ಸುದ್ದಿಮೂಲ ವಾರ್ತೆ ಕಲಬುರಗಿ, ಜ.12:
ಕೇಂದ್ರ ಸರ್ಕಾರವು ಮೂರು ಕೃಷಿ ಕಾಯ್ದೆೆಗಳನ್ನು ಹಿಂಪಡೆದಂತೆ, ಈಗ ಜಾರಿಯಲ್ಲಿರುವ ವಿಬಿ ಜಿ ರಾಮ ಜಿ ಕಾಯ್ದೆೆಯನ್ನೂ ಕೂಡ ತಕ್ಷಣವೇ ಹಿಂಪಡೆಯಬೇಕು. ಜನರು ಬೀದಿಗೆ ಇಳಿಯುವ ಮುನ್ನವೇ ಪ್ರಧಾನಿ ನರೇಂದ್ರ ಮೋದಿ ಎಚ್ಚೆೆತ್ತುಕೊಳ್ಳಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ ನೀಡಿದರು.
ಜೇವರ್ಗಿ ವಿಧಾನಸಭಾ ಕ್ಷೇತ್ರದ ಯಡ್ರಾಾಮಿ ಪಟ್ಟಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೆಕೆಆರ್ಡಿ ಬಿ ಆಶ್ರಯದಲ್ಲಿ ಪ್ರಜಾಸೌಧ, ಕೆಪಿಎಸ್ ಶಾಲೆಗಳು ಸೇರಿದಂತೆ ವಿವಿಧ ಇಲಾಖೆಗಳ ಅಭಿವೃದ್ಧಿಿ ಕಾಮಗಾರಿಗಳ ಶಂಕುಸ್ಥಾಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ನೀತಿಗಳನ್ನು ತೀವ್ರವಾಗಿ ಖಂಡಿಸಿದರು.
ಕಲ್ಯಾಾಣಕ್ಕಾಾಗಿ ರೂಪಿಸಿದ್ದ ಮಹತ್ವದ ಮನರೇಗಾ ಯೋಜನೆಯನ್ನು ಇದೀಗ ವಿಬಿ ಜಿ ರಾಮ ಜಿ ಯೋಜನೆಯಾಗಿ ಬದಲಾಯಿಸಲಾಗಿದೆ. ಇದರಿಂದ ಬಡವರ ಹಕ್ಕುಗಳನ್ನು ಮೊಟಕುಗೊಳಿಸುವ ಹುನ್ನಾಾರ ನಡೆದಿದೆ ಎಂದು ಆರೋಪಿಸಿದರು. ಕಾಂಗ್ರೆೆಸ್ ಸರ್ಕಾರಗಳು ಬಡವರ ಹೊಟ್ಟೆೆ ತುಂಬುವ ಕೆಲಸ ಮಾಡಿದರೆ, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಬಡವರ ಹೊಟ್ಟೆೆ ಮೇಲೆ ಒಡೆಯುವ ಕೆಲಸ ಮಾಡುತ್ತಿಿದೆ ಎಂದು ಖರ್ಗೆ ಟೀಕಿಸಿದರು.
ಜನವಿರೋಧಿ ಕಾನೂನುಗಳು ಮತ್ತು ಯೋಜನೆಗಳ ವಿರುದ್ಧ ಸಾರ್ವಜನಿಕರು ಸಂಘಟಿತರಾಗಿ ಪ್ರತಿರೋಧಿಸಬೇಕು ಎಂದು ಕರೆ ನೀಡಿದ ಅವರು, ಒಂದೊಂದೇ ಕಾನೂನು ಮತ್ತು ಯೋಜನೆಗಳನ್ನು ಕಸಿದುಕೊಳ್ಳುವ ಕಾರ್ಯ ನಡೆಯುತ್ತಿಿದೆ ಎಂದು ದೂರಿದರು. ಮೂರು ಕೃಷಿ ಕಾಯ್ದೆೆಗಳಂತೆ ವಿಬಿ ಜಿ ರಾಮ ಜಿ ಕಾಯ್ದೆೆಯನ್ನೂ ಹಿಂಪಡೆಯುವ ಪರಿಸ್ಥಿಿತಿ ಶೀಘ್ರದಲ್ಲೇ ನಿರ್ಮಾಣವಾಗಲಿದೆ ಎಂದು ಹೇಳಿದರು.
ದೇವಾಲಯಗಳಿಗೆ ಹೋಗಿ ಗಂಟೆ, ಜಾಗಟೆ ಬಾರಿಸಿದರೆ ದೇಶದ ಅಭಿವೃದ್ಧಿಿ ಆಗುವುದಿಲ್ಲ. ಅಂತರರಾಷ್ಟ್ರೀಯ ಮಟ್ಟದ ದೊಡ್ಡ ಕೈಗಾರಿಕೆಗಳನ್ನು ತರಬೇಕಾಗಿದ್ದ ಸರ್ಕಾರ, ಜನಕಲ್ಯಾಾಣವನ್ನು ಕಡೆಗಣಿಸಿ ದೇವರ ಹೆಸರಿನಲ್ಲಿ ಹಣ ಲೂಟಿ ಮಾಡುತ್ತಿಿದೆ ಎಂದು ಖರ್ಗೆ ಆರೋಪಿಸಿದರು. ಕೊನೆಗೆ ದೇವರೇ ಜನರ ಕಲ್ಯಾಾಣ ಮಾಡಬೇಕಾದ ಸ್ಥಿಿತಿ ನಿರ್ಮಾಣವಾಗಿದೆ ಎಂದು ವ್ಯಂಗ್ಯವಾಡಿದರು.
ವೋಟ್ ಬ್ಯಾಾಂಕ್ ರಾಜಕಾರಣಕ್ಕಾಾಗಿ ಅಯೋಧ್ಯೆೆ ರಾಮ ಮಂದಿರ ನಿರ್ಮಿಸಲಾಗಿದೆ ಎಂದು ಹೇಳಿದ ಅವರು, ಅಸ್ಸಾಾಂ, ತಮಿಳುನಾಡು, ಪಾಂಡಿಚೆರಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಚುನಾವಣೆ ಸಮೀಪಿಸುತ್ತಿಿರುವಾಗ ಸೋಮನಾಥ ದೇವಾಲಯದ ಜೀರ್ಣೋದ್ಧಾಾರದ ನೆನಪು ಸರ್ಕಾರಕ್ಕೆೆ ಬಂದಿದೆ. ಇಷ್ಟು ವರ್ಷಗಳ ಹಿಂದೆ ಏಕೆ ಈ ವಿಚಾರ ನೆನಪಾಗಲಿಲ್ಲ ಎಂದು ಪ್ರಶ್ನಿಿಸಿದರು.
ಗುಜರಾತ್ ಅಲ್ಲ, ಬಸವಣ್ಣನ ನಾಡು: ಪಂಚಾಯತ್ ಮಟ್ಟದ ಅಭಿವೃದ್ಧಿಿ ಕಾಮಗಾರಿಗಳಿಗೆ ಸ್ಥಳೀಯ ಆಡಳಿತಕ್ಕೆೆ ಅಧಿಕಾರ ಇತ್ತು. ಆದರೆ ಈಗ ಪ್ರತಿಯೊಂದು ಕಾಮಗಾರಿಗೂ ಪ್ರಧಾನಿ ಮೋದಿ ಅವರೇ ಒಪ್ಪಿಿಗೆ ನೀಡಬೇಕು ಎನ್ನುವುದು ಯಾವ ನ್ಯಾಾಯ ಎಂದು ಪ್ರಶ್ನಿಿಸಿದ ಖರ್ಗೆ, ಇದು ಗುಜರಾತ್ ಅಲ್ಲ, ಜಗಜ್ಯೋೋತಿ ಬಸವಣ್ಣನ ನಾಡು ಎಂದು ಹೇಳಿದರು. ಜನರು ತಮ್ಮ ಹಕ್ಕುಗಳಿಗಾಗಿ ಒಗ್ಗಟ್ಟಾಾಗಿ ಹೋರಾಟ ನಡೆಸಬೇಕೆಂದು ಕರೆ ನೀಡಿದರು.
ಸಂವಿಧಾನ ಇರುವುದರಿಂದಲೇ ಜನರಿಗೆ ಮಾತಾಡುವ ಸ್ವಾಾತಂತ್ರ್ಯ ಸಿಕ್ಕಿಿದೆ. ಸಂವಿಧಾನ ವಿರೋಧಿ ಕಾರ್ಯಗಳ ವಿರುದ್ಧ ಪ್ರತಿಭಟಿಸದಿದ್ದರೆ ಸಂವಿಧಾನವೇ ಕೊಲೆ ಆಗುವ ಅಪಾಯವಿದೆ ಎಂದು ಎಚ್ಚರಿಸಿದರು.
ಕಲ್ಯಾಾಣ ಕರ್ನಾಟಕಕ್ಕೆೆ ಅಭಿವೃದ್ಧಿಿ ಅಗತ್ಯ:
ಕಲ್ಯಾಾಣ ಕರ್ನಾಟಕ ಭಾಗ ಅಮೆರಿಕ ಅಥವಾ ಸಿಂಗಾಪುರ ಆಗಬೇಕಿಲ್ಲ. ಮೈಸೂರು, ಚನ್ನಪಟ್ಟಣ ಮಾದರಿಯಲ್ಲಿ ಉತ್ತಮ ಅಭಿವೃದ್ಧಿಿ ಸಾಕು. ನಮ್ಮ ಭಾಗದ ಶೇ.75ರಷ್ಟು ಅಭಿವೃದ್ಧಿಿ ಕಾರ್ಯಗಳು ನಡೆದರೆ ಸಮಗ್ರ ಪ್ರಗತಿ ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಸರ್ಕಾರಕ್ಕೆೆ ತೊಂದರೆ ಎದುರಾಗಲಿದೆ ಎಂದು ಎಚ್ಚರಿಸಿದರು.
ಕಾಮಗಾರಿಗಳಿಗಿಂತಲೂ ಶಿಕ್ಷಣಕ್ಕೆೆ ಹೆಚ್ಚಿಿನ ಮಹತ್ವ ನೀಡಬೇಕು ಎಂದು ಒತ್ತಾಾಯಿಸಿದ ಖರ್ಗೆ, ಈ ಭಾಗದಲ್ಲಿ ಖಾಲಿ ಉಳಿದಿರುವ ಸುಮಾರು 10 ಸಾವಿರ ಶಿಕ್ಷಕರ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಬೇಕು. ನಂತರ ರಾಜ್ಯಮಟ್ಟದ ಶಿಕ್ಷಕ ನೇಮಕಾತಿಗೆ ಮುಂದಾಗಬೇಕು ಎಂದು ಮನವಿ ಮಾಡಿದರು. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿಿನ ಒತ್ತು ನೀಡಿದರೆ ಮಾತ್ರ ನಿಜವಾದ ಅಭಿವೃದ್ಧಿಿ ಸಾಧ್ಯ ಎಂದು ಅಭಿಪ್ರಾಾಯಪಟ್ಟರು.
ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಅಗತ್ಯ ವಿಬಿ ಜಿ ರಾಮ ಜಿ ಕಾಯ್ದೆ ತಕ್ಷಣ ಹಿಂಪಡೆಯಬೇಕು: ಮಲ್ಲಿಕಾರ್ಜುನ ಖರ್ಗೆ

