ಸುದ್ದಿಮೂಲ ವಾರ್ತೆ ದೇವದುರ್ಗ, ಜ.03:
ಪಟ್ಟಣದ ಮಿನಿವಿಧಾನಸೌಧದಲ್ಲಿರುವ ವಿವಿಧ ಸರಕಾರಿ ಕಚೇರಿಗಳಿಗೆ ಲೋಕಾಯುಕ್ತರು ಸರ್ವೇ ಕಚೇರಿಗೆ ಭೇಟಿ ನೀಡಿ ರೈತರ ಸಮಸ್ಯೆೆಗಳಿಗೆ ಸ್ಪಂದನೆ ನೀಡದೇ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡರು.
ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ಭೇಟಿ ನೀಡಿದಾಗ ಕಚೇರಿಯಲ್ಲಿ ಅಧಿಕಾರಿ ಇಲ್ಲದೇ ಕಂಡು ಸಿಬ್ಬಂದಿಗಳಿಗೆ ತರಾಟೆಗೆ ತೆಗೆದುಕೊಂಡರು. ಪಹಣಿ ನಕ್ಷೆೆಯಲ್ಲಿ ಜಮೀನಿಗೆ ತೆರಳುವ ದಾರಿ ಇದ್ದು, ಪಕ್ಕದ ಜಮೀನು ಮಾಲೀಕ ದಾರಿ ಬಿಡುತ್ತಿಿಲ್ಲ ಸೂಕ್ತ ಪರಿಹಾರ ನೀಡುವಂತೆ ಸರ್ವೇ ಇಲಾಖೆಗೆ ಅಲೆದು ಬೇಸತ್ತಿಿದ್ದೇನೆ ಎಂದು ಲೋಕಾಯುಕ್ತರ ಮುಂದೆ ಮಂಡಲಗುಡ್ಡ ಗ್ರಾಾಮದ ರೈತ ರಂಗಪ್ಪ ಅಳಲು ತೋಡಿಕೊಂಡರು. ಮೂರು ತಿಂಗಳಿಂದ ಹೆಸರು ತಿದ್ದುಪಡಿ ಮಾಡುವಂತೆ ಅರ್ಜಿ ಸಲ್ಲಿಸಿದ್ದರೂ, ಅಧಿಕಾರಿಗಳು ಕ್ಯಾಾರೇ ಎನ್ನುತ್ತಿಿಲ್ಲ ಎಂದು ಅಮರೇಶ ಅಧಿಕಾರಿಗಳ ಮುಂದೆ ಸಮಸ್ಯೆೆ ಹೇಳಿಕೊಂಡರು. ಯರಮಸಾಳ ಗ್ರಾಾಮದ ಶಿವಲಿಂಗ ಹೊಲ ಸರ್ವೆಗೆ ಅರ್ಜಿ ಹಾಕಿದ್ದರೂ ಇಂದಿಗೂ ಒಬ್ಬರೂ ಸ್ಪಂದನೆ ನೀಡುತ್ತಿಿಲ್ಲ ಎಂದಾಗ ಲೋಕಾಯುಕ್ತ ಅಧಿಕಾರಿಗಳು ಭೂದಾಖಲೆಗಳ ಸಹಾಯಕ ನಿರ್ದೇಶಕ ಬಾಲಪ್ಪ ಗೌಡ ಅವರನ್ನು ತರಾಟೆಗೆ ತೆಗೆದುಕೊಂಡರು.
ಇಲಾಖೆಯಲ್ಲಿ ಆನ್ಲೈನ್ನಲ್ಲಿ ಮೂಲಕ ಅರ್ಜಿ ಸಲ್ಲಿಸುವಂತೆ ರೈತರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು.
ಪುರಸಭೆ ಕಚೇರಿಗೆ ಭೇಟಿ ನೀಡಿ ಇದೇ ವೇಳೆ ತಹಶೀಲ , ಸಮಾಜ ಕಲ್ಯಾಾಣ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿದ್ದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯ ಲೋಕಾಯುಕ್ತರ ಆದೇಶದ ಮೇರೆಗೆ ಕಚೇರಿಗಳಿಗೆ ಭೇಟಿ ನೀಡಿದ್ದೇನೆ. ಕಚೇರಿಯಲ್ಲಿರುವ ನ್ಯೂನತೆಗಳ ಸಂಪೂರ್ಣ ವಿವರ ಹಾಗೂ ಸಾರ್ವಜನಿಕರು ನೀಡಿರುವ ದೂರುಗಳನ್ನು ಮುಖ್ಯ ಲೋಕಾಯುಕ್ತರಿಗೆ ವರದಿ ಸಲ್ಲಿಸಲಾಗುವುದು ಎಂದು ಲೋಕಾಯುಕ್ತ ಅಧಿಕಾರಿ ಎ.ವಿ. ಪಾಟೀಲ್ ತಿಳಿಸಿದರು. ರಾಯಚೂರು ಲೋಕಾಯುಕ್ತ ಅಧಿಕಾರಿ ಸತೀಶ್, ಕರುಣೇಶಗೌಡ, ಶ್ರೀಕಾಂತ ಸೇರಿದಂತೆ ಇತರರು ಇದ್ದರು.
ಸರ್ವೇ ಅಧಿಕಾರಿಗೆ ತರಾಟೆ ದೇವದುರ್ಗ ; ಲೋಕಾಯುಕ್ತ ಅಧಿಕಾರಿ ಪಾಟೀಲ್ ಸಂಚಾರ

