ಸುದ್ದಿಮೂಲ ವಾರ್ತೆ
ಮೈಸೂರು, ಸೆ.15: ನಗರದ ಹುಣಸೂರು ರಸ್ತೆಯ ಪಕ್ಕದ ಹಳೆಯ ಜಿಲ್ಲಾಧಿಕಾರಿ ಕಚೇರಿಯ ಪಕ್ಕದ ಉದ್ಯಾನವನ ಜಾಗದಲ್ಲಿ ಮೈಸೂರೆ ಹೆಮ್ಮೆ ಪಡುವ ಯುದ್ದ ಸ್ಮಾರಕ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಕೂಡಲೇ ಪೂರ್ಣಗೊಳಿಸಬೇಕು ಎಂದು ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಪಡುವಾರಹಳ್ಳಿಯ ಎಂ ರಾಮಕೃಷ್ಣ ಆಗ್ರಹಿಸಿದ್ದಾರೆ.
2022 ರಲ್ಲಿ ಅಂದಿನ ಚಾಮರಾಜ ಕ್ಷೇತ್ರದ ಶಾಸಕರಾಗಿದ್ದ ಎಲ್.ನಾಗೇಂದ್ರ,,ಹುಣಸೂರು ಶಾಸಕರಾಗಿದ್ದ ಹೆಚ್.ಪಿ.ಮಂಜುನಾಥ್, ಎಂಎಲ್ಸಿ ಮಂಜೇಗೌಡರು, ಹಿಂದಿನ ಜಿಲ್ಲಾಧಿಕಾರಿ ಬಗಾದಿ ಗೌತಮ್, ಹಿಂದಿನ ಮೇಯರ್ ಸುನಂದಾ ಪಾಲನೇತ್ರ ಮತ್ತಿತರ ಅಧಿಕಾರಿಗಳ ಸಮ್ಮುಖದಲ್ಲಿ ಗುದ್ದಲಿ ಪೂಜೆ ನಡೆಯಿತು.
ಆದರೆ, ಸ್ಮಾರಕ ನಿರ್ಮಾಣದ ಅಡಿಪಾಯದ ಕೆಲಸ ಮಾತ್ರವಾಗಿದೆ ಜೊತೆಗೆ ಕಾಮಗಾರಿಯೂ ಸ್ಥಗಿತವಾಗಿದೆ. ಪಕ್ಕದಲ್ಲಿ ಗ್ರಾನೈಟ್ ಕಲ್ಲಿನ ಬಿದ್ದಿವೆ ಗಿಡಗಂಟೆಗಳು ಬೆಳೆದಿದೆ. ದೇಶ ಕಾಯುವ ವೀರ ಯೋಧರಿಗೆ ಗೌರವಿಸುವ ಕಾರ್ಯವಾದ ಈ ಯುದ್ಧ ಸ್ಮಾರಕ ಕೇಂದ್ರದ ಕೆಲಸ ನಿಂತಿದೆ. ಜಿಲ್ಲಾ ಉಸ್ತುವಾರಿ ಸಚಿವರು ದಸರಾದೊಳಗಾಗಿ ಪೂರ್ಣಗೊಳಿಸಲು ಕ್ರಮವಹಿಸಿ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ದೇಶವೇ ಹೆಮ್ಮೆ ಪಡುವ ಯುದ್ಧ ಸ್ಮಾರಕ ವನ್ನು ಜನತೆಗೆ ಅರ್ಪಿಸಬೇಕು ಎಂದು ಎಂದು ಒತ್ತಾಯಿಸಿದ್ದಾರೆ.