\ಸುದ್ದಿಮೂಲ ವಾರ್ತೆ ಮಸ್ಕಿ, ಡಿ.1:
ತೊರಿ ಮತ್ತು ಭತ್ತಕ್ಕೆೆ ಬೆಂಬಲ ಬೆಲೆ ನೀಡಬೇಕು,ಖರೀದಿ ಕೇಂದ್ರ ತೆರೆಯಬೇಕು,ಬೆಳೆ ವಿಮೆ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಸೋಮವಾರ ಪಟ್ಟಣದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾಾರ್ ಮಂಜುನಾಥ್ ಭೋದಾವತಿ ಅವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣಪ್ಪ ಮರಳಿ ಮಾತನಾಡಿ, ತೊಗರಿ ಬೆಳೆ ಕಟಾವು ಆಗಿದ್ದು ಮಾರುಕಟ್ಟೆೆಯಲ್ಲಿ ಕನಿಷ್ಠ ಬೆಂಬಲ ಬೆಲೆಗಿಂತ ಒಂದು ಸಾವಿರಕ್ಕೂ ಅಧಿಕ ಕಡಿಮೆ ದರಕ್ಕೆೆ ಮಾರಾಟ ವಾಗುವ ಕಾರಣ ಇದೇ ವಾರದಲ್ಲಿ ಖರೀದಿ ಕೇಂದ್ರ ತೆಗೆದು ಖರೀದಿಸುವದು.
ಬೆಳೆ ನಷ್ಟವಾದ ರೈತರಿಗೆ ಅತೀ ಶೀಘ್ರದಲ್ಲಿ ಪರಿಹಾರ ಹಣ ಪಾವತಿ ಮಾಡಬೇಕು.ಮಸ್ಕಿಿ ತಾಲ್ಲೂಕಾಗಿ ಕನಿಷ್ಟ 08 ವರ್ಷಗಳಾದರು ಕೃಷಿ ನಿರ್ದೇಶಕರ ಕಾರ್ಯಾಲಯ ಇರಬೇಕಾಗಿತ್ತು ಆದರೆ ರೈತ ಸಂಪರ್ಕ ಕೇಂದ್ರದ ಇದೆ, ಮಸ್ಕಿಿ ತಾಲ್ಲೂಕಿನಲ್ಲಿ ರೈತ ಸಂಪರ್ಕ ಕೇಂದ್ರದಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿಮಾಡಬೇಕು.
ಸಂತೆಕೆಲ್ಲೂರು ಗ್ರಾಾಮಕ್ಕೆೆ ಹೋಬಳ್ಳಿಿ ಕೇಂದ್ರವನ್ನಾಾಗಿ ಪರಿಗಣಿಸಬೇಕು.ಗ್ರಾಾಮ ಲೆಕ್ಕಾಾಧಿಕಾರಿಗಳನ್ನು ಮತ್ತು ಕಂದಾಯ ನಿರೀಕ್ಷಕರನ್ನು ಕೇಂದ್ರದಲ್ಲಿ ಇರುವಂತೆ ಅನುಕೂಲ ಮಾಡಿಕೊಡಬೇಕು.ಮಸ್ಕಿಿ ನಗರದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆೆಯಲ್ಲಿ ಸಾಕಷ್ಟು ಮಳಿಗೆಗಳಿದ್ದು, ವ್ಯಾಾಪಾರ ವಹಿವಾಟು ನಡೆಸದೆ ಬೇರೆ ಬೇರೆ ವ್ಯಾಾಪಾರಸ್ಥರಿಗೆ ಬಾಡಿಗೆ ನೀಡಿದ್ದು, ಇದರಿಂದ ರೈತರು ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ತೊಂದರೆಯಾಗಿದೆ. ಮಳಿಗೆಗಳನ್ನು ವರ್ತಕರಿಗೆ ಮಾತ್ರ ನೀಡಲು ಸೂಚಿಸಿ ಉತ್ಪನ್ನಗಳ ಖರೀದಿಗೆ ಅನುಕೂಲ ಮಾಡಿಕೊಡಬೇಕು.
08 ದಿನದಲ್ಲಿ ಸ್ಪಂದಿಸದಿದ್ದರೆ ಜಿಲ್ಲಾಧಿಕಾರಿ ಕಾರ್ಯಾಲಯದ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರಾಮಯ್ಯ ಜವಳಗೇರಾ, ವೆಂಕಟೇಶ ರತ್ನಾಾಪುರ ಹಟ್ಟಿಿ, ಲಾಲ್ಸಾಬ್ ನಾಡಗೌಡ, ಸಂತೆಕೆಲ್ಲೂರ ಗ್ರಾಾಮದವರಾದ ವೆಂಕಟೇಶ,ಚೆನ್ನಯ್ಯಸ್ವಾಾಮಿ, ರಾಜಪ್ಪ, ಹನುಮಂತಪ್ಪ, ನಾಗಪ್ಪ ಭೂಪುರ, ರಾಜಪ್ಪ ಗೊನವಾರ, ಹಂಪಣ್ಣ ಗುಡಿಹಾಳ,ಆದಪ್ಪ ಹಾಗೂ ವಿವಿಧ ಗ್ರಾಾಮ ಘಟಕಗಳ ರೈತ ಸಂಘ ಮುಖಂಡರು,ರೈತರು ಉಪಸ್ಥಿಿತರಿದ್ದರು.
ಖರೀದಿ ಕೇಂದ್ರ ಸ್ಥಾಾಪನೆ, ಬೆಂಬಲ ಬೆಲೆಗೆ ಆಗ್ರಹ ; ವಾರದ ಗಡುವು

