ಸುದ್ದಿಮೂಲ ವಾರ್ತೆ ರಾಯಚೂರು, ನ.15:
ದೇವದುರ್ಗ ತಾಲೂಕು ನೂತನ ನ್ಯಾಾಯಾಲಯಗಳ ಸಂಕೀರ್ಣವನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಾಧಿಕಾರದ ಪ್ರಧಾನ ಪೋಷಕರು ಹಾಗೂ ಕರ್ನಾಟಕ ಉಚ್ಛ ನ್ಯಾಾಯಾಲಯದ ಗೌರವಾನ್ವಿಿತ ಮುಖ್ಯ ನ್ಯಾಾಯಮೂರ್ತಿಗಳಾದ ವಿಭು ಬಖ್ರು ಅವರು ನವೆಂಬರ್ 15 ರಂದು ಲೋಕಾರ್ಪಣೆ ಮಾಡಿದರು.
ಜಿಲ್ಲಾ ನ್ಯಾಾಯಾಂಗ ಇಲಾಖೆ, ಲೋಕೋಪಯೋಗಿ ಇಲಾಖೆ ಮತ್ತು ನ್ಯಾಾಯವಾದಿಗಳ ಸಂಘದ ಸಹಯೋಗದಲ್ಲಿ ದೇವದುರ್ಗ-ಜಾಲಹಳ್ಳಿಿ ರಸ್ತೆೆಯ ನೂತನ ನ್ಯಾಾಯಾಲಯದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ನ್ಯಾಾಯಮೂರ್ತಿಗಳು, ತ್ವರಿತ ನ್ಯಾಾಯದಾನವು ಇಂದಿನ ಅತ್ಯಗತ್ಯವಾಗಿದೆ. ಈ ಬಗ್ಗೆೆ ಎಲ್ಲ ನ್ಯಾಾಯಾಧೀಶರು ಮತ್ತು ವಕೀಲರು ಗಮನ ಹರಿಸಬೇಕು. ಹೊಸ ಕಟ್ಟಡಗಳ ನಿರ್ಮಾಣದಂತಹ ಕಾರ್ಯಗಳ ಮೂಲಕ ನ್ಯಾಾಯಾಂಗ ಇಲಾಖೆಯು ಬಲಗೊಳ್ಳುತ್ತಿಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.
ನೂತನ ವಕೀಲರ ಭವನ ಉದ್ಘಾಾಟಿಸಿದ ವಿಶ್ರಾಾಂತ ನ್ಯಾಾಯಮೂರ್ತಿಗಳಾದ ಗೌರವಾನ್ವಿಿತ ಶಿವರಾಜ ವಿ ಪಾಟೀಲ ಅವರು ಮಾತನಾಡಿ, ಈ ನೂತನ ನ್ಯಾಾಯಾಲಯಗಳ ಸಂಕೀರ್ಣ ಕಟ್ಟಡವು ನಿಜವಾದ ಅರ್ಥದಲ್ಲಿ ನ್ಯಾಾಯ ದೇವಾಲಯ ಆಗಬೇಕು. ಸೋತವನಿಗೂ ಸಮಾಧಾನ ಆಗುವ ರೀತಿಯಲ್ಲಿ ಇಲ್ಲಿ ನ್ಯಾಾಯಧಾನ ಸಿಗಬೇಕು. ಜನರಿಗೆ ನ್ಯಾಾಯ ಕೊಡಿಸುವ ಕಾರ್ಯ ಇಲ್ಲಿನ ಎಲ್ಲ ವಕೀಲರಿಂದ ನ್ಯಾಾಯಾಧೀಶರಿಂದ ಆಗಬೇಕು ಎಂದು ಸಲಹೆ ನೀಡಿದರು.
ವಿಶೇಷವಾಗಿ, ರಾಜ್ಯದಲ್ಲೇ ಅತಿ ಎತ್ತರದ ಪ್ರದೇಶದಲ್ಲಿ ದೇವದುರ್ಗ ನ್ಯಾಾಯಾಲಯಗಳ ಸಂಕೀರ್ಣ ಕಟ್ಟಡವು ನಿರ್ಮಾಣವಾಗಿ ಗಮನ ಸೆಳೆಯುತ್ತಿಿರುವುದಕ್ಕೆೆ ಸ್ಥಳೀಯ ಶಾಸಕರಿಗೆ, ಕಟ್ಟಡ ನಿರ್ಮಾಣಕ್ಕೆೆ ಶ್ರಮಿಸಿದ ಎಲ್ಲ ಮಹನಿಯರಿಗೆ ಅಭಿನಂದನೆ ತಿಳಿಸುವೆ ಎಂದರು.
ವಕೀಲರು ನ್ಯಾಾಯಯುತ ಮಾರ್ಗದಲ್ಲಿ ಹಣ ಗಳಿಸಲಿ. ಆದರೆ, ಬಡವರು ಬಂದಾಗ ಹಣದ ವ್ಯಾಾಮೋಹ ಬಿಟ್ಟು ಕೆಲಸ ಮಾಡಬೇಕು ಎಂದು ವಕೀಲರಿಗೆ ಸಲಹೆ ಮಾಡಿದರು.
ನ್ಯಾಾಯಮೂರ್ತಿಗಳು ಮತ್ತು ನ್ಯಾಾಯಾಧೀಶರಿಗೆ ಆತ್ಮಸಾಕ್ಷಿಯೇ ಅವರ ಕಾವಲುಗಾರ ಎಂದು ತಿಳಿಸಿದ ನ್ಯಾಾ.ಪಾಟೀಲ ಅವರು, ತ್ವರಿತ ನ್ಯಾಾಯದಾನ ಮತ್ತು ಗುಣಮಟ್ಟದ ನ್ಯಾಾಯದಾನಕ್ಕೆೆ ದೇವದುರ್ಗ ನ್ಯಾಾಯಾಲಯ ರಾಜ್ಯದಲ್ಲಿ ಹೆಸರು ಮಾಡಬೇಕು ಎಂಬುದು ತಮ್ಮ ಆಶಯವಾಗಿದೆ ಎಂದು ಸಲಹೆ ಮಾಡಿದರು.
ಕರ್ನಾಟಕ ಉಚ್ಛ ನ್ಯಾಾಯಾಲಯದ ನ್ಯಾಾಯಮೂರ್ತಿಗಳು ಹಾಗೂ ರಾಯಚೂರು ಆಡಳಿತಾತ್ಮಕ ನ್ಯಾಾಯಮೂರ್ತಿಗಳಾದ ಗೌರವಾನ್ವಿಿತ ಎಂ.ಜಿ. ಶುಕುರೆ ಕಮಲ್ ಅವರು ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಗೌರವಾನ್ವಿಿತ ರಾಯಚೂರಿನ ಜಿಲ್ಲಾ ಕಾನೂನು ಸೇವೆಗಳ ಪ್ರಾಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಾಯಾಧೀಶರಾದ ಮಾರುತಿ ಬಾಗಡೆ, ಕರ್ನಾಟಕ ಹೈಕೋರ್ಟ್ ರಿಜಿಸ್ಟ್ರಾಾರ್ ಜನರಲ್ ಕೆ.ಎಸ್. ಭರತ್ ಕುಮಾರ್, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಾಧಿಕಾರ ಸದಸ್ಯ ಕಾರ್ಯದರ್ಶಿ ಹೆಚ್.ಶಶಿಧರ ಶೆಟ್ಟಿಿ, ರಾಜ್ಯ ವಕೀಲರ ಪರಿಷತ್ತಿಿನ ಅಧ್ಯಕ್ಷರಾದ ಮಿಟ್ಟಲಕೋಡ ಎಸ್ ಎಸ್., ಜಿಲ್ಲಾಧಿಕಾರಿ ನಿತೀಶ್ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಾಧಿಕಾರಿ ಎಂ.ಪುಟ್ಟಮಾದಯ್ಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಶ್ರೇೇಣಿ ದಿವಾನಿ ನ್ಯಾಾಯಾಧೀಶರಾದ ಹೆಚ್.ಎ.ಸಾತ್ವಿಿಕ್, ವಕೀಲರ ಸಂಘದ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ್, ಕೆಎಸ್ಎಲ್ಎಸ್ಎದ ಉಪ ಕಾರ್ಯದರ್ಶಿ ಶ್ರೀಧರ ಎಂ ಹಾಗೂ ದೇವದುರ್ಗ ವಕೀಲರ ಸಂಘದ ಅಧ್ಯಕ್ಷರಾದ ಶುಕುಮುನಿರೆಡ್ಡಿಿ ನಾಯಕ, ಪ್ರಧಾನ ಕಾರ್ಯದರ್ಶಿ ಚೆನ್ನಪ್ಪ ಗೆಜ್ಜೆೆಬಾವಿ, ಲೋಕೋಪಯೋಗಿ ಇಲಾಖೆಯ ಅಭಿಯಂತರರಾದ ವೆಂಕಟೇಶ ಗಳಗ, ದೇವದುರ್ಗ ನ್ಯಾಾಯಾಲಯದ
ನ್ಯಾಾಯಾಧೀಶರಾದ ಸುರೇಶ ಅಪ್ಪಣ್ಣ ಸೌದಿ, ರಫಿಕ್ ಅಹ್ಮದ್, ಹಿರಿಯ ನ್ಯಾಾಯವಾದಿಗಳಾದ ವಿ ಎಂ ಮೇಟಿ, ವೇಣುಗೋಪಾಲ ಪಾಟೀಲ ಜಾಲಹಳ್ಳಿಿ, ಪ್ರಕಾಶ ಅಬಕಾರಿ, ಶರಣಬಸವ ಪಾಟೀಲ, ಬಸವರಾಜ ಎಸ್, ಹನುಮಂತರಾಯ ಚಿಂತಲಕುಂಟ ಹಾಗೂ ಇನ್ನಿಿತರ ವಕೀಲರು ಇದ್ದರು. ವಕೀಲರಾದ ಬಸವರಾಜ ಗಾಣದಾಳ ಹಾಗೂ ಬಸನಗೌಡ ದೇಸಾಯಿ ಅವರು ನಿರೂಪಿಸಿದರು.
ದೇವದುರ್ಗ ತಾಲೂಕು ನೂತನ ನ್ಯಾಾಯಾಲಯಗಳ ಸಂಕೀರ್ಣ, ವಕೀಲರ ಭವನ ನ್ಯಾಾಯಮೂರ್ತಿಗಳಿಂದ ಲೋಕಾರ್ಪಣೆ ತ್ವರಿತ ನ್ಯಾಾಯದಾನ ಇಂದಿನ ಅಗತ್ಯ – ನ್ಯಾಾಘಿ. ವಿಭು ಬಖ್ರು

