ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.04:
ತುಂಗಭದ್ರಾಾ ಅಚ್ಚುಕಟ್ಟು ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿಿರುವ ನೀರಾವರಿ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಾಯಿಸಿ, ಸಹಾಯಕ ಕಾರ್ಯಪಾಲಕ ಅಭಿಯಂತರರು ತುರ್ವಿಹಾಳ ಉಪ ವಿಭಾಗ ಅವರಿಗೆ, ತುಂಗಭದ್ರಾಾ ನೀರಾವರಿ ಕಾರ್ಮಿಕರ ಸಂಘ (ಎಐಸಿಸಿಟಿಯು)ದಿಂದ ಮನವಿ ಸಲ್ಲಿಸಲಾಯಿತು.
ತುಂಗಭದ್ರಾಾ ನೀರಾವರಿಯ ಕಾಲುವೆ ಮೇಲೆ ಕೆಲಸ ಮಾಡುವ ಕಾರ್ಮಿಕರಿಗೆ ನೀರು ನಿಂತ ನಂತರ, ಕರ್ನಾಟಕ ನೀರಾವರಿ ನಿಗಮದ ನಿರ್ದೇಶಕರ ಅಂತಿಮ ಅನುಮೋದನೆಯಂತೆ ಕೆಲಸದಲ್ಲಿ ಮುಂದುವರಿಸುವುದು, ಯರಮರಸ್ ವೃತ್ತ, ಸಿಂಧನೂರು, ಸಿರವಾರ ಮತ್ತು ಯರಮರಸ್ ವಿಭಾಗದ ಎಲ್ಲಾಾ ಉಪ ವಿಭಾಗದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಜೂನ್ನಿಂದ ಇಲ್ಲಿಯವರೆಗೂ ಬಾಕಿ ವೇತನ, ಪಿಎ್, ಇಎಸ್ಐ ಪಾವತಿ ಮಾಡಬೇಕು.
ಏಪ್ರಿಿಲ್ ತಿಂಗಳಿನಿಂದ ಕಾರ್ಮಿಕರ ತುಟ್ಟಿಿಭತ್ಯೆೆ ಕಾರ್ಮಿಕರ ಖಾತೆಗೆ ಜಮಾ ಮಾಡಬೇಕು, ಪ್ರತಿ ತಿಂಗಳು ವೇತನ, ಪಿಎ್, ಇಎಸ್ಐ ಪಾವತಿಸದ ಗುತ್ತಿಿಗೆದಾರರ ಗುತ್ತಿಿಗೆ ಒಪ್ಪಂದ ರದ್ದುಪಡಿಸಿ, ಕಪ್ಪುುಪಟ್ಟಿಿಗೆ ಸೇರಿಸಬೇಕು, ಗುತ್ತಿಿಗೆ ಪದ್ಧತಿ ರದ್ದುಪಡಿಸಿ ನೇರ ಪಾವತಿಗೆ ಶಿಾರಸು ಮಾಡಬೇಕು, ಕಾಲುವೆ ಮೇಲೆ ಕೆಲಸ ಮಾಡುವ ಕಾರ್ಮಿಕರಿಗೆ ಸಮವಸ, ಐಡಿಕಾರ್ಡ್ ಸೇರಿದಂತೆ ಮೂಲಸೌಕರ್ಯ ನೀಡಬೇಕು, ಕಚೇರಿ ಮತ್ತು ಕ್ಯಾಾಂಪ್ನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ತಿಂಗಳಪೂರ್ತಿ ವೇತನ ಪಾವತಿ ಮಾಡಬೇಕು, 26 ದಿನಗಳಿಗೆ ವೇತನ ಪಾವತಿ ಮಾಡುತ್ತಿಿರುವುದನ್ನು ಕೂಡಲೇ ನಿಲ್ಲಿಸಿ ಮೊದಲಿನಂತೆ ವೇತನ ಪಾವತಿಸಬೇಕು, ಕಾರ್ಮಿಕರಿಗೆ ಉದ್ಯೋೋಗದ ಭದ್ರತೆ ಒದಗಿಸಬೇಕು ಸೇರಿದಂತೆ ಇನ್ನಿಿತರ ಬೇಡಿಕೆಗಳುಳ್ಳ ಮನವಿಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ಕೆ. ನಾಗಲಿಂಗಸ್ವಾಾಮಿ, ಪ್ರಧಾನ ಕಾರ್ಯದರ್ಶಿ ಎಂ.ಬಸವರಾಜ, ಸಿಂಧನೂರು ವಿಭಾಗದ ಅಧ್ಯಕ್ಷ ವಾದಿರಾಜ ಕುಲಕರ್ಣಿ, ತುರುವಿಹಾಳ ಉಪ ವಿಭಾಗದ ಅಧ್ಯಕ್ಷ ಶರಣಪ್ಪ ಉದ್ಬಾಾಳ ಇದ್ದರು.
ತುಂಗಭದ್ರಾ ನೀರಾವರಿ ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಒತ್ತಾಯ

