ಸುದ್ದಿಮೂಲ ವಾರ್ತೆ ರಾಯಚೂರು, ಜ.11:
ಕನ್ನಡ ನಾಡು ನುಡಿ ಸಾಂಸ್ಕೃತಿಕವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಜೊತೆಗೆ ಪುಸ್ತಕ ಸಂಸ್ಕೃತಿ ಬೆಳೆಸುವುದು ಎಲ್ಲರ ಹೊಣೆ ಎಂಬುದಕ್ಕೆೆ ನಿವೃತ್ತ ಉದ್ಯೋೋಗಿ ಬಶೀರ್ ಅಹ್ಮದ್ ಹೊಸಮನಿ ನಿದರ್ಶನ ಎಂದು ಸಾಹಿತಿ ವೀರ ಹನುಮಾನ ಹೇಳಿದರು.
ಎಸ್ ಆರ್ ಕೆ ಬಿ ಎಡ್ ಶಿಕ್ಷಣ ಮಹಾವಿದ್ಯಾಾಲಯದ ಟ್ಯಾಾಗೋರ ಭವನದಲ್ಲಿ ಹೊಸಮನಿ ಪ್ರಕಾಶನದಿಂದ ರಾಯಚೂರು ಜಿಲ್ಲಾ ಹನಿಗವನ ಸಂಕಲನ ಧನಿಗೂಡು ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದರು. ಕನ್ನಡ ಸಾಹಿತ್ಯದ ಕಾವ್ಯ, ನಾಟಕ, ಕಥೆಗಳು ಇತ್ಯಾಾದಿ ಪ್ರಕಾರಗಳಲ್ಲಿ ಇತಿಹಾಸ ಮತ್ತು ಪಂಚಾಯಿತಿ ಸಾಹಿತ್ಯ ಕೃಷಿಯ ಕೃತಿಗಳನ್ನು ಮಾಡುತ್ತಿಿರುವ ಬಶೀರ್ ಅಹ್ಮದ್ ಅವರು ಸಾಹಿತ್ಯ ಲೋಕಕ್ಕೆೆ ಒಂದು ವರದಾನವಾಗಿದ್ದು. ಜಿಲ್ಲೆಯ ಸಾಹಿತ್ಯ ವಲಯದಲ್ಲಿ ಯುವಕರಿಗೆ ಮಾರ್ಗದರ್ಶನ ನೀಡುತ್ತ ಮುನ್ನಡೆಯುತ್ತಿಿದ್ದಾಾರೆ ಎಂದರು.
ಈ ಕವನ ಸಂಕಲನದಲ್ಲಿ ವಿಶೇಷವಾಗಿ ಯುವ ಬರಹಗಾರರಿಗೆ ಒಂದು ಉತ್ತಮ ವೇದಿಕೆಯಾಗಿದೆ, 94 ಕವನಗಳು ಗೂಡಿ ಧನಿ ಗೂಡಾಗಿ ಪುಸ್ತಕ ರೂಪದಲ್ಲಿ ಹೊರಬಂದಿದೆ ಎಂದು ಹೇಳಿದರು.
ರಾಮಚಂದ್ರಪ್ಪ ಬರಗೂರು ಅವರು ರಾಯಚೂರು ಬಗ್ಗೆೆ ವಿಶೇಷ ಅಭಿಮಾನ ಹೊಂದಿ ಪ್ರತಿ ತಿಂಗಳು 8-10 ಕೃತಿಗಳು ನೀವು ಹೊರ ತರುತ್ತಿಿರುವುದು ಸಾಹಿತ್ಯ ಲೋಕಕ್ಕೆೆ ಉತ್ತಮ ಕೊಡುಗೆಯಾಗಿದೆ ಎಂದು ಅಭಿಮಾನ ವ್ಯಕ್ತಪಡಿಸಿದ್ದರು ಎಂದು ಸ್ಮರಿಸಿದರು.
ಕೃತಿ ಲೋಕಾರ್ಪಣೆ ಮಾಡಿದ ಕನ್ನಡ ಸಾಹಿತ್ಯ ಪರಿಷತ್ತಿಿನ ಮಾಜಿ ಅಧ್ಯಕ್ಷ ಮಹಾಂತೇಶ್ ಮಸ್ಕಿಿ ಮಾತನಾಡಿ, ಹಿರಿಯ ಮತ್ತು ಕಿರಿಯ ಕವಿಗಳನ್ನು ಕವಿಯತ್ರಿಿಯರನ್ನು ಗುರುತಿಸಿ ಅವರಿಂದ ಕವನಗಳನ್ನು ಸಂಗ್ರಹಿಸಿ ಅದು ಅನೇಕ ಕವನವಾಗಿ ರೂಪಾಂತರಿಸಿ, ಧನಿಗೂಡು ಎನ್ನುವ ಒಂದು ಉತ್ತಮ ಸಂಕಲನ ಯುವ ಬರಹಗಾರರಿಗೆ ಪ್ರೇೇರಣೆಯೊಂದಿಗೆ ಆತ್ಮಸ್ಥೈರ್ಯ ತುಂಬಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಕವಿ ವೈಬಿ ಹಾಲಬಾವಿ ಕೃತಿ ಕುರಿತು, ಕರ್ನಾಟಕ ವಿಕಾಸರಂಗ ಜಿಲ್ಲಾಧ್ಯಕ್ಷ ಭೀಮನಗೌಡ ಇಟಗಿ, ಗಡಿನಾಡು ಕನ್ನಡ ಸಂಘ ಅಧ್ಯಕ್ಷ, ಕ್ಷೇತ್ರ ಶಿಕ್ಷಣಾಧಿಕಾರಿ ನಿಜಾಮುದ್ದೀನ್, ಜಿಲ್ಲಾ ಕನ್ನಡ ಕ್ರಿಿಯಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಮಣ್ಣ ಮ್ಯಾಾದಾರ, ಹೊಸಮನಿ ಪ್ರಕಾಶದ ಅಧ್ಯಕ್ಷ ಬಶೀರ್ ಅಹ್ಮದ್ ಹೊಸಮನಿ, ಪ್ರಕಾಶನದ ಸಲಹೆಗಾರರಾದ ಶಿಕ್ಷಕಿ ಶಂಶಾದ್ ಬೇಗಂ ಮಾತನಾಡಿದರು.
ಈ ಕಾರ್ಯಕ್ರಮಕ್ಕೆೆ ಹಿರಿಯ ಮತ್ತು ಕಿರಿಯ ಸಾಹಿತಿಗಳು ಕನ್ನಡ ಅಭಿಮಾನಿಗಳು ಇದ್ದರು.
ಧನಿಗೂಡು ಕೃತಿ ಲೋಕಾರ್ಪಣೆ ಪುಸ್ತಕ ಸಂಸ್ಕೃತಿ ಬೆಳೆಸುವಲ್ಲಿ ಬಶೀರ್ ಅಹ್ಮದ್ ಕಾರ್ಯಕ್ಕೆ ವೀರಹನುಮಾನ ಮೆಚ್ಚುಗೆ

