ಸುದ್ದಿಮೂಲ ವಾರ್ತೆ
ಮಾಲೂರು, ಜು 17 : ಸರ್ಕಾರ ಮತ್ತು ದಾನಿಗಳಿಂದ ಸಿಗುವ ಸಹಕಾರ ಸಹಾಯಗಳನ್ನು ಸದುಪಯೋಗ ಪಡಿಸಿಕೊಂಡು ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳು ಶೈಕ್ಷಣಿಕವಾಗಿ ಸಮಾಜದ ಮುಖ್ಯ ವಾಹಿನಿಗೆ ಬರುವoತೆ ಶಾಸಕ ಕೆ. ವೈ ನoಜೇಗೌಡ ಹೇಳಿದರು.
ತಾಲ್ಲೂಕಿನ ಮಾಸ್ತಿ ಹೋಬಳಿಯ ಮಲಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಡಾ. ಕಿರಣ್ ಸೋಮಣ್ಣ ಚಾರಿಟಬಲ್ ಟ್ರಸ್ಟ್ ವತಿಯಿಂದ ದತ್ತು ಪಡೆದು ಪುನರ್ಚೇತಗೊಳಿಸಿದೆ.
ಬಳಿಕ ಮಾತನಾಡಿದ ಶಾಸಕ ವೈ.ನಂಜೇಗೌಡ, ಸರ್ಕಾರಿ ಶಾಲೆಗಳಲ್ಲಿ ಓದಿದವರೆಲ್ಲಾ ದೊಡ್ಡ ದೊಡ್ಡ ಹುದ್ದೆ ಮತ್ತು ವ್ಯಕ್ತಿಗಳಾಗಿದ್ದಾರೆ. ಸರ್ಕಾರಿ ಶಾಲೆಗಳು ಹಾಗೂ ಶಾಲಾ ಶಿಕ್ಷಕರು ಯಾವುದರಲ್ಲೂ ಕಡಿಮೆ ಇಲ್ಲ. ಖಾಸಗಿ ಶಾಲೆಗಳನ್ನು ಮೀರಿಸುವಂತಿವೆ. ಮಾಲೂರು ತಾಲೂಕಿನಲ್ಲಿ ಹೆಚ್ಚಾಗಿ ಸರ್ಕಾರಿ ಶಾಲೆಗೆ ಹೋಗುವ ಮಕ್ಕಳು ಮಾಸ್ತಿ ಹೋಬಳಿಯಲ್ಲಿದ್ದಾರೆ.
ಖಾಸಗಿ ಶಾಲೆಗಳ ವ್ಯಮೋಹವಿರುವ ಇಂತಹ ಕಾಲದಲ್ಲೂ ಗಡಿ ಭಾಗವಾದ ಮಲಕನಹಳ್ಳಿ ಸರ್ಕಾರಿ ಶಾಲೆಯಲ್ಲಿ 63 ಮಕ್ಕಳು ಓದಲು ಬರುತ್ತಾರೆ ಎಂದರೆ ಹೆಮ್ಮೆ ಪಡಬೇಕಿದೆ. ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳಸಲು ಮೂಲಭೂತ ಸೌಕರ್ಯಗಳು ಅತಿಅವಶ್ಯಕ ಅವುಗಳನ್ನು ಸರ್ಕಾರದ ಜೊತೆಗೆ ಕಿರಣ್ ಸೋಮಣ್ಣ ನಂತಹ ಯುವ ದಾನಿಗಳುಸಹಾಯ ಮಾಡಲು ಮುಂದಾಗುತ್ತಿದ್ದಾರೆ. ದಾನಿಗಳ ಸಹಾಯ ಸಹಕಾರಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಸಾರ್ವಕನಿಕ ಶಿಕ್ಷಣ ಇಲಾಖೆ ಯ ಜಿಲ್ಲಾ ಉಪನಿರ್ದೇಶಕ ರಾಮಚಂದ್ರಪ್ಪ ಮಾತನಾಡಿ, ಗ್ರಾಮಗಳಲ್ಲಿ ಸರ್ಕಾರಿ ಶಾಲೆಗಳು ದೇವಾಲಯದ ಕಳಶವಿದ್ದಂತೆ, ಶಾಲಾ ಆವರಣಗಳಲ್ಲಿ ಸ್ವಚ್ಚತೆ ಕಾಪಾಡಿಕೊಂಡು ಸಂಜೆ ಸಮಯಗಳಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಮೂಲಕ ಶಾಲೆ, ಸರ್ಕಾರಿ ಸತ್ತುಗಳನ್ನು ಕಾಪಾಡಿಕೊಳ್ಳಬೇಕಾದ ಅಗತ್ಯವಿದೆ ಎಂದರು.
ದಾನಿ ಡಾ.ಕಿರಣ್ ಸೋಮಣ್ಣ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಶಿಥಿಲಗೊಂಡ ಸರ್ಕಾರಿ ಶಾಲೆಗಳನ್ನು ಪುನರ್ ಚೇತನಗೊಳಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಶಿಥಿಲಗೊಂಡಿದ್ದ ಮಲಕನಹಳ್ಳಿ ಸರ್ಕಾರಿ ಶಾಲೆಯನ್ನುಪುನರ್ ಚೇತನಗೊಳಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅವಕಾಶಕಲ್ಪಿಸಿಕೊಡಲಾಗಿದೆ ಎಂದರು.
ಕೆಪಿಸಿಸಿ ಸದಸ್ಯ ಅಂಜನಿ ಸೋಮಣ್ಣ, ಮಾಸ್ತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್. ಎಂ ವಿಜಯ ನರಸಿಂಹ, ಕಸಾಪ ತಾಲೂಕು ಅಧ್ಯಕ್ಷ ಎಂ.ವಿ ಹನುಮಂತಯ್ಯ, ಬಿ. ಇ. ಒ ಚಂದ್ರಕಲಾ, ಗ್ರಾ. ಪಂ ಸದ್ಯಸರಾದ ಸೀನಪ್ಪ, ಮಂಜುನಾಥ್, ಶಾಲಾ ಸಮಿತಿ ಅಧ್ಯಕ್ಷ, ಸದ್ಯಸರು, ಮುಖ್ಯ ಶಿಕ್ಷಕಶಿವಕುಮಾರ್ ,ಬಿ ಆರ್ ಸಿ ನಜುಂಡೇಗೌಡ, ಸಿ ಆರ್. ಪಿ ಉಮಾದೇವಿ ಮುಖಂಡರಾದ ಬಾಳಿಗಾನಹಳ್ಳಿ ಶ್ರೀನಿವಾಸ್, ಗೋಪಾಲಪ್ಪ, ಶೆಟ್ಟಹಳ್ಳಿ ರಾಮೂರ್ತಿ, ಬೇಡಶೆಟ್ಟಹಳ್ಳಿ ರಮೇಶ, ಹಾಲು ಡೈರಿ ಅಧ್ಯಕ್ಷ ಮುನಿರಾಜು,ಅಂಜಿನಿ ಭರತ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.