ಸುದ್ದಿಮೂಲ ವಾರ್ತೆ ರಾಯಚೂರು, ಡಿ.25:
ನಗರದ ವಾರ್ಡ್ ನಂ.17 ರ ಚೌಡಮ್ಮಕಟ್ಟೆೆ ಬಳಿಯ ಓಣಿಗಳಲ್ಲಿ ಪುಂಡರ ಹಾವಳಿ ಮಿತಿ ಮೀರಿದ್ದು ಪೊಲೀಸರು ಕಡಿವಾಣ ಹಾಕಲು ಬಡಾವಣೆ ನಿವಾಸಿಗಳು ಆಗ್ರಹಿಸಿದ್ದಾಾರೆ.
ಹಗಲು ರಾತ್ರಿಿ ಎನ್ನದೆ ದಳವಾಯಿ ಮನೆ ಕಟ್ಟೆೆ ಮೇಲೆ ಪುಂಡರ ಗುಂಪುಗಳು ಕುಳಿತುಕೊಂಡು ಪಕ್ಕದ ಓಣಿಯಲ್ಲಿ ಹಾವಳಿ ಹಾಕುತ್ತಿಿದ್ದು ಬಹುತೇಕ ಅಪ್ರಾಾಪ್ತ ಬಾಲಕರು ಪುಂಡತನಕ್ಕಿಿಳಿಯುತ್ತಿಿದ್ದು ಓಣಿಯಲ್ಲಿ ಪ್ರಶ್ನಿಿಸುವವರ ಮೇಲೆಯೆ ದಬ್ಬಾಾಳಿಕೆ ಮಾಡುತ್ತ ರಸ್ತೆೆಯ ಮಧ್ಯದಲ್ಲೆ ಜನ್ಮದಿನ ಪಾರ್ಟಿ ಮಾಡಿ ಕೇಕ್ ಕತ್ತರಿಸಿ ದಾರಿಯಲ್ಲಿ ಹೋಗುವ ಯುವತಿಯರು ಮತ್ತು ಮಹಿಳೆಯರನ್ನು ಚುಡಾಯಿಸುತ್ತ, ಕೂಗಾಡುತ್ತ ಅಸಭ್ಯ ವರ್ತನೆ ತೋರುತ್ತಿಿದ್ದಾರೆ.
ಅಲ್ಲದೆ ಮನೆಯೊಂದರ ಕಿಟಕಿಗೆ ಕಲ್ಲು ಒಡೆದು ಗಾಜು ಪುಡಿಗಟ್ಟಿಿದ್ದಾರೆ ಈ ಹಿಂದೆಯೂ ಇದೇ ರೀತಿ ಮನೆಯ ಗಾಜು ಒಡೆದಿದ್ದರು ಅದು ಈಗ ಮರುಕಳಿಸಿದ್ದು ಪೊಲೀಸ್ ಇಲಾಖೆಯ ನಿಷ್ಕ್ರೀಯತೆ ಇದಕ್ಕೆೆಲ್ಲ ಕಾರಣವೆಂದು ನಿವಾಸಿಗಳು ಆರೋಪಿಸಿದ್ದಾಾರೆ. ತಕ್ಷಣ ಪೊಲೀಸರು ಈ ಕ್ರಮಕ್ಕೆೆ ಕಡಿವಾಣ ಹಾಕಲು ಆಗ್ರಹಿಸಿದ್ದಾಾರೆ.

