ಸುದ್ದಿಮೂಲ ವಾರ್ತೆ ಬೆಂಗಳೂರು, ಡಿ.26:
ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಿ ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಮುಂದುವರೆಯುತ್ತದೆ. ಆದರೆ, ನಗರ ಸ್ಥಳೀಯ ಸಂಸ್ಥೆೆಗಳಲ್ಲಿ ಚುನಾವಣೆಯಲ್ಲಿ ಹೊಂದಾಣಿಕೆ ಕಷ್ಟವಾಗಲಿದ್ದು, ಎರಡೂ ಪಕ್ಷಗಳು ಪ್ರತ್ಯೇಕವಾಗಿ ಪಾಲ್ಗೊೊಲ್ಳುತ್ತವೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸ್ಪಷ್ಟಪಡಿಸಿದರು.
ಪಕ್ಷದ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆೆಗಳಲ್ಲಿ ಬಿಜೆಪಿ ಹೊಂದಾಣಿಕೆ ಕಷ್ಟವಾಗಲಿದೆ. ನಮ್ಮ ಶಕ್ತಿಿ ಇರುವ ಕಡೆ ನಾವು ಹೋರಾಟ ಮಾಡುತ್ತೇವೆ ಎಂದರು.
ನಗರ ಸ್ಥಳೀಯ ಸಂಸ್ಥೆೆಗಳ ಹೊಂದಾಣಿಕೆ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಜೊತೆ ಚರ್ಚೆ ಮಾಡಲು ಸಾಧ್ಯವೇ?, ಈ ವಿಚಾರದಲ್ಲಿ ಈಗಾಗಲೇ ಬಿಜೆಪಿ ರಾಜ್ಯಾಾಧ್ಯಕ್ಷರು ಅವರ ನಿಲುವನ್ನು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು.
ಒಂದು ಕ್ಷೇತ್ರ ಸಿಗದವರು ಅಹಿಂದ ನಾಯಕರೇ?
ಜ.25 ರಂದು ಮೈಸೂರಿನಲ್ಲಿ ಅಹಿಂದ ಸಮಾವೇಶವನ್ನು ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರು ಮಾಡುತ್ತಿಿದ್ದಾರೆ. ಯಾವ ಲೇಬಲ್ನಲ್ಲಿ ಅವರು ಮಾಡುತ್ತಿಿದ್ದಾರೆ. ಅಹಿಂದ ಬಗ್ಗೆೆ ವ್ಯಾಾಖ್ಯಾಾನ ಮಾಡಿ ವಿವರಿಸುವುದು ಕಷ್ಟ ಎಂದ ಅವರು, ಮುಖ್ಯಮಂತ್ರಿಿಯಾಗಿದ್ದವರು ಅಹಿಂದ ನಾಯಕರೇ ಆಗಿದ್ದರೆ? ಎಂದು ಪ್ರಶ್ನಿಿಸಿದರು.
ಒಂದು ಕ್ಷೇತ್ರ ಹುಡುಕಲು ಸಾಧ್ಯವಾಗಲಿಲ್ಲ. ಮೈಸೂರು, ಬಾದಾಮಿ, ಕೋಲಾರ ಎಲ್ಲಿ ನಿಲ್ಲಬೇಕೆಂದು ವರ್ಷ ಕಾಲ ಚರ್ಚೆ ಮಾಡಿದರು. ಅಹಿಂದ ನಾಯಕರೇ ಆಗಿದ್ದರೆ ರಾಜ್ಯದ ಯಾವುದೇ ಕ್ಷೇತ್ರದಲ್ಲಾದರೂ ನಿಂತು ಗೆಲ್ಲಬಹುದಾಗಿತ್ತು. ಕಳೆದ ಚುನಾವಣೆಯಲ್ಲಿ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಬಿಟ್ಟು ಕೊಡಬೇಕಾಯಿತು ಎಂದರು.
ಸಿದ್ದರಾಮಯ್ಯ ಅವರು ನನ್ನ ಬಗ್ಗೆೆ ಕಠಿಣವಾಗಿ ಮಾತನಾಡಿದ್ದಾರೆ. ಅವರ ಹಿರಿಯ ಮಗ ನಿಧನವಾದಾಗ ಮನೆಗೆ ಹೋಗಿದ್ದೆ. ಈ ವಯಸ್ಸಲ್ಲೂ ಎಷ್ಟು ದುಡಿಯುತ್ತೀರಿ? ಎಂದು ಕೇಳಿದ್ದರು. ನೀವೆಲ್ಲಾ ಪಕ್ಷ ಬಿಟ್ಟು ಹೋದ ಮೇಲೆ ಪಕ್ಷ ಉಳಿಲು ದುಡಿಯುತ್ತಿಿದ್ದೇನೆ. ಹೀಗೆ ಎರಡನೇ ಪುತ್ರನನ್ನು ರಾಜಕೀಯಕ್ಕೆೆ ತಂದಿದ್ದಾರೆ ಎಂದು ಹೇಳಿದರು.
ಒಳಮೀಸಲಾತಿಯಲ್ಲಿ ಯಾವಯಾವ ಜಾತಿಗೆ ಎಷ್ಟೆೆಷ್ಟು ಮೀಸಲಾತಿ ಕೊಟ್ಟಿಿದ್ದೀರಿ ಎಂಬುದನ್ನು 16 ಬಜೆಟ್ ಮಂಡಿಸಿದ ಸಿದ್ದರಾಮಯ್ಯನವರು ಹೇಳಬೇಕು. ದೇಶದಲ್ಲಿ ನಗರ ಸ್ಥಳೀಯ ಸಂಸ್ಥೆೆಗಳಲ್ಲಿ ಮಹಿಳಾ ಮೀಸಲಾತಿ ತಂದವರ್ಯಾರು? ಮುಸ್ಲಿಿಮರಿಗೆ ಮೀಸಲಾತಿ ಕಲ್ಪಿಿಸಿದವರು ಯಾರು? ಎಂದು ಪ್ರಶ್ನಿಿಸಿದ ದೇವೇಗೌಡರು, ಕೇರಳದಲ್ಲಿ ಜೆಡಿಎಸ್ ಪಕ್ಷ ಎಡಪಂಥೀಯ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ಜ.18 ರಂದು ಬೆಂಗಳೂರಿನಲ್ಲಿ ಪಕ್ಷದ ಕಾರ್ಯಕರ್ತರ ಸಭೆಯನ್ನು ಮಾಡುತ್ತೇವೆ. ಜ.23 ರಂದು ಹಾಸನದಲ್ಲಿ ಪಕ್ಷದ ಕಾರ್ಯಕ್ರಮ ಮಾಡುತ್ತೇವೆ. ಜ.24 ರಂದು ಬಾಗಲಕೋಟೆಯಲ್ಲಿ ಸಭೆ ಮಾಡಲು ತೀರ್ಮಾನಿಸಿದ್ದೇವೆ ಎಂದರು.
ದೇಶದ ಕೆಲವು ರಾಜ್ಯಗಳಲ್ಲಿ ಚರ್ಚ್ ಮೇಲೆ ದಾಳಿಯಾಗಿರುವುದು ತುಂಬಾ ಹೇಯವಾದ ಘಟನೆಯಾಗಿದ್ದು, ಅದನ್ನು ನಾವೆಲ್ಲರೂ ಖಂಡಿಸಬೇಕು. ಈ ದೇಶದಲ್ಲಿ ಎಲ್ಲಾ ಧರ್ಮೀಯರೂ ಇದ್ದಾರೆ. ಚರ್ಚ್ ಮೇಲಿನ ದಾಳಿಯ ಘಟನೆ ಆಗಬಾರದಿತ್ತು. ಆ ಘಟನೆಗೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಳ್ಳಬೇಕು. ಘಟನೆಗೆ ಕಾರಣರಾದವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಜರುಗಿಸಬೇಕು. ನಿನ್ನೆೆ ಪ್ರಧಾನಿ ನರೇಂದ್ರ ಮೋದಿಯವರು ದೆಹಲಿಯಲ್ಲಿ ಚರ್ಚ್ಗೆ ಹೋಗಿ ಪ್ರಾಾರ್ಥನೆ ಮಾಡಿದ್ದಾರೆ. ಅವರು ದಾಳಿ ಮಾಡಿದವರ ಮೇಲೆ ಕ್ರಮ ಕೈಗೊಳ್ಳುವುದರಲ್ಲಿ ಹಿಂದೆ ಸರಿಯುವುದಿಲ್ಲ ಎಂದು ಭಾವಿಸುವುದಾಗಿ ಗೌಡರು ತಿಳಿಸಿದರು.
ಶ್ಯಾಾಮನೂರು ಶಿವಶಂಕರಪ್ಪ ಮತ್ತು ತಮ ನಡುವಿನ ಒಡನಾಟ 50 ವರ್ಷಗಳಷ್ಟು ಹಳೆಯದು. ಹಲವಾರು ವಿದ್ಯಾಾಸಂಸ್ಥೆೆ ಸ್ಥಾಾಪನೆ ಮಾಡಿದ್ದಾರೆ. ಅತ್ಯಂತ ಸಂಪನ್ನರು. ಅವರದು ಕೊಡುಗೈ. ಅವರ ಆತಕ್ಕೆೆ ಚಿರಶಾಂತಿ ಸಿಗಲಿ, ಅವರ ಕುಟುಂಬಕ್ಕೆೆ ದುಃಖವನ್ನು ಭರಿಸುವ ಶಕ್ತಿಿ ನೀಡಲಿ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ಸುದ್ದಿಗೋಷ್ಠಿಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಟಿ.ಎ.ಶರವಣ, ಟಿ.ಎನ್.ಜವರಾಯಿಗೌಡ, ವಿಧಾನ ಪರಿಷತ್ ಮಾಜಿ ಸದಸ್ಯರಾದ ತಿಪ್ಪೇಸ್ವಾಾಮಿ, ರಮೇಶ್ಗೌಡ, ಚೌಡರೆಡ್ಡಿಿ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಕೃಷ್ಣಾಾರೆಡ್ಡಿಿ, ಮಹಿಳಾ ಘಟಕದ ಅಧ್ಯಕ್ಷೆ ರಶಿ ರಾಮೇಗೌಡ, ಪಕ್ಷದ ಕಾನೂನು ಘಟಕದ ಅಧ್ಯಕ್ಷ ಎ.ಪಿ. ರಂಗನಾಥ್, ಪಕ್ಷದ ಮುಖಂಡರಾದ ಪ್ರಕಾಶ್ ಮತ್ತಿಿತರರು ಉಪಸ್ಥಿಿತರಿದ್ದರು.

