ಸುದ್ದಿಮೂಲ ವಾರ್ತೆ ದೇವದುರ್ಗ, ನ.26:
ಜಾತಿ, ಧರ್ಮ ಎನ್ನದೇ ಎಲ್ಲರೂ ಒಂದಾಗಿ ಬದಕುಬೇಕು, ಎಲ್ಲಾಾ ಧರ್ಮಗಳ ತತ್ವಗಳು ಸನ್ಮಾಾರ್ಗ ಮತ್ತು ಮನುಷ್ಯರ ಒಳತಿಗಾಗಿ ಇವೆ, ಸಿದ್ದರಾಮೇಶ್ವರ ಶಿಖರ ಮಠದ ಪ್ರತಿ ವರ್ಷ ನಡೆಯುವ ಜಾತ್ರೆೆಯಂತೆ ಈ ವರ್ಷದ ಜಾತ್ರೆೆಗೆ ಮುಸ್ಲಿಿಂ ಸಮಾಜದವರು ಸುಮಾರು ಎರಡುಲಕ್ಷ ದೇಣಿಗೆ ನೀಡಿದ್ದಾಾರೆಂದು ಷ.ಬ್ರ. ಕಪಿಲ ಸಿದ್ದರಾಮೇಶ್ವರ ಶಿವಾಚಾರ್ಯ ಮಹಾ ಸ್ವಾಾಮಿಗಳು ಹೇಳಿದರು.
ದೇವದುರ್ಗ ಪಟ್ಟಣದ ಶಿಖರ ಮಠದಲ್ಲಿ ನಾದಲಹರಿ ಸಂಗೀತ ಮತ್ತು ನೃತ್ಯ ಪಾಠಶಾಲೆ ವತಿಯಿಂದ ಆಯೋಜಿಸಿದ ಸಂಗೀತ ನೃತ್ಯೋೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಸಂಗೀತ ಮಾನಸಿಕ ನೆಮ್ಮದಿಯ ಜತೆಯಲ್ಲಿ ದೈಹಿಕವಾಗಿ ಸದೃಢವಾಗಿರಲು ಸಹಾಯ ಮಾಡುತ್ತಿಿದ್ದು, ಸಂಗೀತದಿಂದ ಮನಸ್ಸು ಉಲ್ಲಾಾಸಗೊಳ್ಳುತ್ತದೆ. ಇತ್ತೀಚಿಗೆ ಚಿಕ್ಕ ಮಕ್ಕಳಿಗೆ ತಾಯಂದಿರು ಮೋಬೈಲ್ ನೀಡಿದರೆ ಮಾತ್ರ ಆಹಾರ ಸೇವಿಸುವ ಪರಿಸ್ಥಿಿತಿ ನಿರ್ಮಾಣವಾಗಿದ್ದು, ಮುಂದಿನ ಪೀಳಿಗೆ ಮಾರಕವಾಗುತ್ತಿಿದ್ದು, ನಿಮ್ಮ ಮಕ್ಕಳಿಗೆ ಶಿಕ್ಷಣ ಜತೆಯಲ್ಲಿ ಇಂತಹ ನೃತ್ಯ, ಸಂಗೀತ ಪಾಠ ಶಾಲೆಯಲ್ಲಿ ಬಿಡುವದರಿಂದ ಮಕ್ಕಳ ಜ್ಞಾಾನದ ಜತೆಯಲ್ಲಿ ದೈಹಿಕವಾಗಿ ಗಟ್ಟಿಿಯಾಗುತ್ತಾಾರೆಂದು ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಾಮಿಗಳು ಹೇಳಿದರು.
ಉರಿ ಬಿಸಿಲಿನ ಮರುಭೂಮಿಯಲ್ಲಿ ನೀರು ಕಂಡಂತೆ ದೇವದುರ್ಗ ತಾಲೂಕಿನಲ್ಲಿ ನಾದಲಹರಿ ಸಂಗೀತ ಶಾಲೆ ಪ್ರಾಾರಂಭವಾಗಿದೆಂದು ಕರ್ನಾಟಕ ಜಾನಪದ ಪರಿಷತ್ತಿಿನ ತಾಲೂಕ ಅಧ್ಯಕ್ಷ ಬಸವರಾಜ ಯಾಟಗಲ್ ಹೇಳಿದರು. ಈಹಿಂದೆ ಸರಕಾರಿ, ಖಾಸಗಿ ಕಾರ್ಯಕ್ರಮಗಳಲ್ಲಿ ಪ್ರಾಾರ್ಥನೆ ಹಾಡಬೇಕಾದರೆ ಮಕ್ಕಳು ಸಿಗುತ್ತಿಿರಲಿಲ್ಲಾಾ, ಆದರೆ ಕಳೆದ 3-4ವರ್ಷಗಳಿಂದ ಪ್ರಾಾರಂಭವಾದ ಶಾಲೆ ಮಕ್ಕಳು ಪ್ರತಿ ಕಾರ್ಯಕ್ರಮದಲ್ಲಿ ಸಂಗೀತದ ಜತೆಯಲ್ಲಿ ಪ್ರಾಾರ್ಥನೆ ಹಾಡುತ್ತಿಿದ್ದಾಾರೆ.
ನಾದಲಹರಿ ಸಂಗೀತ ಶಾಲೆಯ ಮಕ್ಕಳ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ವಿಜೇತರಾಗಿದ್ದು, ಕೂಡ ವಿಶೇಷವಾಗಿದೆ. ಶೈಕ್ಷಣಿಕವಾಗಿ ತೀರಾ ಹಿಂದುಳಿದ ತಾಲೂಕೆಂದು ಹಣೆಪಟ್ಟಿಿ ಹೊತ್ತಿಿರುವ ನಮ್ಮ ತಾಲೂಕಿನ ಚಿಕ್ಕ ಚಿಕ್ಕ ಮಕ್ಕಳು ನೃತ್ಯ ಮತ್ತು ಸಂಗೀತದಲ್ಲಿ ಅಂತರ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರ್ತಿಸಿಕೊಂಡಿದ್ದು ಈ ಶಾಲೆಯ ಸಂಸ್ಥಾಾಪಕರ ಅಪಾರ ಕೂಡುಗೆ ಇದೆ ಎಂದು ಯಾಟಗಲ್ ಹೇಳಿದರು.
ನಾದಲಹರಿ ಸಂಗೀತ ಮತ್ತು ನೃತ್ಯ ಪಾಠ ಶಾಲೆಯ ಮಕ್ಕಳು ಸಂಗೀತ ಮತ್ತು ನೃತ್ಯ ಮಾಡಿದರೆ, ನೂತನವಾಗಿ ಆಗಮಿಸಿದ ವಿದ್ಯಾಾರ್ಥಿಗಳಿಂದ ನೃತ್ಯ ಪೂಜೆ, ಜತೆಯಲ್ಲಿ ಈ ಶಾಲೆಯಲ್ಲಿ ಅಭ್ಯಾಾಸ ಮಾಡುವ ಪಾಲಕರು,ತಾಯಂದಿ ಕೂಡ ನೃತ್ಯ ಮಾಡಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮವನ್ನು ಚುಟುಕು ಸಾಹಿತ್ಯ ಪರಷತ್ತಿಿನ ತಾಲೂಕ ಅಧ್ಯಕ್ಷ ಮೈನುದ್ದೀನ್ ಕಾಟಮಳ್ಳಿಿ ಉದ್ಘಾಾಟಿಸಿದರೆ, ಅಧ್ಯಕ್ಷತೆಯನ್ನು ಬಿ.ಜೆ.ಪಿ. ಮಹಿಳಾ ಘಟಕದ ಅಧ್ಯಕ್ಷರಾದ ಮಲ್ಲಮ್ಮ ಛಾವಣಿ, ಬಸವ ಕೇಂದ್ರದ ಅಧ್ಯಕ್ಷರಾದ ಸುಭಾಶ್ಚಂದ್ರ ಪಾಟೀಲ್, ಸಂಗೀತ ಪಾಠ ಶಾಲೆಯ ಸಂಸ್ಥಾಾಪಕರಾದ ರಮೇಶ ಮಸರಕಲ್ ಮಾತನಾಡಿದರೆ, ಮಾತೋಶ್ರೀ ಗಿರಿಜಮ್ಮ , ಭಾರತಿ ಕೋಟಿಮಠ, ಕುಮಾರಿ ಅಶ್ವಿಿನಿ, ಕುಮಾರಿ ಸಂಜನಾ ಸೇರಿದಂತೆ ಮಕ್ಕಳು ಪಾಲಕರು ಉಪಸ್ಥಿಿತರಿದ್ದರು.
ದೇವದುರ್ಗ : ಸಂಗೀತ – ನೃತ್ಯೋತ್ಸವ ಮಕ್ಕಳಿಗೆ ಸಂಗೀತ ಕಲಿಸಲು ಸ್ವಾಮೀಜಿ ಸಲಹೆ

