ಸುದ್ದಿಮೂಲವಾರ್ತೆ
ಕೊಪ್ಪಳ ಜು 27: ತುಂಗಭದ್ರಾ ಜಲಾಶಯದಿಂದ ರೈತರ ಕೃಷಿ ಭೂಮಿಗೆ ನೀರು ಬಿಡಬೇಕು. ನಾಳೆಯೇ ಐಸಿಸಿ ಸಭೆ ಕರೆಯಬೇಕು. ನಾಡದ್ದರಿಂದ ನಾಲೆಗಳಿಗೆ ನೀರು ಬಿಡಬೇಕೆಂದು ಕೃಷಿ ಕಲ್ಯಾಣ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಬಸವರಾಜ ಬಿಲ್ಗಾರ ಹೇಳಿದರು.
ಅವರು ಇಂದು ಕೊಪ್ಪಳದ ಮೀಡಿಯಾ ಕ್ಲಬ್ ನಲ್ಲಿ ಮಾಧ್ಯಮಗೋಷ್ಠಿ ಮಾತನಾಡಿ ತಡವಾಗಿ ನೀರು ಬಿಡುವದರಿಂದ ಭತ್ತ ಇಳುವರಿ ಬರುವುದಿಲ್ಲ. ಈಗ ಮಲೆನಾಡಿನಲ್ಲಿ ಮಳೆಯಾಗುತ್ತಿದೆ. ಈಗ ಸಧ್ಯ ನೀರು ಬಿಡುವಂತೆ ಆಗ್ರಹಿಸಿದರು.
ಜುಲೈ 29 ರಂದು ಐಸಿಸಿ ಸಭೆ ನಡೆಸಿ ಅಂದೇ ನೀರು ಬಿಡಬೇಕು. ತುಂಗಭದ್ರಾ ಎಡದಂಡೆ ನಾಲೆಯ ಕೊನೆಗೆ ಭಾಗಕ್ಕೆ ನೀರು ತಲುಪಿಸಬೇಕು ಎಂದರು.
ಈಗಾಗಲೇ ನಾಲೆಯಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಈ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ನಾಲೆಗೆ ನೀರು ಬಿಟ್ಟು ರೈತರಿಗೆ ಅನುಕೂಲ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಶನಿವಾರದೊಳಗೆ ನೀರು ಬಿಡದಿದ್ದರೆ ರೈತರು ಹೋರಾಟ ಮಾಡಲಾಗುವುದು ಎಂದು ಆಗ್ರಹಿಸಿದ್ದಾರೆ.
ಕೃಷಿ ಕಲ್ಯಾಣ ಕರ್ನಾಟಕ ರೈತ ಸಂಘದ ಹನುಮಂತಪ್ಪ ಹಂಚಿನಾಳ, ಉಪೇಂದ್ರ ನಾಯಕ. ಈರಪ್ಪ ಕುರಿ, ಮೋಹನ ಕುರಿ ಇದ್ದರು.