, ಭತ್ತ ಕಟಾವು ಮಾಡಿ ವಂಚಿಸಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಭತ್ತ ಮರಳಿಸಬೇಕು, ಲಕ್ಷಾಾಂತರ ಖರ್ಚು ಮಾಡಿದವರಿಗೆ ನಷ್ಟ ತರುವುದು ಸಲ್ಲದು ಎಂದು ದೂರಿದರು.
ಸುದ್ದಿಗೋಷ್ಠಿಿಯಲ್ಲಿ ಬಸಮ್ಮಘಿ, ರಾಜಗೋಪಾಲರಾವ್, ಜೀವನರೆಡ್ಡಿಿಘಿ, ದಲಿತ ಸೇನೆ ಸಂಘಟನಾ ಕಾರ್ಯದರ್ಶಿ ಜಾವೀದ್ ಖಾನ್, ಜಿಲ್ಲಾಾಧ್ಯಕ್ಷ ಮಾರುತಿ, ಸುರೇಶ ಬಾಬು ಇತರರಿದ್ದರು.
ಜಾಗಟಗಲ್ನಲ್ಲಿ ಅಕ್ರಮವಾಗಿ ಭತ್ತ ಕೋಯ್ಲು, ಕಳ್ಳತನ ಮಾಡಿದವರ ಬಂಧನಕ್ಕೆ ಆಗ್ರಹ

