ಸುದ್ದಿಮೂಲ ವಾರ್ತೆ ಲಿಂಗಸುಗೂರು, ಜ.08:
ತಾಲುಕಿನ ಈಚನಾಳ, ಈಚನಾಳಕ್ರಾಾಸ್, ಈಚನಾಳ ತಾಂಡಾದ ಗ್ರಾಾಮಗಳ ಪಾನ್ಶಾಪ್ ಹಾಗೂ ಸಣ್ಣಪುಟ್ಟ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿಿದ್ದು, ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ದ ಕ್ರಮಕ್ಕೆೆ ಆಗ್ರಹಿಸಿ ಈಚನಾಳ ಗ್ರಾಾಮ ಪಂಚಾಯತ ಮುಂಭಾಗದಲ್ಲಿ ಸಂಜೀವಿನಿ ಮಹಿಳಾ ಒಕ್ಕೂಟ ರೈತ ಸಂಘ ದಲಿತ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.
ಇತ್ತೀಚಿನ ದಿನಗಳಲ್ಲಿ ಈಚನಾಳ ಸೇರಿ ಸುತ್ತಮುತ್ತಲಿನ ಕೆಲ ಗ್ರಾಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಿಿದ್ದು ಇದರಿಂದ ಗ್ರಾಾಮದ ಬಹುತೇಕ ಯುವಕರು, ವೃದ್ದರು, ಸಾರಾಯಿ ದಾಹಕ್ಕೆೆ ಬಲಿಯಾಗಿ ಹಲವು ಕುಟುಂಬಗಳು ಬೀದಿಗೆ ಬಿದ್ದಿವೆ.
ಕೆಲ ಕುಟುಂಬಗಳಲ್ಲಿ ಕಲಹಗಳು ಉಂಟಾಗಿ ಗ್ರಾಾಮದಲ್ಲಿ ಅಶಾಂತಿ ಉಂಟಾಗುತ್ತಿಿದೆ. ಈ ಬಗ್ಗೆೆ ಅಬಕಾರಿ ಇಲಾಖೆ ಅಧಿಕಾರಿಗಳ ಗಮನಕ್ಕೆೆ ತಂದರೂ ಯಾವುದೇ ಪ್ರಯೋಜನವಾಗುತ್ತಿಿಲ್ಲ ಕೂಡಲೇ ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಅಬಕಾರಿ ವೃತ್ತ ನಿರೀಕ್ಷಕರಾದ ಲಕ್ಷ್ಮೀದೇವಿ ಹಾಗೂ ಗ್ರಾಾ.ಪಂ, ಪಿಡಿಒ ಬಸಯ್ಯ ಅವರಿಗೆ ಸಂಘಟನೆಗಳ ಮುಖಂಡರು ಮನವಿ ಸಲ್ಲಿಸಿದರು.
ಈ ವೇಳೆ ಸಂಜೀವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಯಂಕಮ್ಮ ಮೇಟಿ, ಕಾರ್ಯದರ್ಶಿ ಚಂದ್ರಿಿಕಾ, ಸರಸ್ವತಿ ಬಡಿಗೇರ್, ಶೋಭಾ ಮೇಟಿ, ರೈತ ಸಂಘದ ಸಹ ದೇವಪ್ಪ ಕರಡಿ, ದಲಿತ ಸಂಘಟನೆಯ ಮಲ್ಲರೆಡ್ಡೆೆಪ್ಪ ದೊಡ್ಡಮನಿ, ಸೇರಿ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
ಅಕ್ರಮ ಮದ್ಯ ಮಾರಾಟ ತಡೆಯಲು ಆಗ್ರಹ

