ಸುದ್ದಿಮೂಲ ವಾರ್ತೆ ಸಿಂಧನೂರು, ಜ.17:
ಸಿಂಧನೂರು ಜಿಲ್ಲಾಾ ಕೇಂದ್ರವಾಗಿ ಮಾಡಲು ಈಗಾಗಲೇ ಒಕ್ಕೊೊರಲಿನ ಧ್ವನಿ ವ್ಯಕ್ತವಾಗುತ್ತಿಿದ್ದು, ಜನವರಿ 22ರಿಂದ 31ರವರೆಗೆ ನಡೆಯುವ ವಿಧಾನಮಂಡಲದ ವಿಶೇಷ ಅಧಿವೇಶನದಲ್ಲಿ ವಿಧಾನಸಭಾ ಹಾಗೂ ಪರಿಷತ್ ಶಾಸಕರು ಈ ಬಗ್ಗೆೆ ಧ್ವನಿ ಎತ್ತಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಾ ಉಪಾಧ್ಯಕ್ಷ ದೇವೇಂದ್ರಗೌಡ ಆಗ್ರಹಿಸಿದ್ದಾಾರೆ.
ನಗರದ ಪತ್ರಿಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಿಯನ್ನುದ್ದೇಶಿಸಿ ಅವರು ಮಾತನಾಡಿದರು. ಸಿಂಧನೂರು ತಾಲೂಕು ಕೇಂದ್ರ ರಾಯಚೂರು, ಕೊಪ್ಪಳ, ಬಳ್ಳಾಾರಿ, ವಿಜಯನಗರ ಜಿಲ್ಲೆೆಗಳ ಮಧ್ಯಭಾಗದಲ್ಲಿದ್ದು, ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಹೊಂದುವ ಮೂಲಕ ತೀವ್ರಗತಿಯಲ್ಲಿ ಬೆಳೆಯುತ್ತಿಿದೆ. ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ವಿಶಿಷ್ಠತೆ ಹೊಂದಿದ್ದು, ತಾಲೂಕಿನಲ್ಲಿ ವಿವಿಧ ರಾಜ್ಯಗಳ ವಿವಿಧ ಸಂಸ್ಕೃತಿಗಳ ಜನರು ಬದುಕು ಕಟ್ಟಿಿಕೊಳ್ಳುವುದರ ಜೊತೆಗೆ ಸಂತೃಪ್ತ ಜೀವನ ನಡೆಸುತ್ತಿಿದ್ದಾಾರೆ. ಜಿಲ್ಲಾಾ ಕೇಂದ್ರದ ಅನಿವಾರ್ಯತೆ, ಅರ್ಹತೆಯಿದೆ. ಜಿಲ್ಲಾಾ ಕೇಂದ್ರವಾಗಿಸುವ ನಿಟ್ಟಿಿನಲ್ಲಿ ಡಿಪ್ಲೊೊಮಾ ಕಾಲೇಜು, ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು ಹಾಗೂ ಜಿಲ್ಲಾಾ ಆಸ್ಪತ್ರೆೆಯ ಅಗತ್ಯತೆ ಇದ್ದು, ಈ ಬಗ್ಗೆೆ ಗಮನಹರಿಸಬೇಕು ಎಂದು ಹೇಳಿದರು.
2019 ರಿಂದಲೇ ಕರವೇ ಸಿಂಧನೂರು ಜಿಲ್ಲಾಾ ಕೇಂದ್ರ ಮಾಡಬೇಕು ಎಂದು ನಿರಂತರವಾಗಿ ಹೋರಾಟ, ಮನವಿಪತ್ರ ನೀಡುತ್ತಾಾ ಬಂದಿದೆ. ಸಿಂಧನೂರು ಜಿಲ್ಲಾಾ ಕೇಂದ್ರದ ಬಗ್ಗೆೆ ಸರಕಾರ ಒಂದು ಹೆಜ್ಜೆೆ ಮುಂದೆ ಇಟ್ಟಿಿದೆ. ಈಗಾಗಲೇ ಸರಕಾರ ವಿಭಾಗೀಯ ಅಧಿಕಾರಿಗಳಿಂದ ವರದಿ ಕೇಳಿದ್ದು ಆಶಾದಾಯಕ ಸಂಗತಿಯಾಗಿದೆ ಎಂದರು.
ಸಿಂಧನೂರು ಜಿಲ್ಲಾಾ ಕೇಂದ್ರವಾಗಿ ಮಾಡುವ ನಿಟ್ಟಿಿನಲ್ಲಿ ಕರವೇ ಈಗಾಗಲೇ ಒಂದು ಹೆಜ್ಜೆೆ ಮುಂದೆ ಇಟ್ಟಿಿದೆ. ಮಸ್ಕಿಿ ಹಾಗೂ ಲಿಂಗಸ್ಗೂರು ಕರವೇ ಘಟಕಗಳ ಪದಾಧಿಕಾರಿಗಳನ್ನು ಸಂಪರ್ಕ ಮಾಡಿ, ಅಲ್ಲಿನ ಶಾಸಕರು, ಮಾಜಿ ಶಾಸಕರು, ವಿವಿಧ ಪಕ್ಷಗಳ ಮುಖಂಡರ, ಸಂಘಟನೆಗಳ ಮುಖಂಡರ ಸಭೆ ಮಾಡುವಂತೆ ಪ್ರಸ್ತಾಾಪ ಇಟ್ಟಿಿದ್ದೇವೆ. ಇದಕ್ಕೆೆ ಅವರು ಸಮ್ಮತಿಸಿದ್ದಾಾರೆ ಎಂದರು.
ಜಿಲ್ಲಾಾ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ, ತಾಲೂಕಾಧ್ಯಕ್ಷ ಎಲ್.ರಾಜಾಸಾಬ್ ಗಾಂಧಿನಗರ, ನಗರ ಘಟಕದ ಅಧ್ಯಕ್ಷ ಆರ್.ಎಕ್ಸ್.ಸುರೇಶ, ತಾಲೂಕು ಉಪಾಧ್ಯಕ್ಷ ಬಸವರಾಜ, ಎಸ್.ಎಸ್.ಪಾಷಾ ಇನ್ನಿಿತರರು ಇದ್ದರು.
ಸಿಂಧನೂರು ಜಿಲ್ಲಾ\ಕೇಂದ್ರ : ಪಕ್ಕದ ತಾಲೂಕುಗಳ ಮನವೊಲಿಕೆ ಪ್ರಯತ್ನ ವಿಶೇಷ ಅಧಿವೇಶನದಲ್ಲಿ ಶಾಸಕರು ಧ್ವನಿ ಎತ್ತಲಿ – ದೇವೇಂದ್ರಗೌಡ

