ಸುದ್ದಿಮೂಲ ವಾರ್ತೆ ಮಸ್ಕಿ, ಡಿ.13
ಮಕ್ಕಳಿಗೆ ಓದು-ಬರಹದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಅತ್ಯಗತ್ಯವಾಗಿವೆ ಎಂದು ಕೆಡಿಪಿ ಸದಸ್ಯ ದೇವಪ್ಪ ರಾಠೋಡ ಹೇಳಿದರು.
ತಾಲೂಕಿನ ತಲೇಖಾನ ಗ್ರಾಾಮ ಪಂಚಾಯಿತಿ ವ್ಯಾಾಪ್ತಿಿಯ ಸೋಂಪುರ ತಾಂಡಾದ ಸರಕಾರಿ ಕಿರಿಯ ಪ್ರಾಾಥಮಿಕ ಶಾಲೆಯಲ್ಲಿ ಶುಕ್ರವಾರ ಹಮ್ಮಿಿಕೊಂಡಿದ್ದ ಪ್ರತಿಭಾ ಕಾರಂಜಿ ಹಾಗೂ ಕಲಿಕೋತ್ಸವ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದರು.
ಗ್ರಾಾಮೀಣ ಭಾಗದ ಮಕ್ಕಳಲ್ಲಿ ಸಾಕಷ್ಟು ಕಲೆ, ಕ್ರೀೆಡೆ, ಸಾಹಿತ್ಯ, ಸಂಗೀತ ಸೇರಿದಂತೆ ವಿವಿಧ ರಂಗದಲ್ಲಿ ಪ್ರತಿಭೆಗಳಿವೆ ಆದರೆ ಅವುಗಳಿಗೆ ಸೂಕ್ತ ವೇದಿಕೆ ಸಿಗುತ್ತಿಿಲ್ಲ ಸರ್ಕಾರ ಪ್ರತಿಭಾ ಕಾರಂಜಿ ಕಾರ್ಯಕ್ರಮ ಹಮ್ಮಿಿಕೊಂಡಿದ್ದು ಶಿಕ್ಷಕರು ಅವುಗಳನ್ನು ಗುರುತಿಸುವ ಕೆಲಸ ಮಾಡಬೇಕಿದೆ ಎಂದರು. ನಿರ್ಣಾಯಕರು ಯಾವುದೇ ಭೇದ ಮಾಡದೆ ಉತ್ತಮ ಪ್ರತಿಭೆ ಗುರುತಿ ಪ್ರೋೋತ್ಸಾಾಹಿಸಬೇಕಿದೆ ಎಂದರು.
ನಂತರ ನಿಕಟ ಪೂರ್ವ ಶಿಕ್ಷಣ ಸಂಯೋಜಕ ರಾಮಚಂದ್ರ ನಿರಾಳೆ ಮಾತನಾಡಿ, ತಲೇಖಾನ ವಲಯದಲ್ಲಿ ಸಾಕಷ್ಟು ಶಿಕ್ಷಕರ ಹುದ್ದೆ ಖಾಲಿ ಇದ್ದು ಅತಿಥಿ ಶಿಕ್ಷಕರು ಉತ್ತಮ ಕೆಲಸ ಮಾಡುತ್ತಿಿದ್ದಾರೆ ಎಂದರು.
ಕಾರ್ಯಕ್ರಮದ ಪ್ರಾಾಸ್ತಾಾವಿಕವಾಗಿ ತಲೇಖಾನ್ ಸಿಆರ್ಸಿ ಶರಣಪ್ಪ ಮಾದರ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ಎಸ್ಡಿಿಎಂಸಿ ಅಧ್ಯಕ್ಷ ಅಮರೇಶ ವಹಿಸಿದ್ದರು. ಮುದಗಲ್ಲ ಸಿಆರ್ಪಿ ರಾಮಚಂದ್ರ ಡವಳೆ, ತಲೇಖಾನ ಗ್ರಾಾಪಂ ಸದಸ್ಯರಾದ ದುರ್ಗಪ್ಪ ಕಟ್ಟಿಿಮನಿ, ಮಲ್ಲೇಶ್, ಮಾಜಿ ಅಧ್ಯಕ್ಷ ಭೀಮಶಪ್ಪ ರಾಠೋಡ, ಸೋಂಪುರ ತಾಂಡಾ, ಶಾಲೆಯ ಮುಖ್ಯ ಶಿಕ್ಷಕ ಬಸವರಾಜ್ ಅಂಗಡಿ, ಖಿರೆಪ್ಪ, ಶೇಖರಪ್ಪ, ಆನಂದಪ್ಪ, ಮೇಗಪ್ಪ, ಮಹಾಂತೇಶ್, ವೆಂಕನಗೌಡ ಪೊಲೀಸ ಪಾಟೀಲ್, ರೆಡ್ಡಪ್ಪ, ಛತ್ರಪ್ಪ, ಸೇರಿದಂತೆ ಮುಖ್ಯ ಶಿಕ್ಷಕರು, ಎಸ್ಡಿಿಎಂಸಿ ಸದಸ್ಯ ಸೇರಿದಂತೆ ಅನೇಕರು ವೇದಿಕೆ ಮೇಲೆ ಇದ್ದರು.
ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆ ಅಗತ್ಯ ; ದೇವಪ್ಪ ರಾಥೋಡ್

