ಸುದ್ದಿಮೂಲ ವಾರ್ತೆ ನವದೆಹಲಿ, ಡಿ.19
ಪೌಷ್ಟಿಿಕಾಂಶ ಹೆಚ್ಚು ಇರುವ ಹಣ್ಣುಗಳಾದ ಹುಣಸೆ, ಹಲಸು ಹಾಗೂ ನೇರಳೆ ಹಣ್ಣಿಿನ ಬೆಳೆಗಳಿಗಾಗಿ ಪ್ರತ್ಯೇಕ ರಾಷ್ಟ್ರೀಯ ಮಂಡಳಿ ಸ್ಥಾಾಪಿಸುವಂತೆ ರಾಜ್ಯ ಸಭಾ ಸದಸ್ಯ ಎಚ್.ಡಿ.ದೇವೇಗೌಡ ಅವರು ಮನವಿ ಮಾಡಿದ್ದಾರೆ.
ದೇವೇಗೌಡರು ಈ ಕುರಿತು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಾಣ ಖಾತೆ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದು ಶೀಘ್ರವೇ ಮಂಡಳಿ ಸ್ಥಾಾಪಿಸುವಂತೆ ಒತ್ತಾಾಯಿಸಿದ್ದಾರೆ.
ಸಂಸತ್ ಭವನದಲ್ಲಿ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಾಮಿ ಅವರು ಅವರೊಂದಿಗೆ ಕೃಷಿ ಸಚಿವರನ್ನು ಭೇಟಿಯಾದ ಮಾಜಿ ಪ್ರಧಾನಿಗಳು ತಮ್ಮ ಪ್ರಸ್ತಾಾವನೆ ಕುರಿತ ಪತ್ರವನ್ನು ನೀಡಿದರು.
ಜೆಡಿಎಸ್ನ ಕೋಲಾರ ಸಂಸದ ಮಲ್ಲೇಶ್ ಬಾಬು ಅವರು ಈ ಸಂದರ್ಭದಲ್ಲಿ ಹಾಜರಿದ್ದರು. ರಾಷ್ಟ್ರೀಯ ಹಲಸು ಮಂಡಳಿ ಸ್ಥಾಾಪನೆ ಮಾಡುವಂತೆ ಕೋರಿ ಕೇಂದ್ರದ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮನವಿ ಪತ್ರ ಕೊಡುವ ವೇಳೆ ಎಚ್ಡಿ ದೇವೇಗೌಡ ಅವರು ಶಿಡ್ಲಘಟ್ಟದ ಹಲಸಿನ ಹಣ್ಣನ್ನು ಸಚಿವರಿಗೆ ಉಡುಗೊರೆಯಾಗಿ ನೀಡಿದರು.
ದೆಹಲಿಗೆ ಸಂಸತ್ತು ಕಲಾಪದಲ್ಲಿ ಪಾಲ್ಗೊೊಳ್ಳಲು ತೆರಳುವ ವೇಳೆ ಹಲಸನ್ನು ದೆಹಲಿಗೆ ಕಳುಹಿಸುವಂತೆ ತಮ್ಮ ಪಕ್ಷದ ನಾಯಕರಿಗೆ ಮನವಿ ಮಾಡಿದ್ದರು.

