ಸುದ್ದಿಮೂಲ ವಾರ್ತೆ ರಾಯಚೂರು, ಡಿ.18:
ರಾಜ್ಯ ಸರ್ಕಾರದ ಕೆಪಿಎಸ್ ಮ್ಯಾಾಗ್ನೆೆಟ್ ನೀತಿ ಕೈಬಿಡಬೇಕು, ಗೋನ್ವಾಾರ ಹಾಗೂ ಗೋನ್ವಾಾರದ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯ ಒದಗಿಸಲು ಎಐಡಿಎಸ್ಓ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಒತ್ತಾಾಯಿಸಲಾಯಿತು.
ಇಂದು ನಗರದ ಜಿಲ್ಲಾಾಡಳಿತದ ಕಚೇರಿ ಬಳಿ ಜಿಲ್ಲಾಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಜಿಲ್ಲೆಯ ಗೊನವರ ಹಾಗೂ ಹೊಸ ಗೊನವರ ಹಳ್ಳಿಿಗಳಲ್ಲಿರುವ ಸರ್ಕಾರಿ ಕಿರಿಯ ಪ್ರಾಾಥಮಿಕ ಶಾಲೆಗಳು ನೂರಾರು ಬಡ ರೈತ ಕೃಷಿ ಕಾರ್ಮಿಕರ ಮಕ್ಕಳಿಗೆ ಆಶಾಕಿರಣವಾಗಿವೆ. ಆದರೆ ಇಂದು ರಾಜ್ಯ ಸರ್ಕಾರವು ಕೆಪಿಎಸ್ ಮ್ಯಾಾಗ್ನೆೆಟ್ ಎಂಬ ಅವೈಜ್ಞಾನಿಕ ನೀತಿಯನ್ನು ಜಾರಿಗೆ ತರುವ ಮೂಲಕ 40 ಸಾವಿರಕ್ಕೂ ಅಧಿಕ ಸಣ್ಣ ಶಾಲೆಗಳನ್ನು ಮುಚ್ಚಲು ಮುಂದಾಗಿದೆ ಎಂದು ದೂರಿದರು.
ಕೆಪಿಎಸ್ ಮ್ಯಾಾಗ್ನೆೆಟ್ ಮತ್ತು ಶಾಲೆಗಳ ವಿಲೀನ ಪ್ರಕ್ರಿಿಯೆ ಕೂಡಲೇ ಕೈಬಿಡಬೇಕು, ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲವೆಂದು ಸರ್ಕಾರ ಅಧಿಕೃತ ಆದೇಶ ಹೊರಡಿಸಬೇಕು, ಗೋನ್ವಾಾರ ಮತ್ತು ಹೊಸ ಗೋನ್ವಾಾರದ ಶಾಲೆಗಳಿಗೆ ತಕ್ಷಣವೇ ಶುದ್ಧ ಕುಡಿಯುವ ನೀರು, ಸುಸಜ್ಜಿಿ ತ ಶೌಚಾಲಯ ಹಾಗೂ ತಡೆಗೋಡೆ ನಿರ್ಮಿಸಿ ಈ ಶಾಲೆಗಳನ್ನು ಉಳಿಸಬೇಕು, ಈ ಭಾಗದ ಶಾಲೆಗಳಿಗೆ ಅಗತ್ಯವಿರುವ ಶಿಕ್ಷಕರನ್ನು ನೇಮಿಸಿ ಗುಣಮಟ್ಟದ ಶಿಕ್ಷಣಕ್ಕೆೆ ಒತ್ತು ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಾಧ್ಯಕ್ಷ ಹಯ್ಯಳಪ್ಪ, ಬಸವರಾಜ್ ಗ್ರಾಾಮ ಪಂಚಾಯಿತಿ ಅಧ್ಯಕ್ಷರಾದ ಸುರೇಶ, ಸದಸ್ಯರಾದ ನಲ್ಲ ರೆಡ್ಡಿಿ, ಗೋವಿಂದು, ಅಬೀಬ್, ಹಿರಿಯರಾದ ಪ್ರಮೋದ್ ಕುಮಾರ, ಮಲ್ಲಿಕಾರ್ಜುನ, ಬದ್ರಿಿ, ಬಜಾರಪ್ಪ, ಆಜಿ, ಶಿವರಾಜ್, ರಾಮಪ್ಪ, ವೀರೇಶ್ ಭಾಗವಹಿಸಿದ್ದರು.
ಕೆಪಿಎಸ್ ಮ್ಯಾಗ್ನೆಟ್ ನೀತಿ ಕೈಬಿಡಲು ಆಗ್ರಹ

