ಸುದ್ದಿಮೂಲ ವಾರ್ತೆ
ಕೊಪ್ಪಳ,ಸೆ.22: ಅಧಿಕ ಸೌಂಡ ಹೊರಡಿಸುವ ಡಿಜೆ ಸೌಂಡನ್ನು ಗಣೇಶ ಹಬ್ಬದಲ್ಲಿ ಬಳಕೆ ಮಾಡದಂತೆ ಜಿಲ್ಲಾಡಳಿತ ನಿರ್ಬಂಧ ಹೇರಿದ್ದರೂ ಡಿಜೆ ಅಬ್ಬರ ಜೋರಾಗಿತ್ತು. ಅಧಿಕ ಶಬ್ದದ ಡಿಜೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕೊಪ್ಪಳದಲ್ಲಿ ಹೆಚ್ಚಿನ ಶಬ್ದ ಹೊಂದಿದ್ದ ಎರಡು ಡಿಜೆಗಳನ್ನು ಪೊಲೀಸರು ಡಿಜೆ ವಶಕ್ಕೆ ಪಡೆದಿದ್ದಾರೆ.
ಗುರುವಾರ ಮೂರನೇ ದಿನದ ಸಾರ್ವಜನಿಕಗಣೇಶಮೂರ್ತಿಗಳ ವಿಸರ್ಜನ ಮೆರವಣಿಗೆಯಲ್ಲಿ ಬಳಸುತ್ತಿದ್ದ ಡಿಜೆಗಳ ಅಬ್ಬರವಿತ್ತು.
ಕೊಪ್ಪಳದ ದೇವರಾಜ ಅರಸ ಕಾಲೋನಿ, ಗವಿಶ್ರೀ ನಗರದ ಸಾರ್ವಜನಿಕ ಗಣೇಶಮೂರ್ತಿಗಳ ಮೆರವಣಿಗೆಯಲ್ಲಿದ್ದ ಡಿಜೆಗಳು ಬಳಕೆಯಾಗಿದ್ದವು. ಡಿಜೆ ಸೌಂಡಿನಲ್ಲಿ ಯುವಕರು ಕುಣಿದು ಕುಪ್ಪಳಿಸಿದ್ದರು. ಇಡೀ ರಾತ್ರಿ ಡಿಜೆ ಸೌಂಡ ಶಬ್ದ ಮಾಲಿನ್ಯ ಮಾಡಿದ್ದವು. ಇಂದು ಬೆಳಗಿನ ಜಾವ ಪೊಲೀಸರು ಡಿಜೆಗಳು ಹಾಗೂ ವಾಹನಗಳನ್ನು ಕೊಪ್ಪಳ ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದೇ ವೇಳೆ ರಾತ್ರಿಯಿಂದ ಮೆರವಣಿಗೆಯಲ್ಲಿ ಡಿಜೆಗಳಿದ್ದರೂ ಕೊನೆಯ ಕ್ಷಣದಲ್ಲಿ ಡಿಜೆ ವಶಕ್ಕೆ ಪಡೆದಿದ್ದಾರೆ. ಈ ಎರಡೂ ಡಿಜೆಗಳನ್ನು ಶಾಸಕರ ಬೆಂಬಲಿಗರು ಎನ್ನಲಾಗಿದೆ. ಕಾಟಾಚಾರಕ್ಕೆ ಪೊಲೀಸರು ವಶ ಪಡೆದು ಠಾಣೆಯಲ್ಲಿ ದಂಡ ಪಾವತಿಸಿಕೊಂಡಿದ್ದಾರೆ.