ಸುದ್ದಿಮೂಲ ವಾರ್ತೆ ಗುರುಮಠಕಲ್,ಡಿ.1:
ಪಟ್ಟಣದ ಹೈದ್ರಾಾಬಾದ್ ರಾಜ್ಯ ಹೆದ್ದಾರಿಯ ಸರ್ಕ್ಯೂಟ್ ಹೌಸ್ ಕಂಪೌಂಡ್ ಎದುರಿಗೆ ನಗರೋತ್ಥಾಾನ ಯೋಜನೆ ಅಡಿ ನಿರ್ಮಾಣವಾಗುತ್ತಿಿರುವ ಪಾದಚಾರಿ ಮಾರ್ಗದಲ್ಲಿ ಅವೈಜ್ಞಾನಿಕತೆ ನಡೆದಿರುವ ಬಗ್ಗೆೆ ಸ್ಥಳೀಯ ಮುಖಂಡ ವೀರಪ್ಪ ಪ್ಯಾಾಟಿ ಆಕ್ರೋೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಸೋಮವಾರ ಸ್ಥಳಕ್ಕೆೆ ಭೇಟಿ ನೀಡಿ ಕಾಮಗಾರಿಯ ಬಗ್ಗೆೆ ಪರಿಶೀಲನೆ ನಡೆಸಿದ ಅವರು, ಇದು ವಿಜಯಪುರ-ಹೈದ್ರಾಾಬಾದ್ ರಾಜ್ಯ ಮಹತ್ವದ ರಸ್ತೆೆ ಆಗಿದ್ದು, ಕಲಬುರ್ಗಿ ಮತ್ತು ತೆಲಂಗಾಣ ಭಾಗಗಳಿಗೆ ಪ್ರತಿನಿತ್ಯ ನೂರಾರು ವಾಹನಗಳು ಸಂಚಾರ ಮಾಡುತ್ತವೆ ಎಂದು ಗಮನ ಸೆಳೆದರು. ನಿರ್ಮಾಣವಾಗುತ್ತಿಿರುವ ಪಾದಚಾರಿ ಮಾರ್ಗದ ಅಗಲ ಅತಿಯಾಗಿ ಹೆಚ್ಚಿಿಸಲಾಗಿದೆ. ಇದರಿಂದ ವಾಹನಗಳ ರಸ್ತೆೆ ಕಿರಿದಾಗಿದ್ದು ಯಾವುದೇ ಕ್ಷಣದಲ್ಲೂ ಅಪಘಾತ ಸಂಭವಿಸುವ ಅಪಾಯವಿದೆ. ಸಂಪೂರ್ಣ ಅವೈಜ್ಞಾನಿಕವಾಗಿ ಕಾಮಗಾರಿ ನಡೆಯುತ್ತಿಿದೆ ಎಂದು ವೀರಪ್ಪ ಪ್ಯಾಾಟಿ ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳಕ್ಕೆೆ ಆಗಮಿಸಿದ ಸಂಬಂಧಿತ ಇಲಾಖೆಯ ಅಧಿಕಾರಿಗಳಿಗೆ ಅವರು ಪರಿಸ್ಥಿಿತಿ ವಿವರಿಸಿ, ಪಾದಚಾರಿ ಮಾರ್ಗದ ಅಗಲ ಸಮಂಜಸವಾಗಿ ಕಡಿಮೆ ಮಾಡಿ, ಸಾರಿಗೆ ಸಂಚಾರಕ್ಕೆೆ ಅಡ್ಡಿಿಯಾಗದಂತೆ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಪಾದಚಾರಿ ಮಾರ್ಗ ನಿರ್ಮಾಣದಲ್ಲಿ ಕಂಡುಬಂದ ತಪ್ಪುುಗಳನ್ನು ತಕ್ಷಣ ಸರಿಪಡಿಸದಿದ್ದರೆ ಉಗ್ರ ಪ್ರತಿಭಟನೆಗೆ ಮುಂದಾಗುವುದಾಗಿ ಅವರು ಎಚ್ಚರಿಸಿದರು.
ಸಂಬಂಧಿತ ಅಧಿಕಾರಿಗಳು ಸ್ಥಳದಲ್ಲೇ ಸಮಜಾಯಿಷಿ ನೀಡಿದ್ದು, ಅಗತ್ಯ ತಿದ್ದುಪಡಿ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.
ಅವೈಜ್ಞಾನಿಕ ಪಾದಚಾರಿ ಮಾರ್ಗ ಸರಿಪಡಿಸಲು ಆಗ್ರಹ

