ಸುದ್ದಿಮೂಲ ವಾರ್ತೆ ಕಲಬುರಗಿ, ಜ.03:
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ರಾಜಾರೋಷವಾಗಿ ಅಕ್ರಮ ಚಟುವಟಿಕೆ, ಹೈೈ ಜೀವನ ನಡೆಸುತ್ತಿಿರುವ ವಿಡಿಯೋ ವೈರಲ್ ಬಳಿಕ, ಖುದ್ದು ಕಾರಾಗೃಹಕ್ಕೆೆ ಭೇಟಿ ನೀಡಿದ ಕಾರಾಗೃಹದ ಡಿಜಿಪಿ ಅಲೋಕ್ ಕುಮಾರ್ ಸುಮಾರು 4 ಗಂಟೆಗೂ ಅಧಿಕ ಸೆರೆಮನೆಯ ಪ್ರತಿಯೊಂದು ಸೆಲ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಲಬುರಗಿ ಕಾರಾಗೃಹದ ಕೈದಿಗಳು ಬಿಂದಾಸ್ ಆಗಿ ಕಂತೆ ಕಂತೆ ಹಣಗಳಿಂದ ಜೂಜಾಟದಲ್ಲಿ ತೊಡಗಿರುವ ವಿಡಿಯೋ ವೈರಲ್ ಆಗಿದ್ದೆ ತಡ, ಕಾರಾಗೃಹದ ಹೆಚ್ಚುವರಿ ಮಹಾ ನಿರೀಕ್ಷಕ ಆನಂದ ರೆಡ್ಡಿಿ ಮತ್ತು ತಂಡಕ್ಕೆೆ,ಅಕ್ರಮ ಚಟುವಟಿಕೆಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ತಿಳಿಸಿದ್ದಲ್ಲದೇ, ಇಂದು ಖುದ್ದಾಗಿ ಡಿಜಿಪಿ ಅಲೋಕ್ ಕುಮಾರ್ ಕಾರಾಗೃಹಕ್ಕೆೆ ಭೇಟಿ ನೀಡಿ ವಾಸ್ತವಾಂಶಗಳನ್ನು ಅವಲೋಕನ ಮಾಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಕಲಬುರಗಿ ಕಾರಾಗೃಹದ ಅಕ್ರಮ ಚಟುವಟಿಕೆಗಳ ಕುರಿತು ವಿಡಿಯೋ ವೈರಲ್ ಬಳಿಕ ನಾನು ಪರಿಶೀಲನೆಗೆ ಬಂದಿದ್ದು, ಕಾರಾಗೃಹದ ಹೆಚ್ಚುವರಿ ಇನ್ಸ್ಪೆಕ್ಟರ್ ಆನಂದ ರೆಡ್ಡಿಿ ಅವರಿಗೆ ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ತಿಳಿಸಲಾಗಿದೆ. ತನಿಖೆಯ ಬಳಿಕ ಬರುವ ವರದಿಯನ್ನು ಸರ್ಕಾರಕ್ಕೆೆ ಸಲ್ಲಿಸಲಾಗುವುದು ಎಂದು ಹೇಳಿದರು.
ಈಗಾಗಲೇ ಜೈಲಿನಲ್ಲಿ ನಡೆಯುವ ಎಲ್ಲಾ ರೀತಿಯ ಅಕ್ರಮ ಚಟುವಟಿಕೆ ಹಾಗೂ ಕೈದಿಗಳ ಕಿರಿಕಿರಿ ಸೇರಿದಂತೆ ಎಲ್ಲಾ ರೀತಿಯಲ್ಲೂ ತನಿಖೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜ.20 ಒಳಗಾಗಿ ಮತ್ತೊೊಮ್ಮೆೆ ಕಾರಾಗೃಹಕ್ಕೆೆ ಭೇಟಿ ನೀಡಿ ಅಂತಿಮ ವರದಿ ನೀಡುವಂತೆ ತಿಳಿಸಲಾಗಿದ್ದು, ಏನೆಲ್ಲಾ ಲೋಪದೋಷ, ದೂರುಗಳಿವೆ ಎಲ್ಲದರ ಕುರಿತು ಸಮಗ್ರ ತನಿಖೆ ನಡೆಸಿದ ಬಳಿಕವಷ್ಟೇ ಸರ್ಕಾರಕ್ಕೆೆ ವರದಿ ಸಲ್ಲಿಸಲಾಗುವುದು ಎಂದ ಅವರು,ಯಾರೇ ತಪ್ಪುು ಮಾಡಿದರೂ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ವೈರಲ್ ವಿಡಿಯೋ ಬಗ್ಗೆೆ ಪರಿಶೀಲನೆ :
ಕೆಲ ದಿನಗಳ ಹಿಂದೆ ಜೈಲಿನಲ್ಲಿ ಕೈದಿಗಳ ಹೈೈ ಜೀವನದ ವಿಡಿಯೋ ಹೊಸದೇ ಅಥವಾ ಹಳೆದಾ ಎಂಬುದರ ಕುರಿತು ಸಮಗ್ರವಾಗಿ ಪರಿಶೀಲಿಸಲಾಗುವುದು. ವಿಡಿಯೋ ಕುರಿತು ಈಗಲೇ ಏನನ್ನು ಹೇಳಲಾಗದು.ಯಾರಾದರೂ ಉದ್ದೇಶಪೂರ್ವಕವಾಗಿ ವಿಡಿಯೋ ಮಾಡಿದ್ದಾರಾ.? ಅಥವಾ ವಿಡಿಯೋಗೆ ಯಾರಾದರೂ ಕಾರಣೀಭೂತರಾ ಎಂಬುದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಡಿಜಿಪಿ ಅಲೋಕ್ ಕುಮಾರ್ ಸ್ಪಷ್ಟಪಡಿಸಿದರು.
ಅಧಿಕಾರಿಗಳು ಶಾಮೀಲಾಗಿದ್ರೆೆ ಕ್ರಮ:
ಈ ಹಿಂದೆಯೂ ಕೆಲವು ಜನ ಹಲವು ದೂರುಗಳನ್ನು ನೀಡಿದ್ದಾರೆ.ಅವುಗಳ ಕುರಿತು ಪರಿಶೀಲನೆಗೂ ಹೇಳಲಾಗಿದೆ.ಒಂದು ವೇಳೆ ತನಿಖೆ ವೇಳೆ ಯಾರದೇ ತಪ್ಪುು ಕಂಡುಬರಲಿ,ಅದು ಅಧಿಕಾರಿಗಳಾಗಿದ್ದರು ಅಂತವರ ವಿರುದ್ಧ ಕ್ರಮ ವಹಿಸಲಾಗುವುದು.ಇದೀಗ ನಾನು ಇಲ್ಲಿ ತನಿಖಾಧಿಕಾರಿ ಅಥವಾ ವಿಚಾರಣಾಧಿಕಾರಿಯಾಗಿ ಬಂದಿಲ್ಲ. ಕಾರಾಗೃಹದ ಮುಖ್ಯಸ್ಥನಾಗಿ ಕಾರಾಗೃಹದ ವ್ಯವಸ್ಥೆೆ ಆಲಿಸಲು ಬಂದಿದ್ದು,ಎಲ್ಲರಿಗೂ ದಕ್ಷ ಪ್ರಾಾಮಾಣಿಕವಾಗಿ ಕೆಲಸ ನಿರ್ವಹಣೆ ಮಾಡುವಂತೆ ಹೇಳಿದ್ದೇನೆ. ಒಂದು ವೇಳೆ ಅಧಿಕಾರಿಗಳ ಕುಮ್ಮಕ್ಕಿಿನಿಂದ ಈ ವಿಡಿಯೋ ಆಗಿದ್ದೆಯಾದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮವಾಗಲಿದೆ ಎಂದರು.
ಕಾರಾಗೃಹಕ್ಕೆೆ ಡಿಜಿಪಿ ಅಲೋಕ್ ಕುಮಾರ್ ಭೇಟಿ, ಪರಿಶೀಲನೆ

