ಸುದ್ದಿಮೂಲ ವಾರ್ತೆ
ಬೆಂಗಳೂರು ಅ.4: ಜಾತ್ಯತೀತ ಜನತಾದಳ (ಜೆಡಿಎಸ್) ಪಕ್ಷವನ್ನು ತಮ್ಮ ಜನತಾದಳ ಸಂಯುಕ್ತದ (ಜೆಡಿಯು) ಜತೆ ವಿಲೀನಗೊಳಿಸುವಂತೆ ಹಾಗೂ ವಿರೋಧ ಪಕ್ಷಗಳ ಐಎನ್ಡಿಐಎ ಬಣ ಸೇರುವಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಸ್ತಾಪಿಸಿದ್ದರು. ಆದರೆ ಅದನ್ನು ನಿರಾಕರಿಸಿದ್ದಾಗಿ ಜೆಡಿಎಸ್ ವರಿಷ್ಠ ಎಚ್ಡಿ ದೇವೇಗೌಡ ತಿಳಿಸಿದ್ದಾರೆ.
ಖಾಸಗಿ ವಾಹಿನಿಗೆ ನೀಡಿದ ಸಂದರ್ಶದಲ್ಲಿ ಮಾತನಾಡಿದ ಅವರು, ಹಿಂದಿನ ಜನತಾದಳದ ವಿವಿಧ ಗುಂಪುಗಳಾದ ಜೆಡಿಯು- ಜೆಡಿಎಸ್ ಹಾಗೂ ಸಮಾಜವಾದಿ ಪಕ್ಷವನ್ನೂ ಒಳಗೊಂಡಂತೆ ಜನತಾ ಫ್ರೀಡಂ ಫ್ರಂಟ್ ರಚಿಸುವ ಬಯಕೆಯೊಂದಿಗೆ ಸುಮಾರು ಮೂರು ನಾಲ್ಕು ತಿಂಗಳ ಹಿಂದೆ ನಿತೀಶ್ ಕುಮಾರ್ ನನ್ನನ್ನು ಸಂಪರ್ಕಿಸಿದ್ದಾಗಿ ಬಹಿರಂಗಪಡಿಸಿದರು.
ನಾಲ್ಕು ತಿಂಗಳ ಹಿಂದೆ ಜನತಾ ಫ್ರೀಡಂ ಫ್ರಂಟ್ ಪ್ರಸ್ತಾವನೆಯೊಂದಿಗೆ ಸಂಪರ್ಕಿಸಲಾಯಿತು. ಆದರೆ, ತಾವು ಇದಕ್ಕೆ ತಾವು ಒಪ್ಪಲಿಲ್ಲ. ತಮಗೆ ರಾಷ್ಟ್ರೀಯ ಹುದ್ದೆಗಳಲ್ಲಿ ಆಸಕ್ತಿ ಇಲ್ಲ. ಈಗಾಗಲೇ ನನಗೆ 91 ವರ್ಷ ಮತ್ತು ಕಾಂಗ್ರೆಸ್ ನನ್ನನ್ನು ಹೇಗೆ ಕೈಬಿಟ್ಟಿದೆ ಎಂಬುದನ್ನು ನೋಡಿದ್ದೇನೆ. ಈ ವಯಸ್ಸಿನಲ್ಲಿ ನನಗೆ ಯಾವುದೇ ಪ್ರಯೋಗಗಳು ಬೇಡ ಎಂದು ಹೇಳಿದರು. ನನ್ನ ಮನವೊಲಿಸಲು ನಿತೀಶ್ ತಮ್ಮ ಪಕ್ಷದ ಅಧ್ಯಕ್ಷರು ಮತ್ತು ಹಿರಿಯ ನಾಯಕರನ್ನು ಕಳುಹಿಸಿದರು. ಆದರೆ, ನಾನು ಒಪ್ಪಲಿಲ್ಲ. ನಾನು ಅವರಿಗೆ ಹೇಳಿರುವುದಾಗಿ ತಿಳಿಸಿದರು.
ಈ ಹಿಂದೆ ಜೆಡಿಎಸ್ನಲ್ಲಿ ಇದ್ದ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ದೇವೇಗೌಡ, ಸಿದ್ದರಾಮಯ್ಯ ಅವರನ್ನು ನಾನು ರಾಜಕಾರಣಕ್ಕೆ ತಂದಿದ್ದು, ನಾನು ಮತ್ತಷ್ಟು ಚರ್ಚೆ ನಡೆಸಲು ಬಯಸುವುದಿಲ್ಲ. ನಾನು ಸಾಕಷ್ಟು ಅನುಭವಿಸಿದ್ದೇನೆ ಎಂದು ಜೆಡಿಎಸ್, ಬಿಜೆಪಿಯ ‘ಬಿ’ ಟೀಂ ಎಂದು 2018ರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಟೀಕಿಸಿದ್ದರ ಕುರಿತು ಪ್ರತಿಕ್ರಿಯಿಸಿದರು.