ಸುದ್ದಿಮೂಲ ವಾರ್ತೆ ಬಳ್ಳಾರಿ, ಜ.24:
ಬಳ್ಳಾಾರಿ ನಗರದಲ್ಲಿ ನಡೆಯುತ್ತಿಿರುವ ರಾಜಕೀಯ ಹಿಂಸಾಚಾರ, ಶಾಂತಿ ಭಂಗದ ವಾತಾವರಣ ನಿವಾರಣೆ ಮಾಡಿ ಅಕ್ರಮ, ಅವ್ಯವಹಾರಗಳಿಗೆ ಕಡಿವಾಣ ಹಾಕಲು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಬಳ್ಳಾಾರಿ ಜಿಲ್ಲಾಾ ಸಮಿತಿ ಆಗ್ರಹಿಸಿದೆ.
ಜಿಲ್ಲಾಾಧಿಕಾರಿಗಳ ಮೂಲಕ ಮುಖ್ಯಮಂತ್ರಿಿಗಳಿಗೆ ಮನವಿ ಸಲ್ಲಿಸಿರುವ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಬಳ್ಳಾಾರಿ ಜಿಲ್ಲಾಾ ಸಮಿತಿಯು, ಮಹರ್ಷಿ ವಾಲ್ಮೀಕಿ ಅವರ ಪುತ್ಥಳಿಯ ಅನಾವರಣದ ಸಂದರ್ಭದಲ್ಲಿ ನಡೆದ ಗಲಭೆಯಿಂದ ನಿರಂತರ ರಾಜಕೀಯ ವಾಗ್ಧಾಾಳಿಗಳು ನಡೆದು, ದ್ವೇಷ, ಪ್ರತೀಕಾರ, ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ. ಕಾರಣ ಸರ್ಕಾರ ಈ ಸಮಸ್ಯೆೆಗೆ ಶೀಘ್ರದಲ್ಲೇ ಪರಿಹಾರ ಸೂಚಿಸಬೇಕು ಎಂದು ಮನವಿ ಮಾಡಿದೆ.
ಬಳ್ಳಾಾರಿ ಜಿಲ್ಲೆೆಯಲ್ಲಿ ಅಕ್ರಮ ಗಣಿಗಾರಿಕೆಯ ಹಗರಣಗಳ ಬಳಿಕ ಲೋಕಾಯುಕ್ತ ವರದಿಯಲ್ಲಿ ಅಕ್ರಮಗಳು ಸಾಬೀತಾಗಿದ್ದರೂ ಯಾರೊಬ್ಬರ ವಿರುದ್ಧ ಶಿಸ್ತುಕ್ರಮ ಕೈಗೊಂಡಿಲ್ಲ. ಬಳ್ಳಾಾರಿಯಲ್ಲಿ ‘ರಿಪಬ್ಲಿಿಕ್’ ಎಂದು ಕುಖ್ಯಾಾತಿಗೆ ಒಳಗಾಗಿಸಿದ್ದೀರಿ. ಅಕ್ರಮ ಮರಳುಗಾರಿಕೆ, ಜೂಜಾಟ, ಇಸ್ಪೇಟ್ ಕ್ಲಬ್, ಮಟಕಾ, ಗಾಂಜಾ ಮಾರಾಟ, ಡ್ರಗ್ಸ್ ಜಾಲ ದಿನೇ ದಿನೇ ವ್ಯಾಾಪಕವಾಗಿ ವಿಸ್ತರಿಸುತ್ತಿಿದೆ. ಆಡಳಿತದಲ್ಲಿ ಬಿಗಿ ಇಲ್ಲವಾಗಿದೆ ಎಂದು ಸಮಿತಿಯು ಆತಂಕ ವ್ಯಕ್ತಪಡಿಸಿದೆ.
ಬಳ್ಳಾಾರಿಯ ಬೆಳಗಲ್ಲು ಕ್ರಾಾಸ್ ಬಳಿಯ ಜೆ-ಸ್ಕ್ವೇರ್ನಲ್ಲಿದ್ದ ಶಾಸಕ ಜಿ. ಜನಾರ್ದನರೆಡ್ಡಿಿಯ ಮಾಡೆಲ್ ಹೌಸ್ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿಿರುವುದನ್ನು ಸಮಿತಿಯು ಖಂಡಿಸಿದೆ.
ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಬಳ್ಳಾಾರಿ ಜಿಲ್ಲಾಾ ಸಮಿತಿಯ ಕಾರ್ಯದರ್ಶಿ ಜೆ. ಸತ್ಯಬಾಬು, ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾಗಿರುವ ಯು. ಬಸವರಾಜ, ಮುಖಂಡರುಗಳಾದ ಎಚ್. ತಿಪ್ಪಯ್ಯ, ಜೆ. ಚಂದ್ರಕುಮಾರಿ, ವಿ.ಎಸ್. ಶಿವಶಂಕರ, ಜೆ.ಎಂ. ಚೆನ್ನಬಸಯ್ಯ ಇನ್ನಿಿತರರು ಈ ಸಂದರ್ಭದಲ್ಲಿ ಉಪಸ್ಥಿಿತರಿದ್ದರು.
ಬಳ್ಳಾರಿಯಲ್ಲಿ ಪರಿಸ್ಥಿತಿ ತಿಳಿಗೊಳಿಸಲು ಆಗ್ರಹ

