ಸುದ್ದಿಮೂಲ ವಾರ್ತೆ
ದೇವನಹಳ್ಳಿ, ಸೆ. 11 : ತಹಶೀಲ್ದಾರ್ ಆಗಿದ್ದಕೆ. ಶಿವರಾಜ್ ಅವರನ್ನು ಸರ್ಕಾರದ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಮುಕ್ತಾರ ಪಾಷ ಎಚ್.ಜಿ. ರವರು ಅಮಾನತ್ತು ಮಾಡಿ ಸೆ.11ರ ಸೋಮವಾದಿಂದಲೇ ಜಾರಿಗೆ ಬರುವಂತೆ ಆದೇಶ ಹೊಡಿಸಿದ್ದಾರೆ.
ಹಾಗೆಯೇ, ದೇವನಹಳ್ಳಿ ನೂತನ ತಹಶೀಲ್ದಾರ್ ಆಗಿ ಎಚ್. ಬಾಲಕೃಷ್ಣ ಅಧಿಕಾರ ವಹಿಸಿಕೊಂಡರು.
ದೇವಜನಹಳ್ಳಿ ತಹಶಿಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಶಿವರಾಜ್ ಕಳೆದ ತಿಂಗಳು ವರ್ಗಾವಣೆಗೊಂಡಿದ್ದರೂ ಕೆಎಟಿಯಲ್ಲಿ ತಡೆಯಾಜ್ಞೆ ತಂದು ಮತ್ತೆ ಕೆಲಸಕ್ಕೆ ಹಾಜರಾಗಿದ್ದರು. ಈ ಮಧ್ಯೆ, ಕಳೆದ ತಿಂಗಳು ಏಕಕಾಲದಲ್ಲಿ ಅವರ ನಿವಾಸ ಸಂಬಂಧಿಕರು ಆಪ್ತರ ಮನೆಗಳು ಹಾಗೂ ಕಚೇರಿಗಳ ಮೇಲೆ 18 ಕಡೆ ಲೋಕಾಯುಕ್ತರ ದಾಳಿ ನಡೆದಿತ್ತು. ಆದರೂ ಸಹ ಇಲ್ಲಿಯೇ ಸೇವೆ ಮುಂದುವರಿಸಿದ್ದ ತಹಶಿಲ್ದಾರ್ ಶಿವರಾಜ್ ತಮ್ಮ ಆದಾಯಕ್ಕಿಂತ 225 ಪಟ್ಟು ಆಸ್ತಿ ಹಣ ವಾಹನಗಳನ್ನು ಹೊಂದಿರುವ ಹಿನ್ನೆಲೆಯಲ್ಲಿ ಅವರನ್ನು ಅಮಾನತ್ತುಗೊಳಿಸಲು ಲೋಕಾಯುಕ್ತರು ಸೂಚನೆ ನೀಡಿದ್ದರು.
ನೂತನ ತಹಶೀಲ್ದಾರರನ್ನು ವಿವೀದ ಸಂಘಟನೆಗಳ ಮೂಖಂಡರು, ಮಾಜಿ ಜಿ.ಪಂ ಅಧ್ಯಕ್ಷ ಬಿ.ರಾಜಣ್ಣ, ಪಿವಿಬಿಎಸ್ ತಾಲೂಕು ಅಧ್ಯಕ್ಷ ಸೋಲುರು ನಾಗರಾಜ್, ಗ್ರಾ.ಪಂ ಸದಸ್ಯ ನರಸಪ್ಪ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಎಎಂ.ನಾರಾಯಣಸ್ವಾಮಿ ಹಾಗು ಕಚೇರಿ ಸಿಬ್ಬಂದಿ ಭೇಟಿ ಮಾಡಿ ಅಭಿನಂದಿಸಿದರು.