ಸುದ್ದಿಮೂಲವಾರ್ತೆ
ಕೊಪ್ಪಳ,ಆ.30: ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತರು. ಮುಸ್ಲಿಂ ಸಮಾಜದ ಮುಖಂಡರಾದ ಆಸೀಫ್ ಅಲಿ ಯವರನ್ನು ರಾಜ್ಯ ವಕ್ಫ್ ಅಧ್ಯಕ್ಷರನ್ನಾಗಿ ನೇಮಿಸಬೇಕೆಂದು ಕರ್ನಾಟಕ ಮುಸ್ಲಿಂ ಯೂನಿಟ್ ಅಧ್ಯಕ್ಷ ಮಹ್ಮದ್ ಜೀಲಾನಿ ಕಿಲ್ಲೇದಾರರ ಆಗ್ರಹಿಸಿದ್ದಾರೆ.
ಅವರು ಇಂದು ಕೊಪ್ಪಳದಲ್ಲಿ ಮೀಡಿಯಾ ಕ್ಲಬ್ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿ ರಾಜ್ಯ ಸರಕಾರ ಅಧಿಕಾರಕ್ಕೆ ಬರಲು ಮುಸ್ಲಿಂರು ಅಧಿಕ ಮತ ಹಾಕಿದ್ದಾರೆ. ಆದರೆ ವಿಧಾನಪರಿಷತ್, ಕೆಪಿಸಿಸಿ ಹಾಗು ಇನ್ನಿತರ ಹುದ್ದೆಗಳಲ್ಲಿ ನೇಮಿಸಲು ನಿರ್ಲಕ್ಷ್ಯ ವಹಿಸಲಾಗಿದೆ. ಈಗ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷರನ್ನಾಗಿ ಮಾಡಬೇಕು.
ಶೇ 80 ರಷ್ಟು ಮುಸ್ಲಿಂ ಜನಾಂಗದವರು ಕಾಂಗ್ರೆಸ್ ಬೆಂಬಲಿಸಲಾಗಿದೆ. ಆದರೆ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಮುಸ್ಲಿಂ ಜನಾಂಗದ ಮುಖಂಡರನ್ನು ನೇಮಿಸಿದೆ. ಕೇವಲ ಮುಸ್ಲಿಂರನ್ನು ವೋಟು ಬ್ಯಾಂಕ್ ಮಾಡಿಕೊಳ್ಳುತ್ತಿದ್ದಾರೆ. ಉತ್ತರ ಕರ್ನಾಟಕದ ಪ್ರಮುಖರಾಗಿರುವ ಆಸೀಫ್ ಅಲಿಯವರನ್ನು ನೇಮಿಸಬೇಕೆಂದು ಆಗ್ರಹಿಸಿದರು.
ಕೊಪ್ಪಳ ನಗರಸಭೆಗೆ 35 ವರ್ಷದ ನಂತರವೂ ಇಲ್ಲಿ ಅಧ್ಯಕ್ಷ ಸ್ಥಾನ ನೀಡಿಲ್ಲ. ಇಲ್ಲಿ ಕೇವಲ ಉಪಾಧ್ಯಕ್ಷರನ್ನಾಗಿ ಮಾಡಿದ್ದಾರೆ. ನಗರಸಭೆಗೆ ಮುಸ್ಲಿಂ ಜನಾಂಗದ ಸದಸ್ಯರನ್ನು ಸೂಚಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಫಕ್ರುಸಾಬ. ಹಜರತ್ ಅಲಿ.ಅಬ್ದುಲ್ ಅಜೀಜ ಇದ್ದರು.