ಸುದ್ದಿಮೂಲ ವಾರ್ತೆ ದೇವದುರ್ಗ, ಜ.17:
ರಾಯಚೂರಿನಲ್ಲಿ ೆ.6.7 ಮತ್ತು 8ವರೆಗೆ ಮೂರು ದಿನಗಳ ಕಾಲ ನಡೆಯಲಿರುವ ರಾಯಚೂರು ಉತ್ಸವ ಕಾರ್ಯಕ್ರಮದಲ್ಲಿ ದ್ವಾಾರಗಳಿಗೆ ಡಾ.ಬಿ.ಆರ್. ಅಂಬೇಡ್ಕರ್ ಸೇರಿದಂತೆ ಮಹನೀಯರ ಹೆಸರುಗಳು ಹಾಕುವಂತೆ ಎಂಆರ್ಎಚ್ಎಸ್ ಜಿಲ್ಲಾಧ್ಯಕ್ಷ ಹಾಗೂ ಛಲವಾದಿ ಮಹಾಸಭಾ ತಾಲೂಕಾಧ್ಯಕ್ಷ ಮಹಾಂತೇಶ ಭವಾನಿ ಒತ್ತಾಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಂಟಿ ಸುದ್ದಿಗೋಷ್ಠಿಿಯಲ್ಲಿ ಅವರು ಮಾತನಾಡಿದರು. ಗಾಳಿ ಪಟ್ಟ ಹಾರಿಸುವ ಕಾರ್ಯಕ್ರಮ ಹಾಗೂ ಉತ್ಸವ ಕಾರ್ಯಕ್ರಮದಲ್ಲಿ ಹೆಚ್ಚಾಾಗಿ ಕನ್ನಡ ಭಾಷೆ ಕಡ್ಡಾಾಯವಾಗಿ ಬಳಕೆಗೆ ಜಿಲ್ಲಾಡಳಿತ ಹೆಚ್ಚಿಿನ ಗಮನಹರಿಸಬೇಕು ಎಂದು ಕಸಾಪ ತಾಲೂಕಾಧ್ಯಕ್ಷ ಎಚ್.ಶಿವರಾಜ ಒತ್ತಾಾಯಿಸಿದರು.
ಇದೇ ಸಂದರ್ಭದಲ್ಲಿ ಪುರಸಭೆ ಮಾಜಿ ಸದಸ್ಯ ಮಾನಪ್ಪ ಮೇಸಿ, ಚಂದ್ರಶೇಖರ ಛಲವಾದಿ, ವೆಂಕಟೇಶ ಜಾಲಹಳ್ಳಿಿ ಸೇರಿದಂತೆ ಇತರರು ಇದ್ದರು.
ಜಿಲ್ಲಾ ಉತ್ಸವ ; ಮಹನೀಯರ ಹೆಸರಿನ ದ್ವಾರ ನಿರ್ಮಾಣಕ್ಕೆ ಮನ್ನಾಪೂರಿ ಆಗ್ರಹ

