ಸುದ್ದಿಮೂಲ ವಾರ್ತೆ ರಾಯಚೂರು, ಡಿ.28:
ದೇಶ ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿಿದ್ದರೂ ನಮ್ಮ ರೈತರಿಗೆ ಅವರು ಬೆಳೆದ ಬೆಳೆಗೆ ಸೂಕ್ತ ಬೆಂಬಲ ಬೆಲೆ ನೀಡಲಾಗುತ್ತಿಿಲ್ಲ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ್ ಬೇಸರ ವ್ಯಕ್ತಪಡಿಸಿದರು.
ನಗರದ ಪ್ರಜಾಪಿತ ಬ್ರಹ್ಮಕುಮಾರಿಯ ಈಶ್ವರಿಯ ವಿವಿಯಲ್ಲಿ ಹಮ್ಮಿಿಕೊಂಡಿದ್ದ ರಾಷ್ಟ್ರೀಯ ರೈತ ದಿನಾಚರಣೆ ಹಾಗೂ ಸಾಧಕ ರೈತರಿಗೆ ಸನ್ಮಾಾನ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದರು. ಅನೇಕ ಅವಿಷ್ಕಾಾರ, ಸಂಶೋಧನೆಗಳನ್ನು ಮಾಡಿದ ಹೆಮ್ಮೆೆ ಸರ್ಕಾರಗಳಿಗೆ ಇದ್ದರೂ ರೈತರು ಬೆಳೆಯುವ ಜೋಳ, ಭತ್ತಘಿ, ಹತ್ತಿಿಘಿ, ಮೆಕ್ಕಜೋಳ ಮತ್ತಿಿತರ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಪಡಿಸಿದರೂ ಅವರ ಶ್ರಮಕ್ಕೆೆ ತಕ್ಕ ಲ ನೀಡಲು ಸಾಧ್ಯವಾಗುತ್ತಿಿಲ್ಲ ಎಂದರು.
ಪಂಚವಾರ್ಷಿಕ ಯೋಜನೆಗಳ ಮೂಲಕ ಜವಾಹಾರಲಾಲ್ ನೆಹರು ಅವರು ದೇಶದ ಜನರ ಹಸಿವು ನೀಗಿಸಿದ ಪರಿ ನಿರ್ವಹಣೆಗೆ ಮುಂದಾಲೋಚನೆಯ ಪರಿಣಾಮ ದೇಶದ ಜನಸಂಖ್ಯೆೆಗೆ ತಕ್ಕ ಆಹಾರ ಉತ್ಪಾಾದನೆ ಮಾಡಿ ವಿದೇಶಗಳಿಗೂ ರ್ತು ಮಾಡುವ ಶಕ್ತಿಿ ಪಡೆದಿದ್ದೇವೆ ಆದರೆ, ಆಹಾರ ಬೆಳೆಯುವವರ ಪರಿಸ್ಥಿಿತಿ ಬದಲಾಗಿಲ್ಲ ಎಂದು ಹೇಳಿದರು.
ಬೆಳೆಗೆ ವೆಜ್ಞಾನಿಕ ಬೆಲೆ ಸಿಗುವಂತೆ ಆಗಬೇಕು ಅದಕ್ಕೆೆ ಕಾನೂನು ಬಲ ತುಂಬುವ ಕೆಲಸ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡು ಮಾಡಬೇಕಾಗಿದೆ ಎಂದ ಅವರು ಪ್ರಜಾಪಿತ ಬ್ರಹ್ಮಕುಮಾರಿಯ ವಿಶ್ವ ವಿದ್ಯಾಾಲಯ ಜನಪರ, ಸಮಾಜಮುಖಿ ಸೇವಕರ ಗುರುತಿಸುವ ಜವಾಬ್ದಾಾರಿ ನಿಭಾಯಿಸುತ್ತಿಿರುವುದಕ್ಕೆೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ 50ಕ್ಕೂ ಅಧಿಕ ರೈತ ಸಾಧಕರನ್ನು ಗುರುತಿಸಿ ಸನ್ಮಾಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಚಾಲಕಿ ರಾಜಯೋಗಿನಿ ಸ್ಮಿಿತಾ ಅಕ್ಕಘಿ, ಶಾರದ ಅಕ್ಕಘಿ, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ತಲಮಾರಿ, ರೈತ ಸಂಘದ ಮುಖಂಡ ಲಕ್ಷ್ಮಣಗೌಡ ಕಡಗಂದೊಡ್ಡಿಿ ಸೇರಿದಂತೆ ಅನೇಕರಿದ್ದರು.
ರಾಷ್ಟ್ರೀಯ ರೈತ ದಿನಾಚರಣೆ ಸಾಧನೆ ಮಾಡಿದರೂ ದೇಶದ ರೈತರಿಗೆ ಆಸರೆಯಾಗುತ್ತಿಲ್ಲ – ಬೋಸರಾಜ್

