ಸುದ್ದಿಮೂಲ ವಾರ್ತೆ ರಾಯಚೂರು , ಡಿ.03:
ತಾಲೂಕಿನ ಕಾಡ್ಲೂರು ಗ್ರಾಾಮದ ಕೃಷ್ಣ ನದಿ ತೀರದ ವನವಾಸಿ ರಾಮದೇವರ ಹಾಗೂ ಶ್ರೀ ಉಪೇಂದ್ರತೀರ್ಥ ಕರಾರ್ಚಿತ ಶ್ರೀ ಮುಖ್ಯಪ್ರಾಾಣ ದೇವರ, ಸ್ವಯಂಭು ರುದ್ರದೇವರ ಸನ್ನಿಿಧಾನದಲ್ಲಿ ಭಕ್ತಿಿ ಹಾಗೂ ವೈಭವದಿಂದ ಶ್ರೀ ಹನುಮದ್ ವ್ರತ ಕಾರ್ಯಕ್ರಮ ನೆರವೇರಿತು.
ಬೆಳಿಗ್ಗೆೆ ಧ್ವಜಾರೋಹಣ, ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ ,ವಿಶೇಷ ಪೂಜೆ ಹಾಗೂ ಹನುಮದ್ ವ್ರತ ಕಥಾ ಶ್ರವಣ , ಶ್ರೀ ವನವಾಸಿ ರಾಮದೇವರಿಗೆ, ಶ್ರೀ ಉಪೇಂದ್ರತೀರ್ಥ ಕರಾರ್ಚಿತ ಶ್ರೀ ಮುಖ್ಯಪ್ರಾಾಣ ದೇವರಿಗೆ ಹಾಗೂ ಶ್ರೀ ಸ್ವಯಂಭೂ ರುದ್ರ ದೇವರಿಗೆ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು.
ಪಲ್ಲಕ್ಕಿಿ ಉತ್ಸವ, ದೀಪೋತ್ಸವ, ಮಂಗಳಾರತಿ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಕಾಡ್ಲೂರು ಸಂಸ್ಥಾಾನದ ರಂಗರಾವ್ದೇಸಾಯಿ, ಜಯಕುಮಾರ ದೇಸಾಯಿ, ವಿಜಯ ಕುಮಾರ ದೇಸಾಯಿ, ವೆಂಕೋಬಾಚಾರ ಪುರೋಹಿತ, ದಾಮೋದರ ಆಚಾರ ಪುರೋಹಿತ, ಮಹಾದೇವ, ಸೂಗಪ್ಪ, ಚಂದ್ರು ಸಾಹುಕಾರ, ಶ್ರೀನಿವಾಸ, ಶಿವಪ್ಪ, ನಾಗಪ್ಪ, ಕಾಸಿಂ, ಜಮೀರ ಸೇರಿದಂತೆ ಅನೇಕರು ಇದ್ದರು.
ಕಾಡ್ಲೂರಲ್ಲಿ ಭಕ್ತಿಯಿಂದ ಶ್ರೀ ಹನುಮದ್ವ್ರತ ಆಚರಣೆ

