ಸುದ್ದಿಮೂಲ ವಾರ್ತೆ ಧರ್ಮಸ್ಥಳ, ನ.20:
ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂದು ಸಾಕ್ಷಿದಾರ ಚಿನ್ನಯ್ಯ ನೀಡಿದ ದೂರಿನ ಹಿನ್ನೆೆಲೆಯಲ್ಲಿ ಪ್ರಕರಣದ ತನಿಖೆ ನಡೆಸಿದ ವಿಶೇಷ ತನಿಖಾ ತಂಡ ಗುರುವಾರ ಬೆಳ್ತಂಗಡಿ ಹೆಚ್ಚುವರಿ ನ್ಯಾಾಯಾಲಯಕ್ಕೆೆ ಅಂದಾಜು 3923 ಪುಟಗಳ ದೋಷಾರೋಪ ಪಟ್ಟಿಿಯನ್ನು ಸಲ್ಲಿಸಿತು.
ಧರ್ಮಸ್ಥಳದ ನೇತ್ರಾಾವತಿ ನದಿ ದಡ ಹಾಗೂ ಇತರ ಸ್ಥಳಗಳಲ್ಲಿ ನೂರಾರು ಶವಗಳನ್ನು ಅಕ್ರಮವಾಗಿ ಹೂಳಲಾಗಿದೆ. ಇವುಗಳು ಅಸಹಜ ಸಾವುಗಳಾಗಿವೆ ಎಂದು ಚಿನ್ನಯ್ಯ ಕೋರ್ಟ್ ಮುಂದೆ ಹೇಳಿಕೆ ನೀಡಿದ್ದರು.
ಇದನ್ನು ಆಧರಿಸಿ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚನೆ ಮಾಡಿತ್ತು. ಹಿರಿಯ ಐಎಎಸ್ ಅಧಿಕಾರಿ ತನಿಖಾ ತಂಡದ ಮುಖ್ಯಸ್ಥರಾಗಿ ತನಿಖೆ ನಡೆಸಿದ್ದಾರೆ.
ವಿಶೇಷ ತನಿಖಾ ತಂಡ ಸಲ್ಲಿಸಿರುವ ವರದಿ ಕುರಿತು ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಮಾಹಿತಿ ನೀಡಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದರು.

