ಸುದ್ದಿಮೂಲ ವಾರ್ತೆ ರಾಯಚೂರು, ಫೆ.15:
ರಾಯಚೂರು ಹಾಗೂ ರಾಜ್ಯದ ವಿದ್ಯಾರ್ಥಿಗಳು ಈ ವರ್ಷ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು ರಾಜ್ಯ ಸರ್ಕಾರದ ಬಜೆಟ್ ನಲ್ಲಿ ವಿದ್ಯಾರ್ಥಿಗಳಿಗಾಗಿ, ಶಿಕ್ಷಣ ಪರ ಕ್ರಮಗಳನ್ನು ಜಾರಿಗೆ ತರಬೇಕು ಎಂದು ಎಐಡಿಎಸ್ಓ ಜಿಲ್ಲಾ ಸಮಿತಿ ಒತ್ತಾಯಿಸಿದೆ.
ಇಂದು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಶಿಷ್ಯವೇತನ ಕಡಿಮೆಯಾಗುತ್ತಿದ್ದು ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸುತ್ತಿದ್ದು ವಸತಿ ಸೌಲಭ್ಯ ಸಿಗಬೇಕು, ಕಲಿಕೆ ವೆಚ್ಚ ಕಡಿಮೆ ಮಾಡಬೇಕು, ಶೈಕ್ಷಣಿಕ ಸಂಸ್ಥೆಗಳು ಆರ್ಥಿಕವಾಗಿ ಸ್ವಾಯತ್ತರಾಗಬೇಕೆಂಬ ಪ್ರಸ್ತಾವನೆ ಕೈಬಿಡಬೇಕು, ಸರ್ಕಾರ ಹೆಚ್ಚು ಅನುದಾನ ನೀಡಿ ಶಿಕ್ಷಣ ಸಂಸ್ಥೆ ಬಲಪಡಿಸಲು ಸರ್ಕಾರ ತನ್ನ ಜವಾಬ್ದಾರಿ ನಿಭಾಯಿಸಬೇಕು, ಸರ್ಕಾರಿ ಶಾಲೆ ವಿಲೀನಗೋಳಿಸುವ ಪ್ರಕ್ರಿಯೆ ಸರ್ಕಾರ ತಿರಸ್ಕರಿಸಬೇಕು, ಅನೇಕ ಸೌಲಭ್ಯಗಳಿಗೆ ಒದಗಿಸಲು ಸರ್ಕಾರ ಮತ್ತಷ್ಟು ಹಣ ಮಂಜೂರು ಮಾಡಬೇಕು. ಉನ್ನತ, ವೃತ್ತಿಪರ ಶಿಕ್ಷಣದ ಅವಕಾಶ ಕಲ್ಪಿಸಿ ಕೊಡಬೇಕು, ಎಲ್ಲಾ ಜಿಲ್ಲೆಗಳಲ್ಲಿನ ಸರ್ಕಾರಿ ಶಾಲಾ ಕಾಲೇಜುಗಳಲ್ಲಿನ ಮೂಲ ಸೌಕರ್ಯ ಅಭಾವವನ್ನು ನೀಗಿಸುವಲ್ಲಿ ರಾಜ್ಯ ಸರ್ಕಾರ ಗಮನ ವಹಿಸಿ ಶಿಕ್ಷಣಕ್ಕೆ ಅವಶ್ಯಕವಿರುವ ಹಣಕಾಸನ್ನು ಶಿಕ್ಷಣಕ್ಕಾಗಿ ರಾಜ್ಯ ಬಜೆಟ್ ನಲ್ಲಿ ಮೀಸಲಿಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕಾರ್ತಿಕ್,ಅಮೋಘ, ನಿತಿನ್,ರವಿ ಮುಂತಾದವರು ಭಾಗವಹಿಸಿದ್ದರು