ಸುದ್ದಿಮೂಲ ವಾರ್ತೆ
ಹಾಸನ,ನ.5 : ಹಾಸನಾಂಬೆ ದರ್ಶನಕ್ಕೆ ಮೂರನೇ ದಿನವೂ ಭಕ್ತ ಸಾಗರ ಹರಿದುಬಂತು. ಇಂದು ರಜೆ ದಿನವಾದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು.
ಮೂರನೇ ದಿನವೂ ಸಹಸ್ರಾಹರು ಭಕ್ತರು ಮುಂಜಾನೆ 5 ಗಂಟೆಯಿಂದಲೂ ಸರತಿ ಸಾಲಲ್ಲಿ ಹಾಸನಾಂಬೆಯ ದರ್ಶನ ಪಡೆದರು. ಇಂದೂ ಕೂಡಾ ಮಾಜಿ ಸಚಿವ ಮಾಧುಸ್ವಾಮಿ, ಆಂತರಿಕ ಭದ್ರತಾ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಶರತ್ ಚಂದ್ರ ಸೇರಿದಂತೆ ಹಲವು ಗಣ್ಯರು ಕೂಡಾ ತಾಯಿಯ ದರ್ಶನವನ್ನ ಪಡೆದರು.
ಭಾನುವಾರ ರಜಾ ದಿನವಾದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದರ್ಶನಕ್ಕೆ ಆಗಮಿಸಿದ್ರು. ಪವಾಡ ನಡೆಯೋ ಕ್ಷೇತ್ರಕ್ಕೆ ಬಂದಿದ್ದು,ಬಹಳ ಸಂತೋಷವಾಯ್ತು, ಭಕ್ತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಜಿಲ್ಲಾಡಳಿತ ಎಲ್ಲಾ ವ್ಯವಸ್ಥೆಯನ್ನ ಮಾಡಿದ್ದಾರೆ ಎಂದು ಭಕ್ತರು ಹೇಳಿದ್ದಾರೆ.
ಹಾಸನಾಂಬೆ ಜಾತ್ರಾಮಹೋತ್ಸವದ ಅಂಗವಾಗಿ ನಗರದ ಜನರಿಗೆ ಹೆಲಿಕಾಪ್ಟರ್ ಮೂಲಕ ಹಾರಾಡೋದಕ್ಕೆ ಹೆಲಿಟೂರಿಸಂ ವ್ಯವಸ್ಥೆಯನ್ನ ಕಲ್ಪಿಸಿದೆ, ಕಳೆದ ಎರಡು ದಿನಗಳಿಗಿಂತ ಹೆಚ್ಚಾಗಿ ಇಂದು ಜನರ ಹೆಲಿಕಾಪ್ಟರ್ ಅನುಭವನ್ನ ಪಡೆದುಕೊಂಡರು. ಬೆಂಗಳೂರು ಮೂಲದ 76 ವರ್ಷದ ವೃದ್ದೆ ಯುವಕ-ಯುವತಿಯರನ್ನೂ ನಾಚಿಸುವಂತೆ ಪ್ಯಾರಾಗ್ಲೈಡಿಂಗ್ ನಲ್ಲಿ ಹಾರಿದ್ದು, ಎಲ್ಲರ ಗಮನ ಸೆಳೆಯುತು. ಇನ್ನು ಹಾಸನಾಂಬೆಯ ಪವಾಡ ತಿಳಿದು ತಾಯಿಯನ್ನ ನೋಡೋದಕ್ಕೆ ಜನರು ಬಹಳ ಕುತೂಹಲದಿಂದ ಬರ್ತಿದ್ದಾರೆ.